Cinisuddi Fresh Cini News 

ರಾಯರ ಸನ್ನಿಧಿಯಲ್ಲಿ “ಅವಸ್ಥಾಂತರ”ಗೆ ಚಾಲನೆ

ಬೆಳ್ಳಿ ಪರದೆಯ ಮೇಲೆ ಆಗಾಗ ವಿಭಿನ್ನ ಪ್ರಯತ್ನದ ಚಿತ್ರಗಳು ಪ್ರೇಕ್ಷಕರ ಮುಂದೆ ಬರುತ್ತಿವೆ. ಆ ನಿಟ್ಟಿನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅಭಿನಯದ “ಅವಸ್ಥಾಂತರ” ಚಿತ್ರಕ್ಕೆ ಎನ್. ಆರ್. ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರರ ಸನ್ನಿಧಿಯಲ್ಲಿ ಶುಭಾರಂಭವಾಗಿದೆ.

ಚಿತ್ರದ ಅಡಿಬರಹವೂ ಹೇಳುವಂತೆ ’ಮುಂದೆ ಬಂದರೆ ಹಾಯಬೇಡಿ, ಹಿಂದೆ ಬಂದರೆ ಒದೆಯಬೇಡಿ’ ಎಂಬ ಬಹಳಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಮಠ ಗುರುಪ್ರಸಾದ್ ಗರಡಿಯಲ್ಲಿ ಪಳಗಿರುವ ತುಮಕೂರಿನ ಜಿ.ದೀಪಕ್‌ಕುಮಾರ್ ಪ್ರತಿಷ್ಟಿತ ಹಣಕಾಸು ಸಂಸ್ಥೆಯಲ್ಲಿ ರಿಲೇಶನ್‌ಷಿಪ್ ಮ್ಯಾನೇಜರ್, ಅಲ್ಲದೆ ಸಾಕ್ಷ್ಯಚಿತ್ರ , ಜಾಹಿರಾತುಗಳಿಗೆ ಆಕ್ಷನ್ ಕಟ್ ಹಾಗೂ ಕಾರ್ಪೋರೇಟ್ ಫಿಲಿಂ ಮೇಕರ್ ಆಗಿದ್ದರು.

ಇವೆಲ್ಲದರ ಅನುಭವದಿಂದ ಸಿನಿಮಾಕ್ಕೆ ಕತೆ,ಚಿತ್ರಕತೆ,ಸಂಭಾಷಣೆ ಬರೆದು ಹಿರಿತೆರೆಗೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮೂವೀ ವಾಕ್ಸ್ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ. ಸಿನಿಮಾ ಕುರಿತು ಹೇಳುವುದಾದರೆ ಹದಿಹರೆಯದ ಯುವಕನೊಬ್ಬ ತನಗೆ ಅರಿವಿಲ್ಲದೆ ಬಯಕೆಗಳು, ಕಾಮನೆಗಳು ಹುಟ್ಟಿಕೊಂಡು, ಹೇಗೆ ಆತನನ್ನು ಅತಂತ್ರ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ.

ಹಾಗೆಯೇ ಅದರಿಂದ ಏನೆಲ್ಲಾ ಕಷ್ಟಗಳು, ಅವಸ್ಥೆ , ಅನಾಹುತಗಳು ನಡೆಯುತ್ತವೆ ಎಂಬುದನ್ನು ತಿಳಿ ಹಾಸ್ಯದ ಮೂಲಕ ತೋರಿಸಲಾಗುತ್ತಿದೆ. ಜೊತೆಗೆ ಅರ್ಥಪೂರ್ಣ ಸಂದೇಶವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಿದ್ದಾರೆ. ಪುಟ್ಟಗೌರಿ, ಕನ್ನಡತಿ ಧಾರವಾಹಿಗಳ ಖ್ಯಾತಿಯ ರಂಜನಿರಾಘವನ್‌ಗೆ ನಾಲ್ಕನೇ ಅವಕಾಶ.

ಸಂಪ್ರದಾಯಸ್ಥ ಪ್ರೀತಿ ಹೆಸರಿನಲ್ಲಿ ಲವ್‌ಗೆ ಬಿದ್ದಾಗ ಆಗುವ ಅವಸ್ಥೆಗಳು, ಅವಾಂತರಗಳ ಬದುಕಿನಲ್ಲಿ ಬಂದಾಗ ಹೇಗೆ ನಿಭಾಯಿಸುತ್ತಾಳೆ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ’ಆಡುವ ಗೊಂಬೆ’ದಲ್ಲಿ ನಟಿಸಿದ್ದ ದಿಶಾಕೃಷ್ಣಯ್ಯ ಭೂತಕಾಲ, ವರ್ತಮಾನಕಾಲದಲ್ಲಿ ಬಂದು ಹೋಗುತ್ತಾರೆ.

ತಾರಗಣದಲ್ಲಿ ಪ್ರದೀಪ್, ರೋಹಿಣಿ, ಲಕ್ಷಿ ಭಾಗವತಾರ್ ಮುಂತಾದವರು ನಟಿಸುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ತಂಡವು ಯೋಜನೆ ಹಾಕಿಕೊಂಡಿದೆ. ಎರಡು ಹಾಡುಗಳಿಗೆ ಬಿ.ಜೆ.ಭರತ್ ಸಂಗೀತ ಸಂಯೋಜಿಸತ್ತಿದ್ದಾರೆ. ಛಾಯಾಗ್ರಹಣ ನಂದಕಿಶೋರ್, ಸಂಕಲನ ಶೇಷು ಅವರದಾಗಿದೆ.

ನಿರ್ದೇಶಕರು ವಿಭಿನ್ನ ಫೋಟೋ ಶೂಟ್ ನಡೆಸಿರುವುದರಿಂದ ಕಲಾವಿದರ ಫೋಟೋಗಳು ಪೋಸ್ಟರ್‌ದಲ್ಲಿ ಚೆಂದ ಕಾಣುತ್ತಿತ್ತು.ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ಬೆಂಗಳೂರಿನಲ್ಲಿ ಚಿತ್ರತಂಡ ಚಿತ್ರೀಕರಣ ಮಾಡಲು ಸನ್ನದ್ಧವಾಗಿದೆ.

Related posts