Cini Reviews Cinisuddi Fresh Cini News 

ಡಿಫ್ರೆಂಟ್ ಫ್ಯಾಂಟಸಿ ಕ್ರಿಯೇಟ್ ಮಾಡಿದ ಅವನೇ ಶ್ರೀಮನ್ನಾರಾಯಣ 9 ಚಿತ್ರ ವಿಮರ್ಶೆ – ರೇಟಿಂಗ್ : 4/5)

ಚಿತ್ರ :ಅವನೇ ಶ್ರೀಮನ್ನಾರಾಯಣ
ನಿರ್ದೇಶಕ : ಸಚಿನ್
ನಿರ್ಮಾಪಕರು : ಪುಷ್ಕರ್ ಮಲ್ಲಿಕಾರ್ಜುನಯ್ಯ , ಹೆಚ್.ಕೆ. ಪ್ರಕಾಶ್
ಸಂಗೀತ : ಅಜನೀಶ್ ಲೋಕನಾಥ್ , ಚರಣ್ ರಾಜ್
ಛಾಯಾಗ್ರಾಹಕ : ಕರಮ್ ಚಾವ್ಲಾ
ತಾರಾಗಣ : ರಕ್ಷಿತ್ ಶೆಟ್ಟಿ, ಸಾನ್ವಿ ಶ್ರಿವಾತ್ಸವ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ಮುಂತಾದವರು…

ಇಡೀ ಸೌತ್ ಇಂಡಿಯಾವೇ ವೇಟ್ ಮಾಡ್ಕೊಂಡು ನೋಡ್ಲೇಬೇಕು ಅಂತಾ ಕಾಯ್ತಿರೋ ಅವನೇ ಶ್ರೀಮನ್ನಾರಾಯಣ ಸಿನಿಮಾ ಕೊನೆಗೂ ಇಂದು ರಿಲೀಸ್ ಆಗಿದೆ. ಮೂರು ವರ್ಷದಿಂದ ಕಿರಿಕ್ ಹುಡ್ಗನ ದರ್ಶನಕ್ಕೆ ಕಾಯ್ತಿದ್ದ ಅಭಿಮಾನಿಗಳಿಗೆ ಶ್ರೀಮನ್ನಾರಾಯಣನಾಗಿ ದರ್ಶನ ಕೊಟ್ಟಿದ್ದಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ.

ಸೌತ್ ಇಂಡಿಯಾದಾದ್ಯಂತ ಹೈವೋಲ್ಟೇಜ್ ಕ್ರೇಜ್ ಸೃಷ್ಟಿಮಾಡಿದ್ದ ನಾರಾಯಣ ಕೊನೆಗೂ ದರ್ಶನ ಕೊಟ್ಟಿದ್ದು, ರಕ್ಷಿತ್ ಶೆಟ್ಟಿ ನಯಾ ಅವತಾರಕ್ಕೆ ಅಭಿಮಾನಿಗಳ ಕೂಗು, ಚಪ್ಪಾಳೆ ಥಿಯೇಟರ್ ನಲ್ಲಿ ಸೌಂಡ್ ಮಾಡ್ತಿವೆ.

ಶ್ರೀಮನ್ನಾರಾಯಣ ಸ್ಟೋರಿ ಶುರುವಾಗೋದೆ ಮೇನ್ ವಿಲನ್ ಅಭಿರಾದಿಪತಿಯಿಂದ. ಅಮರಾವತಿಯಲ್ಲಿ ಕಳೆದು ಹೋದ ಲೂಟಿಯಿಂದ ಶುರುವಾಗೋ ಶ್ರೀಮನ್ನಾರಾಯಣನ ಸ್ಟೋರಿ ಪ್ರತಿ ಹಂತದಲ್ಲೂ ಕ್ಯೂರಿಯಾಸಿಟಿ ಹುಟ್ಟಿಸುತ್ತೆ. ಅಮರಾವತಿಯ ನಾಟಕಕಾರರ ಗುಂಪು ಅಮರಾವತಿಯ ಲೂಟಿಯನ್ನ ರಹಸ್ಯವಾಗಿ ಬಚ್ಚಿಟ್ಟು ಅಭಿರಾದಿಪತಿಯ ಗುಂಡಿಗೆ ಬಲಿಯಾಗ್ತಾರೆ.

ಆನಂತರ ಲೂಟಿಯನ್ನ ಹುಡುಕೋಕಾಗದ ಅಭಿರಾಧಿಪತಿಯ ಸಾವಾಗುತ್ತೆ. ಅವರಿಬ್ಬರ ಮಕ್ಕಳು ಜಯರಾಮ, ತುಕರಾಮ ಆ ಲೂಟಿಯನ್ನ ಹುಡುಕೋಕೆ ಪಣ ತೊಡ್ತಾರೆ. ಈ ಟೈಮಲ್ಲಿ ಆ ಲೂಟಿ ಸೆರ್ಚಿಂಗ್ ಲೋಕಕ್ಕೆ ಎಂಟ್ರಿ ಕೊಡ್ತಾನೆ ಇನ್ಸ್ಪೆಕ್ಟರ್ ನಾರಾಯಣ.

ಆನಂತರ ಆ ಲೂಟಿ ಪತ್ತೆ ಹಚ್ಚೋಕೆ ನಡೆಯೋ ಹರಸಾಹಸಗಳೇ ಸಿನಿಮಾದ ಪ್ಲಸ್ ಪಾಯಿಂಟ್. ಲೂಟಿ ಪತ್ತೆಯಾಗೋವರೆಗೂ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್. ಈ‌ ನಡುವೇ ಅಭಿರಾಮ, ಜಯರಾಮ, ತುಕಾರಾಮ, ಲಕ್ಷ್ಮೀ, ನಾರಾಯಣ, ಅಚ್ಯುತಣ್ಣ, ಬ್ಯಾಂಡ್ ಮಾಸ್ಟರ್ ಪಾತ್ರಗಳು ಮನಸ್ಸಲ್ಲಿ ಕೂರುತ್ವೆ.

ಸಿನಿಮಾದಾದ್ಯಂತ ಅಜನೀಶ್ ಲೋಕನಾಥ್ ಮ್ಯೂಜಿಕ್ ವ್ಹಾ ಅನ್ಸುತ್ತೆ. ಸ್ಟೋರಿಗೆ ತಕ್ಕಂತೆ ಬಿ.ಜಿ.ಎಮ್ ನೋಡೋರಿಗೆ ಥ್ರಿಲ್ ಕೊಡುತ್ತೆ. ಲಕ್ಷ್ಮೀಯಾಗಿ ಕಾಣಿಸಿಕೊಂಡಿರೋ ಸಾನ್ವಿ ಇಷ್ವಾಗ್ತಾಳೆ. ಸಿಂಪಲ್ ಪಾತ್ರದಲ್ಲಿ ಸ್ಟೋರಿ ಮೇನ್ ಕೀ ಆದ ಲಕ್ಷ್ಮೀ ಕ್ಯಾರೆಕ್ಟರ್ ಇಷ್ಟವಾಗುತ್ತೆ. ಸಿನಿಮಾದ ಶ್ರೀಹರಿ ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಸಿನಿಮಾದ ತುಂಬ ಕಮಾಲ್ ಮಾಡ್ತಾರೆ. ಕಾಮಿಡಿ ಜೊತೆ ಕಮರ್ಷಿಲ್ ಕಮಾಲ್ ಮಾಡೋದ್ರಲ್ಲಿ ಸಿಂಪಲ್ ಸ್ಟಾರ್ ಇಷ್ಟವಾಗ್ತಾರೆ.

ಫಸ್ಟ್ ಆಫ್ ತುಂಬಾ ಇಂಟ್ರೆಸ್ಟಿಂಗ್ ಆಗಿ ನಡೆಯುತ್ತೆ. ಸೆಕೆಂಡ್ ಆಫ್ ಕೊಂಚ ಲ್ಯಾಗ್ ಅನ್ಸುದ್ರು ಮ್ಯೂಜಿಕ್ ಹಾಗೂ ಸ್ಟೋರಿ ಲೈನ್ ನಿಂದ ಸಿನಿಮಾ ನೋಡಬೇಕು ಅನ್ಸುತ್ತೆ. ಫಸ್ಟ್ ಆಫ್ ಮುಗಿದ್ರು ಲೂಟಿ ಅಂದ್ರೆ ಏನು ಅನ್ನೋ ಪ್ರಶ್ನೆ ನೋಡುಗರಲ್ಲಿ ಕಾಡುತ್ತೆ. ಲೂಟಿಯ ಮುಖ್ಯಾಂಶ ಏನು ಅನ್ನೋದು ಕ್ಲೈಮ್ಯಾಕ್ಸ್ ನಲ್ಲಿ ಗೊತ್ತಾಗುತ್ತೆ.

ಇಡೀ ಸಿನಿಮಾದ ಥೀಮ್, ವಿಶುವಲೈಜೇಶನ್, ಮೇಕಿಂಗ್ ಸ್ಟೈಲ್ ಸಿಕ್ಕಾಪಟ್ಟೆ ರಿಚ್ಚಾಗಿರೋದು ಸಿನಿಮಾದ ಎಫರ್ಟ್ ಏನು ಅಂತಾ ತೋರಿಸುತ್ತೆ. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಸಚಿನ್ ಗೆದ್ದಿದ್ದಾರೆ. ಇಷ್ಟು ದೊಡ್ಡ ಟೀಂ, ಸಿನಿಮಾ ಕ್ಯಾಂಪಸ್ ಮೆಂಟೇನ್ ಮಾಡಿರೋ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಾಳ್ಮೆ ಮೆಚ್ಚಲೇ ಬೇಕು.

ಸಿನಿಮಾಟೋಗ್ರಾಫ್ ಕಣ್ಣುಗಳಿಗೆ ಮನರಂಜನೆ ಮಿಸ್ ಇಲ್ಲ. ಕಿವಿಗಳಿಗೆ ಮ್ಯೂಜಿಕ್ ಕೇಳಬೇಕು ಅನಿಸುತ್ತೆ. ಎಲ್ಲಾ ಪಾತ್ರಗಳೂ ಪ್ರೇಕ್ಷಕರನ್ನ ಮೆಚ್ಚಿಸುತ್ವೆ. ಟೋಟಲಿ ಶ್ರೀಮನ್ನಾರಾಯಣ ಲೂಟಿ ಲಹರಿಯನ್ನ ನೋಡಿ ಒಂದೊಳ್ಳೆ ಮನರಂಜನೆ ಪಡಿಬೋದು.

Related posts