Cinisuddi Fresh Cini News 

50 ದಿನ ಪೂರೈಸಿದ ಸಕ್ಸಸ್ ಸಂಭ್ರಮದಲ್ಲಿ ಬೆಲ್ ಬಾಟಂ ಟೀಮ್


ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರಗಳ ಮೂಲಕ ಯಶಸ್ವೀ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಿಷಭ್ಶೆಟ್ಟ ಬೆಲ್ಬಾಟಂ ಚಿತ್ರದ ಮೂಲಕ ಸಕ್ಸಸ್ ನಟನಾಗಿ ಹೊರಹೊಮ್ಮಿದ್ದಾರೆ.

ರಿಷಭ್ಶೆಟ್ಟಿ ನಟಿಸಿ, ಜಯತೀರ್ಥ ನಿರ್ದೇಶಿಸಿರುವ ರೆಟ್ರೋ ಮಾದರಿಯ ಬೆಲ್ಬಾಟಂ ಚಿತ್ರವು ಅರ್ಧಶತಕ ದಾಖಲಿಸಿದ್ದು ಅದರ ಸಂತಸವನ್ನು ಹಂಚಿಕೊಳ್ಳಲು ಸಂತೋಷಕೂಟವನ್ನು ಏರ್ಪಡಿಸಿದ್ದರು. ಅಲ್ಲಿ ಚಿತ್ರತಂಡದವರು ತಮ್ಮ ಸಂತಸವನ್ನು ಹಂಚಿಕೊಂಡರು.

ಕನ್ನಡ ಚಿತ್ರಗಳು ಇತ್ತೀಚೆಗೆ ಪರಭಾಷಾ ಚಿತ್ರಗಳಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದಿದೆ, ನಮ್ಮ ಈ ಬೆಲ್ಬಾಟಂ ಚಿತ್ರಕ್ಕೆ ತಮಿಳು, ತೆಲುಗಿನಿಂದಲೂ ಭಾರೀ ಬೇಡಿಕೆ ಬಂದಿದ್ದು ತಮಿಳಿಗೆ ರೀಮೇಕ್ ಆದರೆ, ತೆಲುಗಿಗೆ ಡಬ್ಬಿಂಗ್ ಹಕ್ಕುಗಳು ಮಾರಾಟವಾಗಿದೆ.

ಮಲಯಾಳಂ ಚಿತ್ರರಂಗದಿಂದಲೂ ಬೇಡಿಕೆ ಬರುತ್ತಿದೆ. ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದಿಂದ ಬೆಲ್ಬಾಟಂ ಎಂಬ ಉತ್ತಮ ಚಿತ್ರ ಮಾಡಲು ಸಾಧ್ಯವಾದರೆ, ಮಾಧ್ಯಮ ಮಿತ್ರರು ತೋರಿದ ಸಹಕಾರದಿಂದ ನಮ್ಮ ಚಿತ್ರವು 50 ದಿನಗಳ ಪ್ರದರ್ಶನ ಕಂಡಿದೆ.

ಬೆಂಗಳೂರಿನಲ್ಲಿ 38 ಷೋ ಪ್ರದರ್ಶನವಾಗುತ್ತಿದ್ದರೆ, ಮುಂದಿನ ವಾರದಿಂದ ಹೋಬಳಿಗಳಲ್ಲಿ ಬಿಡುಗಡೆ ಮಾಡುವುದಾಗಿ ವಿತರಕ ಜಯಣ್ಣ ಹೇಳಿದ್ದಾರೆ. ಚಿತ್ರದ ಆರಂಭದಿಂದ ಈಗಿನವರೆಗೂ ಚಿತ್ರತಂಡದವರು ಒಟ್ಟಾಗಿರುವುದು ಸಂತಸವಾಗುತ್ತಿದೆ.

ಈ ಚತ್ರದ ಶತದಿನೋತ್ಸವದ ಸಮಾರಂಭವನ್ನು ಆಚರಿಸುವ ಹುಮ್ಮಸ್ಸಿನಲ್ಲಿದ್ದೇವೆ ಎಂದು ನಿರ್ದೇಶಕ ಜಯತೀರ್ಥ ಹೇಳಿದರು.
ನಾನು ಈ ಹಿಂದೆ ಅನುಶ್ರೀ, ಅರುಣ್ಸಾಗರ್ ನಟಿಸಿದ್ದ ಬೆಂಕಿಪೊಟ್ಟಣ್ಣಕ್ಕೆ ಕಥೆ ಒದಗಿಸಿದ್ದರೂ ಒಂದು ರೆಕಗ್ನಿಷನ್ ಸಿಕ್ಕಿರಲಿಲ್ಲ, ಆದರೆ ಬೆಲ್ಬಾಟಂನಲ್ಲಿ ನನ್ನ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎಂದು ಕಥೆಗಾರ ಟಿ.ಕೆ.ದಯಾನಂದ್ ತಮ್ಮ ಸಂತಸವನ್ನು ಹಂಚಿಕೊಂಡರು.

ನಾಯಕ ನಟ ರಿಷಭ್ಶೆಟ್ಟಿ ಮಾತನಾಡಿ, ನನ್ನ ಪಾಲಿಗೆ ಇದು ಹ್ಯಾಟ್ರಿಕ್ ಗೆಲುವು, ಈ ಚಿತ್ರದಲ್ಲಿ ನಟಿಸಿದ ನಂತರ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಈ ಚಿತ್ರದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿರುವವರಿಗೆ ಹಾಗೂ ತಂತ್ರಜ್ಞರಿಗೆ ಕೈ ತುಂಬಾ ಕೆಲಸ ಸಿಕ್ಕದೆ. ಈ ಚಿತ್ರದ ಶತದಿನೋತ್ಸವ ಸಮಾರಂಭಕ್ಕೆ ನೀವೆಲ್ಲ ಬರಬೇಕೆಂದು ನೆರೆದಿದ್ದವರನ್ನು ಆಹ್ವಾನಿಸಿದರು.

ನಿರ್ಮಾಪಕರು ಹಾಕಿಕೊಂಡ ಬಜೆಟ್ನಲ್ಲೇ ಚಿತ್ರ ಮುಗಿದಿರುವುದರಿಂದ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಲು ಹೋಗಿರಲಿಲ್ಲವಾದರೂ ಈಗ ತಮಿಳು, ತೆಲುಗು, ಮಲಯಾಳಂ, ಮರಾಠಿ ಭಾಷೆಗಳಲ್ಲೂ ಬೆಲ್ಬಾಟಂ ಚಿತ್ರ ಸದ್ದು ಮಾಡಲಿದೆ.

ಯೋಗರಾಜ್ಭಟ್ಟರು ಪಂಚತಂತ್ರ ಸಿನಿಮಾ ಪ್ರಚಾರ ಸಲುವಾಗಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪಕ್ಕದ ಪರದೆಯಲ್ಲಿ ನಮ್ಮದು ಪ್ರದರ್ಶನವಾಗುತ್ತಿತ್ತು. ಅಲ್ಲಿಯೂ ಹೋಗಿ ಜನರೊಂದಿಗೆ ಬೆರೆತು ಸಹಕಾರಿಯಾಗಿರುವುದು ಅವರ ದೊಡ್ಡ ಗುಣ.

ಬೆಲ್ಬಾಟಂ ಚಿತ್ರದ ನಂತರ ಜನರು ನನ್ನನ್ನು ಕುಸುಮ ಎಂಬ ಹೆಸರಿನಿಂದಲೇ ಗುರುತಿಸುತ್ತಿದ್ದಾರೆ. ಈ ವರ್ಷದ ಹಿಟ್ ಸಾಲಿನಲ್ಲಿ ನಮ್ಮ ಚಿತ್ರವು ಸೇರಿರುವುದು ಸಂತಸ ತಂದಿದೆ. ರಿಶಬ್ರನ್ನು ಕೂರಿಸಿಕೊಂಡು ಸುವೇಗ ಚಲಾಯಿಸಿದ್ದು ನನ್ನ ಇಷ್ಟದ ದೃಶ್ಯವಾಗಿದೆ.

ಫಿಲಿಂ ಫೇರ್ಗೆ ಸಂಬಂಧಪಟ್ಟಂತೆ ಸೌತ್ ಇಂಡಿಯಾದಲ್ಲಿ ಕನ್ನಡ ಸಿನಿಮಾಕ್ಕೆ ಇದನ್ನು ಸೂಚಿಸಿ, ಭಾರತದ ನಾಯಕಿಯರಿಗೆ ಪೈಕಿ ವೋಟ್ ಮಾಡಿದಂತೆ, ನನ್ನದು ಶೇಕಡ 54 ರಷ್ಟು ಅಂಕಬಂದಿದೆ ಎಂದರು.

ಕಾರ್ಯಕಾರಿ ನಿರ್ಮಾಪಕ ಪ್ರಮೋದ್ಶೆಟ್ಟಿ ಮಾತನಾಡಿ, ನಾನು ಈ ಚಿತ್ರದಲ್ಲಿ ನಟಿಸಿರುವ ಪಾತ್ರವನ್ನು ಟೈಗರ್ ಪ್ರಭಾಕರ್ಗೆ ಪ್ರೇಕ್ಷಕರು ಹೋಲಿಸುತ್ತಿದ್ದಾರೆ. ನಿರ್ಮಾಪಕರು ಎರಡು ಅಂಧಶಾಲೆಗೆ ಐವತ್ತು ಸಾವಿರ ರೂ.ಗಳನ್ನು ಕೊಟ್ಟಿದ್ದಾರೆ.

ರಂಗಭೂಮಿ ಕಲಾವಿದರಿಗೆ ಚಿತ್ರರಂಗದಲ್ಲಿ ಹೇರಳ ಅವಕಾಶಗಳು ಸಿಗುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಹೇಳಿದರು. ಈ ಚಿತ್ರದ ಸಂಭಾಷಣೆಗಳು ನೈಜವಾಗಿರಬೇಕೆಂದು ಹೇಳಿದ್ದರಿಂದ ಅದರ ಚೌಕಟ್ಟಿನಲ್ಲೇ ಡೈಲಾಗ್ಸ್ಗಳನ್ನು ಬರೆದಿದ್ದೇನೆ. ಕತೆ, ಸಿನಿಮಾ ಹೂರಣ ಹೊಸತಾಗಿದ್ದರೆ, ಸಂಭಾಷಣೆಗಳು ಪ್ರೇಕ್ಷಕರ ನಾಲಿಗೆಯಲ್ಲಿ ತೇಲಾಡುತ್ತಿದೆ ಎಂದವರು ಸಂಭಾಷಣೆಗಾರ ರಘುನಿಡುವಳ್ಳಿ.

ನಿರ್ಮಾಪಕ ಸಂತೋಷ್ಕುಮಾರ್.ಕೆ.ಸಿ ಮಾತನಾಡಿ, ಚಿತ್ರವು ಮುಗಿದ ಮೇಲೆ ಯಾರು ಸಿಗದೆ ಕಣ್ಮರೆಯಾಗುತ್ತಾರೆ. ನಮಗೆ ಶುರುವಿನಿಂದ ಇಲ್ಲಿಯತನಕ ನಮ್ಮ ಜೊತೆಗೆ ಇರುವುದು ದೊಡ್ಡ ಶಕ್ತಿ. ಅದಕ್ಕೆ ಈ ಮಟ್ಟದ ಗೆಲುವು ಎನ್ನಬಹುದು.

ಶಿವಮಣಿ, ಸತೀಶ್ಚಂದ್ರ, ಡಿಂಗ್ರಿ, ಸುನಿಲ್. ಛಾಯಾಗ್ರಾಹಕ ಅರವಿಂದ್ಕಶ್ಯಪ್, ಪ್ರೀತಿ, ಕಲಾ ನಿರ್ದೇಶಕ ಧರಣಿ ಮುಂತಾದವರು ಸುಸಂದರ್ಭದಲ್ಲಿ ಹಾಜರಿದ್ದು ಸಂತೋಷವನ್ನು ಹಂಚಿಕೊಂಡರು. ರಿಷಭ್ಶೆಟ್ಟಿ ಮತ್ತು ಹರಿಪ್ರಿಯಾರ ಜೋಡಿಯು ಪ್ರೇಕ್ಷಕರನ್ನು ರಂಜಿಸುತ್ತಿದ್ದು ಈ ಜೋಡಿಯು ಮತ್ತೊಂದು ಚಿತ್ರದಲ್ಲಿ ನಟಿಸುವಂತಾಗಲಿ.

Share This With Your Friends

Related posts