Cinisuddi Fresh Cini News 

ಸಿನಿಮಾ ಸ್ಕೋಪ್ ನಲ್ಲಿ ಅಣ್ಣಾವ್ರ “ಭಾಗ್ಯವಂತರು”

ಕನ್ನಡಿಗರ ಕಣ್ಮಣಿ, ವರನಟ ಡಾ.ರಾಜ್‍ಕುಮಾರ್ ಅವರು ನಟಿಸಿರುವ ಎರಡು ಕನಸು, ಸತ್ಯಹರಿಶ್ಚಂದ್ರ, ದಾರಿ ತಪ್ಪಿದ ಮಗ, ಮಯೂರ ಸೇರಿದಂತೆ ಹಲವಾರು ಚಿತ್ರಗಳು ಈಗಿನ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆಗೊಂಡು ಅಭಿಮಾನಿಗಳ ಮನಸ್ಸನ್ನು ಮತ್ತೊಮ್ಮೆ ಸೆಳೆಯಿತು.

ಈಗ ಆ ಸಾಲಿಗೆ 70 ರ ದಶಕದಲ್ಲಿ ಬಿಡುಗಡೆಗೊಂಡ ಡಾ.ರಾಜ್‍ಕುಮಾರ್ ಹಾಗೂ ಬಿ.ಸರೋಜಾದೇವಿ ನಟನೆಯ ಭಾಗ್ಯವಂತರು ಕೂಡ 7.1ಡಿಐ ಮತ್ತು ಸಿನಿಮಾ ಸ್ಕೋಪ್ ತಂತ್ರಜ್ಞಾನದೊಂದಿಗೆ ಹೊಸ ರೂಪದಲ್ಲಿ ಅಭಿಮಾನಿಗಳ ಮುಂದೆ ಬರಲಿದೆ.

ಕೊರೊನಾದಿಂದ ಮುಕ್ತಿ ಪಡೆದ ಮೇಲೆ ರಾಜ್ಯದ ಜನರಿಗೆ ಭರ್ಜರಿ ಕೊಡುಗೆ ಕೊಡಲು ಹೊರಟಿದ್ದಾರೆ ಶ್ರೀ ಮುನೇಶ್ವರ ಫಿಲಂಸ್ ಮಾಲೀಕರಾದ ಎಂ.ಮುನಿರಾಜು ಅವರು. ಹೌದು, ನಿಮಗೆ ಎಲ್ಲರಿಗೋಸ್ಕರ ಅವರು ಒಂದು ಹೊಸ ಪ್ರಯತ್ನ ಮಾಡುತ್ತಿದ್ದಾರೆ.

ದ್ವಾರಕೀಶ್ ಚಿತ್ರ ಸಂಸ್ಥೆಯಲ್ಲಿ ತಯಾರಾಗಿ ಸೂಪರ್ ಹಿಟ್ ಆದ ಚಿತ್ರ ಭಾಗ್ಯವಂತರು. ಅದೇ ಚಿತ್ರವನ್ನು ಮತ್ತೆ ಹೊಸ ರೀತಿಯಲ್ಲಿ ಕಿವಿಗಳಿಗೆ ಇಂಪು ಕೊಡುವಂತಹ ಸೌಂಡಿಂಗ್ ರೀತಿಯಲ್ಲಿ ತಯಾರು ಮಾಡಿದ್ದಾರೆ .

ಪದ್ಮಭೂಷಣ, ಕನ್ನಡದ ಮಣ್ಣಿನ ಹೆಮ್ಮೆಯ ಪುತ್ರ ಡಾ.ರಾಜ್‍ಕುಮಾರ್ ಮತ್ತು ಬೊಂಬೆಗಳ ನಾಡಿನ ಕನ್ನಡದ ಬೊಂಬೆ ಬಿ.ಸರೋಜಾದೇವಿ, ಅಶೋಕ್ ಮುಂತಾದವರು ಅಭಿನಯಿಸಿದ್ದಾರೆ.

ಅಂದಿನ ಜನರ ಕಿವಿಗೆ ಇಂಪಾದ ಸಂಗೀತದ ಮಳೆಯನ್ನು ಸುರಿಸಿ ಸಂತೋಷಪಡಿಸಿದವರು ಜೋಡಿ ಜೀವಗಳಾದ ರಾಜನ್-ನಾಗೇಂದ್ರ. ಇಂಪಾದ ಹಾಡುಗಳನ್ನು ರಚಿಸಿದವರು ಕವಿರತ್ನ ಚಿ.ಉದಯ್‍ಶಂಕರ್. ಈ ಚಿತ್ರವನ್ನು ಸುಂದರವಾಗಿ ಜೋಡಿಸಿದವರು ಸಂಕಲನಕಾರರಾದ ಬಾಲ್‍ಜಿ ಯಾದವ್, ನೃತ್ಯ ಸಂಯೋಜನೆ ಉಡುಪಿ ಜಯರಾಂ ದೇವಿ, ಕಣ್ಣಿಗೆ ತಂಪು ನೀಡಿದವರು ಛಾಯಾಚಿತ್ರ ಚಕ್ರವರ್ತಿ ಡಿ.ವಿ.ರಾಜಾರಾಮ್ ಇವರೆಲ್ಲರಿಗೂ ಹಣ ನೀಡಿ ಸೌಕರ್ಯ ಮಾಡಿ ಚಿತ್ರ ನಿರ್ಮಾಣ ಮಾಡಿದವರು ದ್ವಾರಕೀಶ್.

ಇಂಥ ಸುಂದರವಾದ ಗುಂಪನ್ನು ಒಂದುಗೂಡಿಸಿ ತನ್ನ ಕೈ ಚಳಕವನ್ನು ಚೊಚ್ಚಲ ಚಿತ್ರದಲ್ಲಿ ತಾನೊಬ್ಬ ಉತ್ತಮವಾದ ನಿರ್ದೇಶಕನೆಂದು ಸಾಬೀತು ಮಾಡಿದವರು ಭಾರ್ಗವ. ಈ ಚಿತ್ರವನ್ನು ಮತ್ತೆ ಕರ್ನಾಟಕ ಜನರನ್ನು ರಂಜಿಸಲು ತಯಾರಿಸಿ ವಿಶಾಲ ಕರ್ನಾಟಕದ ಪ್ರೇಕ್ಷಕರ ಮುಂದೆ ಭಾಗ್ಯವಂತರ ದರ್ಶನ ಸಿಗಲಿದೆ.

Share This With Your Friends

Related posts