Cinisuddi Fresh Cini News 

ಸಕಲೇಶಪುರದಲ್ಲಿ “ಅಲ್ಲೇಡ್ರಾಅಲ್ಲೇ ಬಹುಮಾನ” ಶೂಟಿಂಗ್

ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಬಿ.ಜೆ. ಪ್ರಶಾಂತ್ ನಿರ್ಮಿಸುತ್ತಿರುವ“ಅಲ್ಲೇಡ್ರಾಅಲ್ಲೇ ಬಹುಮಾನ”ಚಿತ್ರದದ್ವಿತೀಯ ಹಂತದಚಿತ್ರೀಕರಣವುಇತ್ತೀಚೆಗೆ ನಗರದಲ್ಲಿ ಮುಕ್ತಾಯಗೊಂಡಿತು.

8 ದಿವಸಗಳ ಕಾಲ ನಡೆದಚಿತ್ರೀಕರಣದಲ್ಲಿ ನಟ ಶೌರ್ಯ ಹಾಗೂ ತ್ರಿವೇಣಿಕೃಷ್ಣ ಅಭಿನಯಿಸಿದ ಹಲವಾರು ಸನ್ನಿವೇಶಗಳನ್ನು ಸತೀಶ್‍ರಾಜೇಂದ್ರನ್‍ಛಾಯಾಗ್ರಹಣದಲ್ಲಿ ನಿರ್ದೇಶಕರತ್ನತೀರ್ಥ ಚಿತ್ರಿಸಿಕೊಂಡರು.

ಚಿತ್ರದ ತೃತೀಯ ಹಂತದ ಚಿತ್ರೀಕರಣವು ಬರುವ ವಾರ ಸಕಲೇಶಪುರದಲ್ಲಿ ಆರಂಭವಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಚಿತ್ರಕ್ಕೆ ಪ್ರಶಾಂತ್ ವೈ.ಎನ್. ಅಭಿನಂದನ್‍ದೇಶಪ್ರಿಯ ಸಂಭಾಷಣೆ, ಸತೀಶ್‍ರಾಜೇಂದ್ರನ್‍ಛಾಯಾಗ್ರಹಣ, ನಾಗಭೂಷಣ್ ಸಾಹಿತ್ಯ, ವಿಜಯ್‍ರಾಜ್ ಸಂಗೀತ, ಉಜ್ವಲ್‍ಗೌಡ ಸಂಕಲನ, ಪ್ರದೀಪ್ ನಿರ್ಮಾಣ ನಿರ್ವಹಣೆ,ಬಾಬುಖಾನ್ ಕಲೆ, ಸಿದ್ದು ನಿರ್ದೇಶನ ಸಹಕಾರವಿದ್ದು, ಚಿತ್ರದಕಥೆ, ಚಿತ್ರಕಥೆ ಮತ್ತು ನಿರ್ದೇಶನರತ್ನತೀರ್ಥ.

ತಾರಾಗಣದಲ್ಲಿ ತ್ರಿವೇಣಿಕೃಷ್ಣ, ಶೌರ್ಯ, ಶಂಕರ್‍ಅಶ್ವತ್ಥ್, ನಿಖಿಲ್‍ಗೌಡ, ಸುಮಂತ್, ಭಾರತಿ, ರಘುರಾಮನ್, ಧನು ಮುಂತಾದವರಿದ್ದಾರೆ.

Share This With Your Friends

Related posts