Cinisuddi Fresh Cini News 

ಅಪ್ಪು ಹುಟ್ಟುಹಬ್ಬಕ್ಕೆ ನಿರ್ಮಾಪಕ ಅಭಿಮಾನಿಯಿಂದ “ಅಪ್ಪು ಕಥಾ ಗಾನಂ” ಎಂಬ ಹಾಡು ಲೋಕಾರ್ಪಣೆ.

ಕರ್ನಾಟಕ ರತ್ನ , ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಎಂದೆಂದಿಗೂ ಅಜರಾಮರ ಅನ್ನುವುದಕ್ಕೆ ಅವರ ಅಭಿಮಾನಿಗಳ ಆರಾಧನೆಯ ಸಾಕ್ಷಿ ಎನ್ನಬಹುದು. ಅಭಿಮಾನ ಎನ್ನುವುದು ತುಂಬಾ ದೊಡ್ಡದು. ಅದಕ್ಕೆ ಬೆಲೆ ಕಟ್ಟಲಾಗದು. ಅಂಥ ಮತ್ತೊಬ್ಬ ಅಪ್ಪಟ ಅಭಿಮಾನಿಯೇ ಮಹಿ ಶಿವಶಂಕರ್. ಇವರು ಮೂಲತಃ ಆಂಧ್ರದವರಾದರೂ ಮೊದಲಿಂದಲೂ ದೊಡ್ಮನೇ ಕುಟುಂಬದ ಮೇಲೆ ಅಪಾರ ಗೌರವ ಅಭಿಮಾನ ಇಟ್ಟುಕೊಂಡಿದ್ದಾರೆ. ಮಾಹಿ ಶಿವಶಂಕರ್  ಅಪ್ಪು ಅಗಲಿಕೆಯ ನೋವನ್ನು  ಒಂದು ಹಾಡಿನ ಮೂಲಕ ಮತ್ತೆ  ಮನೆ ಕಲುಕುವಂತೆ ಮಾಡಿದ್ದಾರೆ. ಈಗಾಗಲೇ ಬಿ.ವಿ.ಎಂ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಎರಡು ತೆಲುಗು ಚಿತ್ರಗಳನ್ನೂ ನಿರ್ಮಿಸಿದ್ದಾರೆ. ಈಗ ಕನ್ನಡದಲ್ಲಿ ತಮ್ಮ ಪ್ರಥಮ ಚಿತ್ರವನ್ನು  ಆರಂಭಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಪ್ರಥಮ ಹೆಜ್ಜೆಯಾಗಿ ಅಪ್ಪು ಅಭಿಮಾನದ ಹಾಡೊಂದನ್ನು ಮಾಡಿಕೊಂಡಿದ್ದಾರೆ. ಮಾರ್ಚ್ 17 ಅಪ್ಪು ಹುಟ್ಟುಹಬ್ಬಕ್ಕಾಗಿಯೇ “ಅಪ್ಪು ಕಥಾ ಗಾನಂ” ಎಂಬ ಈ ಹಾಡನ್ನು ನಿರ್ಮಿಸಿ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

ಈ ಹಾಡಲ್ಲಿ ಅಪ್ಪು ಕಾಣದೆ ಕಂಗಾಲಾಗಿ ಬೀದಿ ಬೀದಿಗಳಲ್ಲಿ ತನ್ನ ದೇವರನ್ನು ಹುಡುಕುತ್ತ “ಎಲ್ಲಿ ಹೋದೆಯೋ ನೀನೆಲ್ಲಿ ಇರುವೆಯೋ” ಎಂದು ಹಾಡುವ ಅಭಿಮಾನಿಯಾಗಿ ಮಹಿ ಶಿವಶಂಕರ್ ಅವರೇ ಅಭಿನಯಿಸಿದ್ದಾರೆ. ಕನ್ನಡ ಹಾಗೂ ತೆಲುಗು ಸೇರಿ ಎರಡು ಭಾಷೆಗಳಲ್ಲಿ ತಯಾರಾಗಿರುವ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ನೆರವೇರಿತು. ಚರಣ್ ಅರ್ಜುನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡಿಗೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಜಯಶ್ರೀ ದನಿಯಾಗಿದ್ದಾರೆ. ಸೋಹನ್ ಅಭಿರಾಮ್ ಈ ಹಾಡಿಗೆ ನಿರ್ದೇಶನ ಮಾಡಿದ್ದಾರೆ. ಧನಪಾಲ್ ಕೆ.ಎಂ. ಅವರ ಛಾಯಾಗ್ರಹಣದಲ್ಲಿ ಈ ಹಾಡು ಚಿತ್ರೀಕರಣವಾಗಿದೆ. ಗೋಪಿ ಶೀಗೇಹಳ್ಳಿ ಅವರ ಸಾಹಿತ್ಯ ಈ ಹಾಡಿಗಿದೆ.

ಈ ಕುರಿತಂತೆ ಮಾತನಾಡಿದ ಮಹಿ ಶಿವಶಂಕರ್, ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡುತ್ತ ಅವರ ಆದರ್ಶಗಳನ್ನು ಮೊದಲಿಂದಲೂ ಪಾಲಿಸಿಕೊಂಡು ಬಂದವನು ನಾನು. ತಂದೆಯ ಹಾದಿಯಲ್ಲೇ ಸಾಗಿದ ಅಪ್ಪು ಅವರ ಅಪ್ಪಟ ಅಭಿಮಾನಿ. ನನ್ನ ಮನದ ಭಾವನೆಯನ್ನು ಈ ಹಾಡಿನ ಮೂಲಕ ವ್ಯಕ್ತಪಡಿಸಿದ್ದೇನೆ. ಅಲ್ಲದೆ ಈ ಹಾಡು ನಮ್ಮ ಚಿತ್ರದಲ್ಲಿಯೂ ಇರುತ್ತದೆ. ಈ ಹಾಡನ್ನು ನೋಡಿ ರಾಘಣ್ಣ, ಪೂರ್ಣಿಮಾ ರಾಮ್ ಕುಮಾರ್ ಅವರು ನಮ್ಮ ಅಪ್ಪುವನ್ನು ಈ ಹಾಡಿನ ಮೂಲಕ ನೋಡುತ್ತಿದ್ದೇವೆ, ತುಂಬಾ ಚಿನ್ನಾಗಿ ಮಾಡಿದ್ದೀರಿ ಎಂದು ಹೇಳಿದರು.

ಮೇನಲ್ಲಿ ನಮ್ಮ ಹೊಸ ಚಿತ್ರವನ್ನು ಪ್ರಾರಂಭಿಸುತ್ತಿದ್ದೇವೆ. ಸಾಧನೆ ಮಾಡಲು ಹೊರಟಾಗ ಹಲವಾರು ಅಡೆತಡೆಗಳಿರುತ್ತದೆ. ಒಳ್ಳೆ ದಾರಿ ತೋರಿಸುವ ಒಬ್ಬ ಗಾಡ್ ಫಾದರ್ ಇದ್ದರೆ ದಾರಿ ಸುಗುಮ ಒಂದು ವೇಳೆ ಇಲ್ಲದಿದ್ದರೆ ಏನಾಗುತ್ತದೆ ಎಂಬ ಅಂಶದೊಂದಿಗೆ ನಮ್ಮ ಚಿತ್ರ  ಆರಂಭಗೊಳ್ಳಲಿದೆ ಎಂದು ಚಿತ್ರದ ಯುವ ನಿರ್ದೇಶಕ ಸುಹಾನ್ ಅಭಿರಾಮ್ ತಿಳಿಸಿದರು. ಇವರು ಮೂಲತಃ ಶಿಡ್ಲಘಟ್ಟದವರಾಗಿದ್ದು , ಒಂದಷ್ಟು ಚಲನಚಿತ್ರಗಳಲ್ಲಿ ಪಾತ್ರಗಳನ್ನು ಕೂಡ ನಿರ್ವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಹೊರಬರಲು ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಈಗ ಬಿಡುಗಡೆಯಾಗಿರುವ ‘ಎಲ್ಲಿ ಹೋದೆಯೋ’ ಹಾಡು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ಅರ್ಪಣೆ ಮಾಡಿದ್ದು , ನಿರ್ಮಾಪಕರ ತಂದೆ ತಾಯಿ ಹಾಡಿನ ಲೋಕಾರ್ಪಣೆ ಮಾಡಿದರು. ಮುಂದಿನ ದಿನಗಳಲ್ಲಿ  ನೂತನ ಚಿತ್ರದ ಆರಂಭದ ಮಾಹಿತಿಯನ್ನು ನೀಡಿದಂತೆ ಚಿತ್ರತಂಡ.

Related posts