Cinisuddi Fresh Cini News 

ಈ ವಾರ ತೆರೆ ಮೇಲೆ ಬರುತ್ತಿದ್ದಾನೆ “ಅಂಬಾನಿ ಪುತ್ರ”

ವಿ.ಎಸ್.ಪಿ.ಎಸ್. ಮೂವೀಸ್ ಲಾಂಛನದಲ್ಲಿ ಕೆ.ಎನ್. ವೆಂಕಟೇಶ್ ನಿರ್ಮಿಸಿರುವ “ಅಂಬಾನಿ ಪುತ್ರ” ಚಿತ್ರಕ್ಕೆ ಸೆನ್ಸಾರ್‍ಮಂಡಳಿ ಚಿತ್ರ ವೀಕ್ಷಿಸಿ ‘ಎ’ ಸರ್ಟಿಫಿಕೆಟ್ ನೀಡಿದೆ. ಚಿತ್ರವು ರಾಜ್ಯಾದ್ಯಂತ ಈವಾರ ಬಿಡುಗಡೆಯಾಗುತ್ತಿದೆ.

ಈ ಚಿತ್ರದ ನಿರ್ದೇಶನ ದೊರೈರಾಜ್.ಕೆ.ಜಿ. ಸಂಗೀತ – ಅಭಿಷೇಕ್ ಜಿ.ರಾಜ್, ಛಾಯಾಗ್ರಹಣ- ವಿ.ರಾಮಾಂಜಿನೇಯ, ಸಂಕಲನ-ಸಾಲೋಮನ್ ಕೆ ಜಾರ್ಜ್, ಸಾಹಸ – ಕುಂಫು ಚಂದ್ರು, ನೃತ್ಯ – ಹೈಟ್ ಮಂಜ, ತಾರಾಗಣದಲ್ಲಿ – ಸುಪ್ರೀಂ, ಆಶಾ, ಕಾವ್ಯ, ಮಿಮಿಕ್ರಿ ಗೋಪಿ, ಮಂಜೆಗೌಡ್ರು. ಚಂದ್ರಿಕಾ, ಸುಮಿತ್ರಾ ವೆಂಕಟೇಶ್, ಪ್ರೀತಂ, ರೋಹಿತ್ ಆದಿತ್ಯ, ಮಾ|| ಸುಹಾಸ್, ಮುಂತಾದವರಿದ್ದಾರೆ.

5 ಹಾಡುಗಳಿರುವ ಈ ಚಿತ್ರ ಕೆಲವು ನೈಜ ಘಟನೆಗಳ ಆಧಾರಗೊಂಡಿದ್ದು, ಲವ್ ಸೆಂಟಿಮೆಂಟ್ ಕಥಾವಸ್ತುವಾಗಿದೆ. ಈ ಚಿತ್ರಕ್ಕೆ ಮಂಡ್ಯ, ಹಾಸನ, ಸಕೇಶಪುರ, ಕುಮುಟ, ಹೊನ್ನಾವರ, ಮಹಾರಾಷ್ಟ್ರ ಹಾಗೂ ನಗರದಲ್ಲಿ ನಡೆದಿದೆ.

Related posts