Cinisuddi Fresh Cini News 

“ಅಶ್ವ” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್

ಸಿನಿಮಾ ಪ್ರಪಂಚ ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕ, ಸಹ ನಿರ್ದೇಶಕ, ಸಹಕಾರ ನಿರ್ದೇಶಕ, ಸಂಕಲನ ಸಹಾಯಕ, ಬರಹಗಾರ ಹಾಗೂ ಸಂಭಾಷಣೆಗಾರರಾಗಿ ಕೆಲಸ ಮಾಡಿದ್ದ ಎ .ಆರ್. ಸಾಯಿ ರಾಮ್ ಈಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಕಳೆದ ಒಂದು ದಶಕದಲ್ಲಿ ಸುಮಾರು 15 ಚಿತ್ರಗಳಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಏಳು ಬೇಳುಗಳ ಪರಿಶ್ರಮದಿಂದ ಇಂದು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನ ಬಡ್ತಿಯೊಂದಿಗೆ ಇಂದು ತನ್ನ ಚೊಚ್ಚಲ ನಿರ್ದೇಶನ “ಅಶ್ವ” ಚಿತ್ರದ ಮೂಲಕ , ಪರಿಣಿತರ ತಂತ್ರಜ್ಞರ ತಂಡದ ಜೊತೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದ್ದು, ಉದಯೋನ್ಮುಖ ನಟ ಹೊಸ ಪ್ರತಿಭೆ “ವಿವಾನ್. ಕೆ .ಕೆ ” ಅಶ್ವ” ಚಿತ್ರದ ನಾಯಕರಾಗಿದ್ದಾರೆ. ಪ್ರಮುಖ ಪಾತ್ರದಲ್ಲಿ ನಾಗೇಂದ್ರ ಅರಸ್ , ಬಲರಾಜ್ವಾಡಿ, ಪವನ್ ಕುಮಾರ್(ಪಚ್ಚಿ), ಯಶ್ ಶೆಟ್ಟಿ ನಂದಗೋಪಾಲ್, ಸೂರಿ ಹಾಗೂ ಮತ್ತಿತರ ತಾರಾಬಳವಿದೆ.

ಚಿತ್ರದ ನಾಯಕಿಯರಾಗಿ ಸಾರಿಕಾ ಮತ್ತು ಸಾಗರಿಕ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಬಿ. ಅಜನೀಶ್ ಲೋಕನಾಥ್ ರವರ ಸಂಗೀತ ಮಾಡಲಿದ್ದು , ರವಿಕುಮಾರ್ ಸನ ಅವರು ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ.

ಶ್ರೀಕಾಂತ ಗೌಡ ಸಂಕಲನ, ನೃತ್ಯ ಧನಂಜಯ್, ಸಾಹಸ ಕುನ್ಫ್ಯೂ ಚಂದ್ರು ಹಾಗೂ ತುಳಸಿ ರಾಮ್ ರಾಜ್ ಪ್ರಚಾರ ವಿನ್ಯಾಸಕರಾಗಿ ಕೆಲಸ ಮಾಡಿದ್ದಾರೆ.

Related posts