Bollywood Cini Gossips Cinisuddi Fresh Cini News 

ಇನ್ಫೋಸಿಸ್ ಸುಧಾಮೂರ್ತಿ ಪಾತ್ರದಲ್ಲಿ ಅಲಿಯಾ ಭಟ್

ಬಿ ಟೌನ್ ಟ್ಯಾಲೆಂಟೆಡ್ ಬ್ಯೂಟಿ ಅಲಿಯಾ ಭಟ್ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸಲು ಸಜ್ಜಾಗುತ್ತಿದ್ದಾರೆ. ಇನ್ಫೋಸಿಸ್ ಸಹ ಸಂಸ್ಥಾಪಕ ಹಾಗೂ ಮನುಕುಲ ಸೇವಾ ಯಶಸ್ವಿ ಉದ್ಯಮಿ ಇನ್ಫೋಸಿಸ್ ನಾರಾಯಣಮೂರ್ತಿ ಅವರ ಜೀವನ ಮತ್ತು ಸಾಧನೆ ಕುರಿತ ಬಯೋಪಿಕ್‍ನಲ್ಲಿ ಅಲಿಯಾ ಭಟ್, ಇನ್ಪೀ ಮೂರ್ತಿಯವರ ಪತ್ನಿ, ಲೇಖಕಿ ಮತ್ತು ಸಮಾಜ ಸೇವಕಿ ಸುಧಾ ಮೂರ್ತಿ ಅವರ ಪಾತ್ರ ಪೋಷಣೆ ಮಾಡಲಿದ್ದಾಳೆ.

ಅಶ್ವಿನಿ ಅಯ್ಯರ್ ತಿವಾರಿ ನಾರಾಯಣ ಮೂರ್ತಿ ಅವರ ಜೀವನಗಾಥೆ ಸಿನಿಮಾ ವನ್ನು ನಿರ್ದೇಶಿಸುತ್ತಿದ್ದು, ಸುಧಾ ಮೂರ್ತಿ ಪಾತ್ರಕ್ಕೆ ಅಲಿಯಾ ಸೂಕ್ತ ಎಂದು ನಿರ್ಧರಿಸಿ ಆಫರ್ ನೀಡಿದ್ದಾರಂತೆ.

ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ಆದರ್ಶ ಕಂಪತಿಗಳು, ದೇಶದ ಅಗ್ರಮಾನ್ಯ ಸಾಫ್ಟ್‍ವೇರ್ ಸಂಸ್ಥೆ ಇನ್ಫೋಸಿಸ್ ಸ್ಥಾಪನೆಯಲ್ಲಿ ಈ ದಂಪತಿ ಪ್ರಮುಖ ಪಾತ್ರ ವಹಿಸಿದರು. ಯಶಸ್ವಿ ಉದ್ಯಮಿಗಳೂ ಆಗಿರುವ ಇವರು ಮನುಕುಲ ಮತ್ತು ಸಮಾಜಸೇವೆಗಳಲ್ಲೂ ಸಕ್ರಿಯರಾಗಿದ್ದಾರೆ.

ಸರಳತೆ ಮತ್ತು ಸಜ್ಜನಿಕೆ ಮೂಲಕ ಪ್ರಸಿದ್ಧರಾಗಿರುವ ಈ ದಂಪತಿ ಜೀವನ ಸಾಧನೆ ಅನುಕರಣೀಯ. ಇವರ ಕುರಿತು ಹಿಂದಿ ಸಿನಿಮಾ ನಿರ್ಮಾಣವಾಗುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ನಿರ್ದೇಶಕಿ ಅಶ್ವಿನಿ ಈಗಾಗಲೇ ಈ ಚಿತ್ರಕ್ಕಾಗಿ ಸಾಕಷ್ಟು ಹೋಮ್‍ವರ್ಕ್‍ಗಳನ್ನು ಮಾಡುತ್ತಿದ್ಧಾರೆ. ನಾರಾಯಣಮೂರ್ತಿ ಪಾತ್ರ ನಿರ್ವಹಣೆಗಾಗಿ ನಟನ ಆಯ್ಕೆ ಇನ್ನೂ ನಿಕ್ಕಿಯಾಗಿಲ್ಲ. ಆದರೆ ಸುಧಾ ಪಾತ್ರ ನಿರ್ವಹಿಸಲು ಅಲಿಯಾ ಭಟ್‍ರನ್ನು ಅಶ್ವಿನಿ ಆಯ್ಕೆ ಮಾಡಿದ್ದಾರೆ.

ಈ ಹಿಂದೆ ಅಶ್ವಿನಿ ಮತ್ತು ಅಲಿಯಾ ಒಂದು ದೊಡ್ಡ ಪ್ರಾಜೆಕ್ಟ್‍ನಲ್ಲಿ ಒಗ್ಗೂಡಬೇಕಿತ್ತು. ಗಾಯಕಿಯಾಗಿ ಅಲಿಯಾಭಟ್ ನಟಿಸಬೇಕಿತ್ತು. ಆದರೆ ಆ ಉದ್ದೇಶಿತ ಸಿನಿಮಾ ಇನ್ನೂ ಸ್ಪಷ್ಟರೂಪ ಪಡೆದಿಲ್ಲ. ಬರೇಲಿ ಕಿ ಬರ್ಫಿ ಎಂಬ ಮನರಂಜನಾ ಸಿನಿಮಾ ನಿರ್ದೇಶಿಸಿ ಗಮನಸೆಳೆದಿದ್ದ ಅಶ್ವಿನಿ ಈಗ ಪಂಗಾ ಎಂಬ ಕ್ರೀಡಾ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

ಕಂಗನಾ ರನೌಟ್, ಜೆಸ್ಸಿ ಗಿಲ್, ರಿಚಾ ಛಡ್ಡಾ ಅಭಿನಯದ ಈ ಚಿತ್ರ ಜನವರಿ 24ರಂದು ತೆರೆ ಕಾಣಲಿದೆ. ನಾರಾಯಣ ಮೂರ್ತಿ ಬಯೋಪಿಕ್‍ಗಾಗಿ ಸ್ಕ್ರಿಪ್ಟ್ ರೆಡಿಯಾಗುತ್ತಿದ್ದು, ಆದಾದ ಬಳಿಕ ಚಿತ್ರೀಕರಣ ಶುರುವಾಗಲಿದೆ. ಇನ್ನು ಅಲಿಯಾ ಭಟ್ ಕೈಯಲ್ಲಿ ಐದು ಸಿನಿಮಾಗಳಿವೆ. ಬ್ರಹ್ಮಾಸ್ತ್ರ, ತಖ್ತ್: ಗಂಗೂಬಾಯಿ ಕಥೈವಾಡಿ, ಆರ್‍ಆರ್‍ಆರ್ ಮತ್ತು ಸಡಕ್-2 ಸಿನಿಮಾಗಳಲ್ಲಿ ಎಬಿ ಬ್ಯುಸಿ.

Share This With Your Friends

Related posts