Cinisuddi Fresh Cini News 

ಬ್ಯಾನರ್ ಕಲಾವಿದ ಚಿನ್ನಪ್ಪ ಗೆ ಸಹಾಯ ಮಾಡಿದ ಅಪ್ಪು

ಚಿತ್ರರಂಗದಲ್ಲಿ ಸಿನಿಪ್ರಿಯರನ್ನು ಆಕರ್ಷಿಸಲು ಮೊದಲು ಕಣ್ಣಿಗೆ ಕಾಣುತ್ತಿದ್ದದೆ ಎತ್ತರದ ಕಟೌಟ್ಗಳು. ಮೊದಲೆಲ್ಲಾ ಹೆಚ್ಚು ಹೆಚ್ಚು ಕಾಣುತ್ತಿದ್ದವು. ಆದರೆ ಈಗ ಅದು ಕಮ್ಮಿಯಾಗಿದೆ ಆದರೂ ಅವರ ವೃತ್ತಿಯನ್ನು ಬಿಡದೆ ನಡೆಸಿಕೊಂಡು ಹೋಗುತ್ತಿರುವ ಹಿರಿಯ ಬ್ಯಾನರ್ ಕಲಾವಿದ ಚಿನ್ನಪ್ಪನವರು.

ಕೊರೋನಾ ಸಂಕಷ್ಟದಿಂದ ಬಹಳಷ್ಟು ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಆರ್ಥಿಕವಾಗಿ ತುಂಬ ಕುಗ್ಗಿರುವ ವಿಚಾರವನ್ನು ತಿಳಿದ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಕ್ಷಣವೇ ಅವರ ನೋವಿಗೆ ಸ್ಪಂದಿಸಿದ್ದಾರೆ.

ಹಿರಿಯ ಬ್ಯಾನರ್ ಕಲಾವಿದರಾದ ಚಿನ್ನಪ್ಪ ಕುಟುಂಬಕ್ಕೆ 50 ಸಾವಿರ ರೂಪಾಯಿಗಳ ಸಹಾಯ ನೀಡುವ ಮೂಲಕ ಸಿನಿಮಾ ಮಂದಿಯ ಕಷ್ಟಕ್ಕೆ ಬೆಂಬಲವಾಗಿ ನಾನಿದ್ದೇನೆ ಎಂದು ತೋರಿಸಿದ್ದಾರೆ.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಪರಿಹಾರ ನಿಧಿಗೆ ಐವತ್ತು ಲಕ್ಷ ದೇಣಿಗೆಯನ್ನು ಕೂಡ ನೀಡಿದ್ದಾರೆ. ಇನ್ನು ಚಿತ್ರೋದ್ಯಮದಲ್ಲಿ ಬಹಳಷ್ಟು ಮಂದಿಗಳು ಸಂಕಷ್ಟದಲ್ಲಿದ್ದಾರೆ. ಅವರು ಹೇಳಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ. ಇದಕ್ಕೆಲ್ಲ ಒಂದು ಸೂಕ್ತ ಪರಿಹಾರ ಸಿಗಬೇಕಾಗಿದೆ.

ಇದು ಒಬ್ಬಿಬ್ಬರಿಂದ ಸಾಧ್ಯವಿಲ್ಲ , ಚಿತ್ರೋದ್ಯಮದ ಪ್ರಮುಖರೆಲ್ಲಾ ಕುಳಿತು ಆಲೋಚಿಸಿ ಸಹಾಯ ಮಾಡುವುದು ಅತ್ಯಗತ್ಯವಾಗಿದೆ.

Share This With Your Friends

Related posts