Cini Gossips Cinisuddi Fresh Cini News 

ರಾಜಕಾರಣಿಗಳು-ಸೆಲೆಬ್ರೆಟಿಗಳ “ಬದಗಾಲು ನೀನು” ಹಾಡಿನಲ್ಲಿ ಕಿಚ್ಚ ಏಕಿಲ್ಲ..?

ಲಾಕ್ ಡೌನ್ ಸಡಿಲವಾದರೂ ಸೋಂಕು ತಗಲುವುದು ಕಡಿಮೆಯಾಗದೇ ವ್ಯಾಪಕವಾಗಿ ಹರಡುತ್ತಿದೆ. ಇದರ ಮಧ್ಯೆ ಎಲ್ಲಾ ಮಾಧ್ಯಮಗಳು, ಸೆಲೆಬ್ರೆಟಿಗಳು, ರೇಡಿಯೋಗಳು ಪತ್ರಿಕೆಗಳು, ಸೋಷಿಯಲ್ ಮೀಡಿಯಾ ಹೀಗೆ ಎಲ್ಲಾ ಕಡೆಯಿಂದನೂ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದು, ಪವನ್ ಒಡೆಯರ್ ನಿರ್ದೇಶನದಲ್ಲಿ ರಾಜ್ಯ ಸರ್ಕಾರದ ಸಂದೇಶ ಸಾರುವ ನಿಟ್ಟಿನಲ್ಲಿ ಒಂದು ಹಾಡು ತಯಾರಾಗುತ್ತಿದ್ದು, ಕನ್ನಡ ಟಾಪ್ ಸೆಲೆಬ್ರೆಟಿಗಳು ನಟಿಸಿದ್ದಾರೆ.

ಆದರೆ ಈ ಒಂದು ಹಾಡಿನಲ್ಲಿ ಕಿಚ್ಚ ಸುದೀಪ್ ಮಾತ್ರ ಕಾಣಿಸಿಕೊಂಡಿಲ್ಲ ,ಅದು ಯಾಕೆ ಎಂಬ ಪ್ರಶ್ನೆ ಅವರ ಅಭಿಮಾನಿ ಬಳಗದಲ್ಲಿ ಕಾಡತೊಡಗಿದೆ.

ಕರುನಾಡಿನ ಸ್ಟಾರ್ ಗಳಾದ ಕ್ರೇಜಿ ಸ್ಟಾರ್ ವಿ ರವಿಚಂದ್ರನ್, ಕರುನಾಡ ಚಕ್ರವರ್ತಿ ಶಿವಣ್ಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ , ಗೋಲ್ಡನ್ ಸ್ಟಾರ್ ಗಣೇಶ್ , ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಅಭಿಶೇಕ್ ಅಂಬರೀಶ್ ,ಇಶಾನ್, ರವಿಶಂಕರ್, ಕ್ರಿಕೇಟಿಗ ಅನಿಲ್ ಕುಂಬ್ಳೆ, ನಟಿಯರಾದ ಆಶಿಕಾ ರಂಗನಾಥ್ , ಶಾನ್ವಿ ಶ್ರೀವಾತ್ಸವ್, ಹರ್ಷಿಕಾ ಪೂಣಚ್ಚ, ಮಾನ್ವಿತ, ಇವರ ಜೊತೆ ಸಂಸದೆ ಸುಮಲತಾ ಅಂಬರೀಶ್, ಹಾಗೇನೆ ಗಾಯಕ ವಿಜಯ್ ಪ್ರಕಾಶ್, ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಸಹ ಈ ಹಾಡಿನ ವಿಡಿಯೋದಲ್ಲಿ ಅಭಿನಯಿಸಿದ್ದು, ಈ ಹಾಡಿನ ಮತ್ತೊಂದು ವಿಶೇಷ ಅಂದ್ರೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಸಹ ಅಭಿನಯಿಸಿದ್ದಾರೆ.
ಈ ಹಾಡಿಗೆ ವಿ. ಹರಿಕೃಷ್ಣ ಸಂಗೀತವಿದ್ದು, ಇಮ್ರಾನ್ ಸರ್ದಾರಿಯಾ ತಂಡ ಕೊರಿಯೋಗ್ರಾಫಿ ಮಾಡಿದೆ.

ಆ-ಃeಚಿಣs ಆಡಿಯೋ ಲೇಬಲ್ ನಲ್ಲಿ ಈ ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು, ಕಿಚ್ಚ ಸುದೀಪ್ ಈ ಹಾಡಿನಲ್ಲಿ ಇಲ್ಲದಿರುವುದರಿಂದ ಅಭಿಮಾನಿಗಳೆಲ್ಲಾ ಕೆಂಡಾಮಂಡಲವಾಗಿದ್ದಾರೆ.

ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡುತ್ತಾ , ಇದು ಸರ್ಕಾರದ ವತಿಯಿಂದ ಜನಜಾಗೃತಿ ಮೂಡಿಸುವ ಹಾಡಾಗಿದ್ದು ಎಲ್ಲಾ ಸೆಲೆಬ್ರಿಟಿಗಳಿಗೆ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸುವುದಕ್ಕೆ ನಾನೇ ಕರೆ ಮಾಡಿ ಮನವಿ ಮಾಡಿದ್ದೆ. ಸುದೀಪ್ ಅವರಿಗೂ ಆಹ್ವಾನಿಸಿದ್ದೆವು.

ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ, ಅವರ ಮ್ಯಾನೇಜರ್ ಗೂ ತಿಳಿಸಲಾಗಿತ್ತು . ಆದರೆ ಅವರೇಕೆ ಒಪ್ಪಿಗೆ ನೀಡಲಿಲ್ಲ ಎಂಬುದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮೊಟ್ಟಿಗೆ ಸೇರುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಅದೇನೇ ಆದರೂ ಕಿಚ್ಚನ ಅಭಿಮಾನಿಗಳಲ್ಲಿ ನಿರಾಶೆ ಮೂಡಿರುವುದಂತೂ ಸತ್ಯ.

ಚಿತ್ರೋದ್ಯಮದಲ್ಲಿ ಇದೇನು ಹೊಸದೇನಲ್ಲ ಬಹಳ ಹಿಂದಿನಂದಲೂ ಈ ರೀತಿಯ ಬೆಳವಣಿಗಳು ನಡೆದಿದೆ. ಬದಲಾಗಿ ನೀನು… ಎಂದಿರುವ ಈ ಹಾಡು ಮುಂದೆ ಏನೇನು ಬದಲಾವಣೆ ತರುತ್ತದೋ ಕಾದು ನೋಡಬೇಕು.

Share This With Your Friends

Related posts