Bollywood Cini Gossips Cinisuddi Fresh Cini News 

ದಂಗಲ್ ಹುಡುಗಿಗೆ ಡ್ಯಾನ್ಸ್ ಸಿನಿಮಾದಲ್ಲಿ ನಟಿಸುವಾಸೆಯಂತೆ..!

ಸೂಪರ್‍ಹಿಟ್ ದಂಗಲ್ ಸಿನಿಮಾ ಮೂಲಕ ಮನೆಮಾತಾದ ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ರೂಪ ಮತ್ತು ಪ್ರತಿಭೆಯ ವಿಶಿಷ್ಟ ಸಂಗಮ. ಈಕೆಗೆ ನಟನೆ ಜೊತೆ ನೃತ್ಯದಲ್ಲೂ ತುಂಬಾ ಆಸಕ್ತಿ. ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಈ ನಟಿಗೆ ಅಪಾರ ಸಂಖ್ಯೆ ಅಭಿಮಾನಿಗಳಿದ್ದಾರೆ.

ಅಂತಾರಾಷ್ಟ್ರೀಯ ನೃತ್ಯ ದಿನವಾದ ನಿನ್ನೆ ಸಾನ್ಯಾ ತನ್ನ ಮನದಾಳದ ಬಯಕೆಯೊಂದನ್ನು ಹಂಚಿಕೊಂಡಿದ್ದಾಳೆ. ಡ್ಯಾನ್ಸ್ ಲವರ್ ಆದ ಈ ಪ್ರತಿಭಾನಿತ್ವೆಗೆ ಸಂಪೂರ್ಣ ನೃತ್ಯ ಸಿನಿಮಾವೊಂದರಲ್ಲಿ ನಟಿಸಬೇಕೆಂಬ ಹೆಬ್ಬಯಕೆ.

ನೃತ್ಯದ ಬಗ್ಗೆ ಈಕೆಗೆ ಬಾಲ್ಯದಿಂದಲೂ ಆಸಕ್ತಿ ಇತ್ತು. ಬಾಲ್ಯದಲ್ಲಿ ಕುಟುಂಬದ ಯಾವುದೇ ಸಭೆ-ಸಮಾರಂಭಗಳು, ಮದುವೆ-ಆರತಕ್ಷತೆಗಳಲ್ಲಿ ಸಾನ್ಯಾಳ ಒಂದು ಡ್ಯಾನ್ಸ್ ಇದ್ದೇ ಇರುತ್ತಿತ್ತು. .ಬಾಲ್ಯದಲ್ಲೇ ಈಕೆಯ ಪ್ರತಿಭೆಯನ್ನು ಗಮನಿಸಿ ಬಂಧುಮಿತ್ರರು ದೊಡ್ಡವಳಾದ ಮೇಲೆ ಈಕೆ ಒಳ್ಳೆಯ ನೃತ್ಯ ಕಲಾವಿದೆಯಾಗುತ್ತಾಳೆ ಎಂದು ಭವಿಷ್ಯ ನುಡಿದಿದ್ದರು.

ಬಾಲ್ಯದಲ್ಲಿ ಹವ್ಯಾಸವಾಗಿದ್ದ ನೃತ್ಯ ಸಾನ್ಯಾ ಬೆಳೆದಂತೆ ಹೆಮ್ಮೆರವಾಯಿತು. ಈಕೆ ಸ್ವತ: ಬ್ಯಾಲೆ. ಫ್ರಿಸ್ಟೈಲ್ ಮತ್ತು ಜಾಝ್ ನೃತ್ಯಗಳನ್ನು ಕಲಿತಳು. ಖ್ಯಾತ ರ್ಯಾಪರ್ ನಯಿಜಿ ಜೊತೆ ಈಕೆ ಹೆಜ್ಜೆ ಹಾಕಿದ ವೀಡಿಯೋವನ್ನು ನೋಡಿ ಹೃತಿಕ್ ರೋಷನ್ ಕೂಡ ಬೆರಗಾದ.

ನನಗೆ ಡ್ಯಾನ್ಸ್ ಸಿನಿಮಾದಲ್ಲಿ ನರ್ತಕಿಯಾಗಿ ನಟಿಸಬೇಕೆಂಬ ಆಸೆ ಕಾಡುತ್ತಿದೆ. ಅದು ಸಾಕಾರಗೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ ಎನ್ನುತ್ತಾಳೆ ಸಾನ್ಯ. ನವಾಜುದ್ದೀನ್ ಸಿದ್ಧಿಖಿ ಜೊತೆ ಫೋಟೋಗ್ರಾಫ್ ಸಿನಿಮಾದಲ್ಲಿ ನಟಿಸಿದ ಸಾನ್ಯಾ ಕೈಯಲ್ಲಿ ಅನೇಕ ಪ್ರಾಜೆಕ್ಟ್‍ಗಳಿವೆ.

ಅನುರಾಗ್ ಬಸ್ ನಿರ್ದೇಶನದ ಆದಿತ್ಯ ರಾಯ್ ಕಪೂರ್ ನಾಯಕನಾಗಿರುವ ಹೊಸ ಸಿನಿಮಾದಲ್ಲಿ ಸಾನ್ಯಾ ನಾಯಕಿ. ಈ ಸಿನಿಮಾ ದಲ್ಲಿ ಅಭಿಷೇಕ್ ಬಚ್ಚನ್, ಫಾತಿಮಾ ಸನಾ ಶೇಖ್, ಪಂಕಜ್ ತ್ರಿಪಾಠಿ ಮತ್ತು ರಾಜ್‍ಕುಮಾರ್ ರಾವ್ ಸಹ ಪ್ರಮುಖ ಪಾತ್ರದಲಿದ್ದಾರೆ.

Share This With Your Friends

Related posts