Cinisuddi Fresh Cini News 

ಸ್ಯಾಂಡಲ್ ವುಡ್ “ಬಿಸಿಎಲ್ ಸೀಸನ್- 2″ಗೆ ಚಾಲನೆ

ಕಮರ್ ಫಿಲಂ ಫ್ಯಾಕ್ಟರಿ ಮೂಲಕ ಕಮರ್ ನೇತೃತ್ವದಲ್ಲಿ ಸ್ಯಾಂಡಲ್ ವುಡ್ “ಬಿ ಸಿ ಎಲ್” ಸೀಸನ್ 2 ಆರಂಭವಾಗಲಿದೆ. ಈ ಕುರಿತು ಇತ್ತೀಚೆಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು.ಜಯನಗರ ವಿಧಾನಸಭಾ ಸದಸ್ಯೆ ಸೌಮ್ಯ ರೆಡ್ಡಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಕಳೆದ ನಲವತ್ತೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆ.ಬಿ.ಬಾಬು, ನರ್ಗಿಸ್ ಬಾಬು ಎಂದೇ ಖ್ಯಾತರಾಗಿದ್ದಾರೆ. ಅವರ ಪುತ್ರ ಕಮರ್ ಕೂಡ ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಈ ಟೂರ್ನಿ ಕುರಿತು ಕಮರ್ ಮೊದಲು ಮಾತನಾಡಿದ್ದಾರೆ.

ಮೊನ್ಮೆಯಷ್ಟೇ ಐ ಬಿ ಎಲ್ ಟೂರ್ನಿ ಮುಗಿದಿದೆ. ಡಿಸೆಂಬರ್ ನಲ್ಲಿ ಸ್ಯಾಂಡಲ್ ವುಡ್ ಬಿಸಿಎಲ್ ಸೀಸನ್ 2 ಆರಂಭ ಮಾಡುತ್ತಿದ್ದೇವೆ. ಸದ್ಯಕ್ಕೆ ಒಟ್ಟು 6 ತಂಡಗಳಿದೆ. ಮುಂದೆ ಹೆಚ್ಚಾದರೂ ಆಗಬಹುದು. ಸ್ಯಾಂಡಲ್ ವುಡ್ ನ ಸಾಕಷ್ಟು ಸ್ಟಾರ್ ಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಾರೆ.

ಬೆಂಗಳೂರು, ಮೈಸೂರು, ಹಾಸನ, ದಾವಣಗೆರೆ, ಶಿವಮೊಗ್ಗ, ಮಂಗಳೂರು ಹೀಗೆ ಒಂದೊಂದು ಊರಿನ ಹೆಸರಿನಲ್ಲಿ ಆರು ತಂಡಗಳಿದ್ದು, ಆರು ತಂಡಗಳಿಗೆ ಮಾಲೀಕರಿರುತ್ತಾರೆ. ಅವರೆ ತಮ್ಮ ತಂಡಗಳಿಗೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.ಒಂದು ತಂಡದಲ್ಲಿ ಏಳು ಪುರುಷ ಹಾಗೂ ನಾಲ್ಕು ಮಹಿಳಾ ಆಟಗಾರರಿರುತ್ತಾರೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಕಮರ್ ತಿಳಿಸಿದರು.

ಬೆಂಗಳೂರು ತಂಡದ ಮಾಲೀಕರಾದ ಜಾಕೀರ್ ಹುಸೇನ್, ಪೂಜಾಶ್ರೀ, ಮೈಸೂರು ತಂಡದ ಮಾಲೀಕರಾದ ರಘು, ಗೀತಾಂಜಲಿ, ಹಾಸನ ತಂಡದ ಮಾಲೀಕರಾದ ದಿವ್ಯ – ಪ್ರಸಾದ್ ಹಾಗೂ ದಾವಣಗೆರೆ ತಂಡದ ಮಾಲೀಕರಾದ ವಿಜಯಲಕ್ಷ್ಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡರು. ಆಟಗಾರರ ಪೈಕಿ ಹರ್ಷಿಕಾ ಪೂಣಚ್ಛ, ತರುಣ್ ಚಂದ್ರ, ಹರ್ಷ ಬಿಸಿಎಲ್ ಸೀಸನ್ ೨ ಬಗ್ಗೆ ಮಾತನಾಡಿದರು.

Related posts