Cinisuddi Fresh Cini News 

ನವಂಬರ್ ನಲ್ಲಿ “ಅವತಾರ ಪುರುಷ” ತೆರೆಗೆ

ಕೆ.ಜಿ.ಎಫ್ ನಂತೆ ಎರಡು ಭಾಗಗಳಲ್ಲಿ‌ ಅವತಾರ ಪುರುಷನ ಆಗಮನ. ತನ್ನ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಂತಹ ನಟ
ಶರಣ್ ವೃತ್ತಿ ಬದುಕಿನ ಅತಿ ಹೆಚ್ಚು ಬಜೆಟ್ ಚಿತ್ರ. ಭರ್ಜರಿ‌ ರಿಲೀಸ್ ಮಾಡಲು ತಂಡ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಈಗ ಸಾಲು ಸಾಲಾಗಿ ಚಿತ್ರಗಳ ಆಗಮನವಾಗುತ್ತಿದ್ದು , ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ. ಹಾಗಾಗಿಯೇ ನವೆಂಬರ್ ನಲ್ಲಿ ಅವತಾರ‌ ಪುರುಷನ ಆಗಮನ ದೀಪಾವಳಿಗೂ ಮೊದಲೇ ಬಿಗ್ ಸರ್ಪ್ರೈಸ್ ಕೊಡಲಿದ್ದಾರೆ ಶರಣ್ ಅಂಡ್ ಟೀಮ್.

ಶರಣ್, ಅಶಿಕಾ ರಂಗನಾಥ್ ಅಭಿನಯದ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಚಿತ್ರದ ಮೇಕಿಂಗ್ ವಿಡಿಯೋ. ಸಾಯಿ‌ಕುಮಾರ್, ಸುಧಾರಾಣಿ, ಅಯ್ಯಪ್ಪ,ಭವ್ಯ, ಸಾಧುಕೋಕಿಲ, ಶ್ರೀನಗರ ಕಿಟ್ಟಿ‌ ಸೇರಿದಂತೆ ದೊಡ್ಡ ತಾರಾಗಣವಿರೋ ಚಿತ್ರ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಚಿತ್ರ.

Related posts