Cinisuddi Fresh Cini News Tv / Serial 

ಬಾಲಿವುಡ್‍ ನಲ್ಲಿ ಅನುಷ್ಕಾಳ ‘ಪಾತಾಳ್ ಲೋಕ್’

ನಟಿ ಅನುಷ್ಕಾ ಶರ್ಮಾ ವರ್ಷಗಳ ಬಳಿಕ ಪಾತಾಳ್ ಲೋಕ್ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಲಾಕ್ ಡೌನ್ ನಲ್ಲಿ ಅನುಷ್ಕಾ ಪಾತಾಳ್ ಲೋಕ್ ಮೂಲಕ ಚಿತ್ರಪ್ರೇಕ್ಷಕರನ್ನು ರಂಜಿಸಿದ್ದಾರೆ.

ಅಮೇಜಾನ್ ಪ್ರೈಮ್‍ನಲ್ಲಿ ಬಿಡುಗಡೆಯಾಗಿರುವ ಪಾತಾಳ್‍ಲೋಕ್ ವೆಬ್ ಸರಣಿ ಚಿತ್ರಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೆ ಖುಷಿಯಲ್ಲಿ ಅನುಷ್ಕಾ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ.

ವಿಶೇಷ ಅಂದರೆ ಆ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸೂಪರ್ ಹಿಟ್ ಸಿನಿಮಾದ ಹೆಸರನ್ನೆ ಇಟ್ಟಿದ್ದಾರೆ. ಹೌದು, ದರ್ಶನ್ ಮತ್ತು ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ಹೆಸರನ್ನೆ ಅನುಷ್ಕಾ ಶರ್ಮಾ ತಮ್ಮ ಮುಂದಿನ ಸಿನಿಮಾಗೆ ನಾಮಕರಣ ಮಾಡಿದ್ದಾರೆ.

ಕನ್ನಡದ ಬುಲ್ ಬುಲ್ ರೊಮ್ಯಾಂಟಿಕ್ ಫ್ಯಾಮಿಲಿ ಚಿತ್ರವಾಗಿತ್ತು. ಆದರೆ ಅನುಷ್ಕಾ ಶರ್ಮಾ ಅವರ ಬುಲ್ ಬುಲ್ ಹಾರರ್ ಸಿನಿಮಾವಾಗಿದೆ. ಅನುಷ್ಕಾ ಅವರಿಗೆ ಹಾರರ್ ಸಿನಿಮಾ ಅಂದರೆ ತುಂಬಾನೇ ಇಷ್ಟವಂತೆ. ಅವರು ಸಾಕಷ್ಟು ಹಾರರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪಾತಾಳ್‍ಲೋಕ್ ಸಿನಿಮಾ ನಂತರ ಮತ್ತೆ ಅವರು ಹಾರರ್ ಸಿನಿಮಾದ ಮೂಲಕವೆ ಬರ್ತಿದ್ದಾರೆ. ಈಗಾಗಲೆ ಚಿತ್ರದ ಪುಟ್ಟ ಟೀಸರ್ ರಿಲೀಸ್ ಮಾಡಿದ್ದು, ಹುಣ್ಣಿಮೆ ಚಂದ್ರ ಇರುವ ಈ ಟೀಸರ್ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಅಂದ್ಹಾಗೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿಲ್ಲ. ನೆಟ್‍ಫ್ಲಿಕ್ಸ್‍ನಲ್ಲಿ ನೇರವಾಗಿ ರಿಲೀಸ್ ಆಗಲಿದೆ.

Share This With Your Friends

Related posts