Cinisuddi Fresh Cini News 

ಅನಿಲ್ ಸಿದ್ದುಗೆ ಸಿನಿಮಾದಲ್ಲಿಯೇ ಸಾಧಿಸಬೇಕೆಂಬ ಛಲ

ನಟನೆ ಸದಾ ತಪಸ್ಸು. ಕೀರ್ತಿ ಶ್ರಮದ ಫಲ.. ಕನಸುಗಳು ಬೆನ್ನೇರಿ ಪಯಣಿಸಿ , ಶ್ರಮದ ಹಾದಿಯಲ್ಲಿ ನಟನಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ಕಲಾವಿದರ ಸಾಲಿನಲ್ಲಿ ತನ್ನ ಹೆಸರನ್ನೂ ಸ್ಥಾಪಿಸಿಕೊಂಡಂತಹ ಯುವ ನಟ ಅನಿಲ್ ಸಿದ್ದು ಮೂಲತಃ ಮೈಸೂರಿನ ವಿಜಯನಗರ … ತದನಂತರದಲ್ಲಿ ಬೆಂಗಳೂರುನಲ್ಲಿ ವಿಧ್ಯಾಭ್ಯಾಸ.

ಚಿಕ್ಕಂದಿನಿಂದಲೂ ಶಾಲಾ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನಿಲ್ ಸಿದ್ದು ಮೇಲಗೈ ಸಾಧಿಸಿದ್ದು,,, ನಟನೆಯ ಕುರಿತು ಚಿಕ್ಕಂದಿನಿಂದಲೂ ಆಸಕ್ತಿ… ಎಂ ಬಿ ಎ ಶಿಕ್ಷಣದ ಸಮಯದಲ್ಲಿ ಮಾಡೆಲಿಂಗ್ ನ ಮುಖಾಂತರ ಸಿನಿಮಾದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ, ವಿಧ್ಯಾಭ್ಯಾಸ ಅರ್ಧದಲ್ಲೇ ಬಿಟ್ಟು , ಮಾಡೆಲಿಂಗ್ ನಲ್ಲಿ ಕಲರ್ ಫುಲ್ ದುನಿಯಾ ” ಸ್ಯಾಂಡಲ್ ವುಡ್” ಸಿನಿಮಾ ಇಂಡಸ್ಟ್ರಿಯ ಕಡೆ ಒಲವಾಯಿತು… ಮಾಡೆಲಿಂಗ್ ಫೀಲ್ಡ್ ನ ಮುಖಾಂತರ ಚಿಕ್ಕ ಪುಟ್ಟ ಅವಕಾಶಗಳು ಕೈ ಬೀಸಿ ಕರೆಯುತ್ತಿದ್ದಂತೆ, ನಟನೆಯ ಆಸಕ್ತಿ ಹಾಗೂ ಮಾಡೆಲಿಂಗ್ ನ ಕಡೆಗೆ ದೇಹದ ತಯಾರಿ ನಡೆದಿತ್ತು.

ಯಾವುದೇ ಅವಕಾಶಗಳು ಸಿಕ್ಕಾಗ , ಚಿಕ್ಕದೂ ದೊಡ್ಡದು ಎಂದೂ ಪರಿಗಣಿಸದೇ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು, ಮಣಿರತ್ನಂ ನಿರ್ದೇಶನದ “ಕಾರ್ಟ್ ವಿಲಯಾಡು”, AR ಮುರಗದಾಸ್ ನಿರ್ದೇಶನದ “ಕತ್ತಿ” ಶಂಕರ್ ನಿರ್ದೇಶನದ ” ಐ ” ಸಿನಿಮಾದಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿದ್ದೂ, ತದನಂತರದಲ್ಲಿ ಅವಕಾಶಗಳಿಗಾಗಿ ತುಂಬಾ ಶ್ರಮವಹಿಸಿ,, ಸ್ಯಾಂಡಲ್ ವುಡ್ ಸಿನಿಮಾದ ಹಲವಾರು ನಿರ್ದೇಶಕರು, ನಿರ್ಮಾಪಕರನ್ನ ಭೇಟಿಯಾಗಿ, ಶ್ರೀ ರಾಘವ ಮುರಳಿ ಸಾರಥ್ಯದಲ್ಲಿ, “ಮುಮ್ತಾಜ್” ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ “ದರ್ಶನ್ ” ಅವರೊಂದಿಗೆ ಖಳನಾಯಕನಾಗಿ ನಟಿಸಿದ್ದಾರೆ ,,,, ತದನಂತರದಲ್ಲಿ ಆ ಸಿನಿಮಾದ ಮುಖಾಂತರ ,ತಮಿಳು “ಮೆಟ್ರೋ ” ಚಿತ್ರದ ರೀಮೇಕ್ ನಲ್ಲಿ ತಮಿಳಿನ ( ಬಾಬಿ ಸಿಂಹ ಅವರ ಪಾತ್ರದಲ್ಲಿ )…. ಕನ್ನಡದಲ್ಲಿ ಮುರಳಿ ಗುರಪ್ಪನವರ ನಿರ್ದೇಶನದ ಮೂಡಿಬಂದ “ಸಿಲಿಕಾನ್ ಸಿಟಿಯಲ್ಲಿ ” ಖಳನಾಯಕರಾಗಿ ನಟಿಸಿ ಎಲ್ಲರ ಮನಮೆಚ್ಟಿನ ನಟರಾದವರು… ಸಿದ್ದು , ಸದಾ ಸಾಮಾಜಿಕ ಜೀವನದಲ್ಲಿ ಬ್ಯುಸಿ ಇದ್ದರೂ, ಸಿನಿಮಾದ ನಂಟು ಅತೀ ಹೆಚ್ಚು … ಮತ್ತೆ ,”ಮೀಸೆಯ ಮುರುಕು ” ತಮಿಳು ಚಿತ್ರದ ರೀಮೇಕ್ ಕನ್ನಡಕ್ಕೆ ಗುರುದೇಶಪಾಂಡೆ ನಿರ್ದೇಶನದ “ಪಡ್ಡೆಹುಲಿ”ಯಲ್ಲೂ ಖಳನಾಯಕನಾಗಿ ಅನಿಲ್ ಸಿದ್ದು ನಟಿಸಿದ್ದಾರೆ.

ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದರೂ, ತನ್ನದೇ ಆದ ಡಿಫರೆಂಟ್ ಸ್ಟೈಲ್ ಮತ್ತು God kiss u .. ಸಂದೇಶದ ಮುಖಾಂತರ ತನ್ನ ತಾನು ಕಾಣದಂತೆ ,ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು, ದೊಡ್ಡವರಿಂದ ಹಿಡಿದು ಪುಟಾಣಿ ಮಕ್ಕಳವರೆಗೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರನಾದ ನಟ…. ನಟನೆಗೂ ಸೈ..ಸಾಮಾಜಿಕ ಕೆಲಸ ಕಾರ್ಯಗಳಿಗೂ ಸೈ ಎನಿಸಿಕೊಂಡು ಚಿತ್ರರಂಗದಲ್ಲಿ … ಕಥಾ ನಾಯಕನಾಗಿ ಮತ್ತೆ ಎಂಟ್ರಿ ಕೊಟ್ಟದ್ದು ” A+” ಸಿನಿಮಾದ ಮೂಲಕ…. ಉಪೇಂದ್ರ ಅವರ ಅಚ್ಚುಮೆಚ್ಚಿನ ಶಿಷ್ಯರಾದ ” ಶ್ರೀ ವಿಜಯ್ ಸೂರ್ಯ ” ಅವರ ಸಾರಥ್ಯದಲ್ಲಿ ಮೂಡಿಬಂದ “A+” ಸಿನಿಮಾದಲ್ಲಿ ಕಥಾ ನಾಯಕನಾಗಿ ಸ್ಯಾಂಡಲ್ ವುಡ್ ನ ಗಾಂಧೀ ನಗರದಲ್ಲಿ ಹೆಸರಾದವರು… ತನ್ನ ಮೊದಲ ಸಿನಿಮಾದ ಕಟ್ ಔಟ್ ಮೆಜೆಸ್ಟಿಕ್ಕಿನ ಸಂತೋಷ್ ಚಿತ್ರಮಂದಿರದಲ್ಲಿ ರಾರಾಜಿಸಿದ್ದು, ಮತ್ತೊಂದು ಸಿನಿಮಾ ನಾಯಕ ನಟನಾಗಿ ಇದೀಗ “ವಿರಾಟಪರ್ವ” ತೆರೆಗೆ ಸಿದ್ಧವಾಗಿದೆ .

ಸ್ಯಾಂಡಲ್ ವುಡ್ ನ ಮರಿಟೈಗರ್, ಲೀಡಿಂಗ್ ಸ್ಟಾರ್ ವಿನೋದ್ ಪ್ರಭಾಕರ್ ಅವರ ಬಿಡುಗಡೆಗೆ ಸಿದ್ಧವಾಗಲಿರುವ ಉದಯ ಪ್ರಕಾಶ್ ಅವರ ನಿರ್ದೇಶನದ “ವರದ” ಚಿತ್ರದಲ್ಲಿ ವಿನೋದ್ ಪ್ರಭಾಕರ್ ಅವರೊಂದಿಗೆ MLA ಪಾತ್ರದ ಮುಖಾಂತರ ಖಳನಾಯಕರಾಗಿ ನಟಿಸಿದ್ದು, ಈ ಸಿನಿಮಾ ಮೈಸೂರು ಮಂಗಳೂರು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣಗೊಂಡಿದೆ.. ನ್ಯಾಷನಲ್ ಅವಾರ್ಡ್ ವಿನ್ನರ್ ಸಾಹಸ ನಿರ್ದೇಶಕ “ಮಾಸ್ಟರ್ ವಿಕ್ರಮ್” ಅವರ ಆಕ್ಷನ್ ನಲ್ಲಿ ಫೈಟಿಂಗ್ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿದು,,, ಈಗಾಗಲೇ ಸಿನಿಮಾದ ಡಬ್ಬಿಂಗ್ ಪೋಸ್ಟ್ ಪ್ರೊಡಕ್ಷನ್ ನ ಎಲ್ಲಾ ಜವಾಬ್ದಾರಿಯೂ ಮುಗಿದಿದ್ದು ,,,, ಕರೋನಾ ಸಮಸ್ಯೆಯಿಂದಾಗಿ ಚಿತ್ರಗಳು, ಮುಂದಿನ ದಿನಗಳಲ್ಲಿ ತೆರೆಯ ಮೇಲೆ ಕಾಣಲಿದೆ .. ಖಳನಾಯಕರಾಗಿ ನಟಿಸಿ ,,ನಾಯಕ ನಟನಾಗಿ ನಟಿಸಿ ,, ನಟನೆಯ ಜವಾಬ್ದಾರಿಯೊಂದಿಗೆ ,,ಮುಂದಿನ ಕನಸುಗಳು ಚಿತ್ರರಂಗದಲ್ಲಿ GoD Kiss U… ಸಂದೇಶ ಮುಖಾಂತರ ಅಭಿಮಾನಿಗಳ ಮನೆ ಮಗನಾಗಲಿ.

Related posts