Cinisuddi Fresh Cini News 

“ಬಾರಿಸು ಕನ್ನಡ ಡಿಂಡಿಮವ” ಪೋಸ್ಟರ್ ಲಾಂಚ್

ಕನ್ನಡದ ನಾಡು, ನುಡಿ, ವಿಚಾರವಾಗಿ ಯಾವುದೇ ಶಬ್ದ ಕೇಳಿದರೂ ಕನ್ನಡಿಗರ ಮನಸ್ಸು ರೋಮಾಂಚನಗೊಳ್ಳುತ್ತದೆ. ಅದೇ ನಿಟ್ಟಿನಲ್ಲಿ ನವಿಲುಗರಿ ಸಿನಿಮಾಸ್ಸ್ ಬ್ಯಾನರ್ ನಡಿಯಲ್ಲಿ ತಯಾರಗುತ್ತಿರುವ “ಬಾರಿಸು ಕನ್ನಡ ಡಿಂಡಿಮವ” ನೂತನ ಸಿನಿಮಾದ ಪೋಸ್ಟರ್ ನನ್ನು ಲಕ್ಷ್ಮೀ ಬಾರಮ್ಮಾ ಖ್ಯಾತಿಯ ಚಂದು ಗೌಡ ರವರು ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಅಭಯ ಹಸ್ತ ಎಂಬ ವಿಭಿನ್ನ ಸಿನಿಮಾವನ್ನು ನಿರ್ದೇಶನ ಮಾಡಿದ್ದ ನವಿಲುಗರಿ ನವೀನ್. ಪಿ. ಬಿ ಈಗ ಹೊಸ ಕಥೆಯೊಂದಿಗೆ ಹೆಸರಾಂತ ಕನ್ನಡ ಶೀರ್ಷಿಕೆಯನ್ನು ಇಟ್ಟುಕೊಂಡು ಕನ್ನಡ ಭಾಷೆಯ ಉಳಿವಿನ ಬಗ್ಗೆ ಸಿನಿಮಾ ಡೈರೆಕ್ಟ್ ಮಾಡಲು ಒರಟಿದ್ದಾರೆ.

ಈ ಸಿನಿಮಾಕ್ಕೆ ಅಶ್ವಿಕ ಮೈಸೂರು ರವರು ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ . ಈ ಚಿತ್ರದಲ್ಲಿ ಪ್ರೊ. ಡಾ. ದೊಡ್ಡರಂಗೇಗೌಡರು ಮುಖ್ಯ ಭೂಮಿಕೆಯಲ್ಲಿ ಅಭಿನಯಸುತ್ತಿದ್ದಾರೆ. ಉಳಿದಂತೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಅತಿ ಶೀಘ್ರದಲ್ಲಿ ನೀಡಲಿದೆಯಂತೆ.

Related posts