Cinisuddi Fresh Cini News 

ಮಂಡ್ಯ ಸೊಗಡಿನ ‘ಆನೆಬಲ’

ಮಂಡ್ಯದ ಸೊಗಡನ್ನು ಬಿಂಬಿಸುವಂತಹ ಅನೇಕ ಚಿತ್ರಗಳು ಚಂದನವನದಲ್ಲಿ ಸದ್ದು ಮಾಡಿದೆ, ಈಗ ಈ ನಾಡಿನ ದೇಸಿ ಕತೆಯನ್ನ ಆನೆಬಲ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ ಸೂನಗಹಳ್ಳಿ ರಾಜು.ಮಂಡ್ಯದ 7 ತಾಲ್ಲೂಕುಗಳಲ್ಲಿ ಚಿತ್ರೀಕರಣವಾಗಿರುವ ಈ ಚಿತ್ರದ ಕತೆ, ಚತ್ರಕತೆ, ಸಂಭಾಷಣೆಯನು ರಾಜು ಅವರೇ ಒದಗಿಸಿದ್ದಾರೆ.

ಮಂಡ್ಯದ ಬಗ್ಗೆ ಈ ಹಿಂದೆ ಬಂದಿದ್ದ ಕಿರಾತಕ, ತಿಥಿ ಚಿತ್ರಗಳಲ್ಲಿ ಇಲ್ಲದ ವಿಷಯಗಳು ಆನೆಬಲದಲ್ಲಿದ್ದು, ಸಕ್ಕರೆ ನಾಡಿನಜನರ ಬದುಕಿನಚಿತ್ರಣ, ಅಲ್ಲಿನ ಪ್ರಾಕೃತಿಕ ಸೌಂದರ್ಯ, ಜನಪದ ಸಂಸ್ಕ್ರತಿ, ಸೋಬಾನ ಪದಗಳ ಬಳಕೆ, ಗ್ರಾಮೀಣ ಪರಿಸರವನ್ನು ನೋಡಬಹುದು.

ಆನೆಬಲದಲ್ಲ 120 ವರ್ಷದವರಾದ ವಳಗೆರೆಹಳ್ಳಿ ನಟಿಸುವುದರೊಂದಿಗೆ ಡಬ್ಬಿಂಗ್ ಮಾಡಿ ಕುತೂಹಲ ಮೂಡಿಸಿದ್ದಾರೆ. ಈ ಚಿತ್ರದ ನಾಯಕ ಬಿಟ್ಟರೆ ಚಿತ್ರದಲ್ಲಿರುವ 120 ಕಲಾವಿದರ ಪೈಕಿ ಶೇ. 90ರಷ್ಟು ಹೊಸಬರೇ ತುಂಬಿಕೊಂಡಿದ್ದಾರೆ.

ನೈಜತೆಗೆ ಒತ್ತು ಕೊಟ್ಟಿರುವ ಆನೆಬಲ ಚಿತ್ರದಲ್ಲಿ ಬರುವ ಮುದ್ದೆಯ ವಿಶೇಷತೆಯನ್ನು ಬಿಂಬಿಸುವ ಹಾಡನ್ನು ವಿ.ನಾಗೇಂದ್ರಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ಪೂರ್ಣಚಂದ್ರತೇಜಸ್ವಿ ಸಂಗೀತದ ನಾಲ್ಕು ಹಾಡುಗಳಲ್ಲಿ ಭಾಷೆ ವಿಚಾರ ಮತ್ತು ಸತ್ವ ಇಡೀ ಸಿನಿಮಾದಲ್ಲಿ ತುಂಬಿಕೊಂಡಿದೆ.

ಜಾನಪದಕಲೆಯನ್ನುಇಷ್ಟಪಡುವ, ಕನ್ನಡ ಭಾಷೆ ಬಗ್ಗೆ ಅಭಿಮಾನಇರುವಯುವಕನಾಗಿ ಸಾಗರ್ ನಾಯಕ. ಹಳ್ಳಿಯ ಜಂಬದ ಹುಡುಗಿಯಾಗಿರಕ್ಷಿತಾ ನಾಯಕಿ. ಇವರೊಂದಿಗೆ ಗೌತಂ, ಚಿರಂಜೀವಿ, ಹರೀಶ್‍ಶೆಟ್ಟಿ, ಕೀಲಾರಉದಯ್, ಸುಮಾ, ರೂಪ ಮತ್ತು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮುತ್ತುರಾಜು ಮುಂತಾದವರು ಅಭಿನಯಿಸಿದ್ದಾರೆ.

ನಿರ್ಮಾಪಕ ಎ.ವಿ.ವೇಣುಗೋಪಾಲ್ ರೈತನಾಗಿದ್ದು, ತಮ್ಮ ಜಿಲ್ಲೆಯ ಕಲೆ, ಸಂಸ್ಕøತಿಯನ್ನು ಬಿಂಬಿಸುವ ಸಲುವಾಗಿ ಆನೆಬಲಕ್ಕೆ ಬಂಡವಾಳ ಹೂಡಿದ್ದಾರೆ.ಪ್ರಚಾರದ ಸಲುವಾಗಿ ಮುಂಗಾರುಮಳೆ ನಿರ್ಮಾಪಕ ಈ.ಕೃಷ್ಣಪ್ಪ ಬಾಮೈದ ನಿರ್ಮಾಣ ಮಾಡಿರುವ ಚಿತ್ರದ ಟ್ರೈಲರ್‍ನ್ನು ಬಿಡುಗಡೆ ಮಾಡಿದರು.

ಛಾಯಾಗ್ರಹಣ ಜಿ.ಟಿ.ಬೆಟ್ಟೇಗೌಡಕೀಲಾರ, ಸಂಕಲನ ಬಿ.ಎಸ್.ಕೆಂಪರಾಜು, ನೃತ್ಯ ಕಲೈ, ಸಾಹಸ ಅಲ್ಟಿಮೇಟ್‍ಶಿವು ಅವರದಾಗಿದೆ. ಸಿನಿಮಾವನ್ನು ಸದ್ಯದಲ್ಲೇ ಜನರಿಗೆ ತೋರಿಸಲು ಯೋಜನೆ ಹಾಕಿಕೊಂಡಿದ್ದಾರೆ.

Related posts