Cinisuddi Fresh Cini News 

“ಅಲ್ಲೇ ಡ್ರಾ ಅಲ್ಲೇ ಬಹುಮಾನ” ಚಿತ್ರದ ಡಬ್ಬಿಂಗ್ ಮುಕ್ತಾಯ

ಜನನಿ ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕ ಪ್ರಶಾಂತ್ ಬಿ.ಜೆ. ನಿರ್ಮಿಸುತ್ತಿರುವ “ಅಲ್ಲೇ ಡ್ರಾ ಅಲ್ಲೇ ಬಹುಮಾನ” ಚಿತ್ರದ ಡಬ್ಬಿಂಗ್ ಕಾರ್ಯವು ನಗರದ ರೇಣು ಸ್ಟುಡಿಯೋದಲ್ಲಿ ಮುಕ್ತಾಯಗೊಂಡಿತು.

ಚಿತ್ರಕ್ಕೆ ರೀರಿಕಾರ್ಡಿಂಗ್ ಕಾರ್ಯವು ಸದ್ಯದಲ್ಲೇ ಆರಂಭವಾಗಲಿದ್ದು, ಚಿತ್ರವು ಆಗಸ್ಟ್‍ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಪ್ರಶಾಂತ್ ತಿಳಿಸಿದ್ದಾರೆ.

ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ರಘುಶಾಸ್ತ್ರೀ ಸಾಹಿತ್ಯ, ವಿಜಯ್‍ರಾಜ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ, ಉಜ್ವಲ್ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ರತ್ನ ತೀರ್ಥ ಹೊತ್ತಿದ್ದು, ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ.

ತಾರಾಗಣದಲ್ಲಿ ಶೌರ್ಯ, ತ್ರಿವೇಣಿಕೃಷ್ಣ, ಶಂಕರ್ ಅಶ್ವತ್ಥ್, ರಘು ರಮಣ ಕೊಪ್ಪ, ಕುರಿ ಬಾಂಡ್ ರಂಗಸ್ವಾಮಿ, ಧನು, ಸುಮಂತ್ ಪರಶುರಾಂ ಮುಂತಾದವರಿದ್ದಾರೆ.

Share This With Your Friends

Related posts