Cinisuddi Fresh Cini News 

ಉತ್ತರಪ್ರದೇಶದಲ್ಲಿ “ಭೈರವ”ನಿಗೆ ಚಾಲನೆ

“ಭೈರವ” ಚಿತ್ರದ ಶೀರ್ಷಿಕೆ ಅನಾವರಣ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು.ಸುಗ್ಗಿ ಹಬ್ಬದ ಸುಸಂದರ್ಭದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಉತ್ತರ ಪ್ರದೇಶದ ಗೋವಿಂದ ಪುರದ ಹನುಮಂತನ ಸನ್ನಿಧಿಯಲ್ಲಿ ನೆರವೇರಿದೆ. ರಾಮತೇಜ್ ನಿರ್ದೇಶನದ ಈ ಚಿತ್ರದ ಮೊದಲ ಸನ್ನಿವೇಶಕ್ಕೆ ಚಿದಂಬರ ಕುಲಕರ್ಣಿ ಆರಂಭ ಫಲಕ ತೋರಿದರು.

ವೈಭವ್ ಬಜಾಜ್ ಹಾಗೂ ಹನಿ‌ ಚೌಧರಿ (ವಿಸಿಕಾ ಫಿಲಂ ಸಂಸ್ಥೆ) ಸೇರಿ ಕ್ಯಾಮೆರಾ ಚಾಲನೆ‌ ಮಾಡಿದರು. ಉತ್ತರ ಪ್ರದೇಶದ ಬಿಜೆಪಿ ಮುಖಂಡರಾದ ಡಾ||ಮಂಜು ಶಿವಾಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಕಮರೊಟ್ಟು ಚೆಕ್ ಪೋಸ್ಟ್ ಖ್ಯಾತಿಯ ಸನತ್ ಈ ಚಿತ್ರದ ನಾಯಕ. ನಾಯಕಿಯಾಗಿ ಒಂದು ಮೊಟ್ಟೆ ಖ್ಯಾತಿಯ ಶೈಲಶ್ರೀ ಮುಲ್ಕಿ ಹಾಗೂ ಖಳನಾಯಕನಾಗಿ ಉಮೇಶ ಸಕ್ಕರೆನಾಡು ಅಭಿನಯಿಸುತ್ತಿದ್ದಾರೆ.

ಸಂದೀಪ್ ಫ್ರೇಡ್ರಿಕ್ ಛಾಯಾಗ್ರಹಣ, ಕಪಿಲ್ ದೀಕ್ಷಿತ್ ಕ್ರಿಯಾಶೀಲ ನಿರ್ದೇಶನ ಹಾಗೂ ಕರಣ್ ಕ್ಷಿತಿ ಸುವರ್ಣ ಸಹ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರತಂಡದ ಸದಸ್ಯರು ಹಾಗೂ ಮೀರತ್ ನಗರದ ಖ್ಯಾತ ವಕೀಲರಾದ ರಾಜಕುಮಾರ ಗುಪ್ತ ಮತ್ತು ಡಾ.ಸಂಜೀವ ಚೌಧರಿ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Related posts