ಬಾಲಿವುಡ್ ನಲ್ಲಿ ಮಲ್ಟಿಸ್ಟಾರ್ ‘ಕಳಂಕ್’
ಬಾಲಿವುಡ್ ದಂತದ ಗೊಂಬೆ ಸೋನಾಕ್ಷಿ ಸಿನ್ಹಾ ಈಗ ಫುಲ್ ಬ್ಯುಸಿ. ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ (ಕೆಜೊ) ಬ್ಯಾನರ್ನಲ್ಲಿ ನಿರ್ಮಾಣಗೊಳ್ಳಲಿರುವ ಬಹು ತಾರಾಗಣದ ಅದ್ಧೂರಿ ಸಿನಿಮಾ ಕಳಂಕ್ ಚಿತ್ರೀಕರಣ ಭರದಿಂದ ಸಾಗಿದೆ. 1940ರಲ್ಲಿ ಭಾರತ- ಪಾಕಿಸ್ತಾನ ನಡುವೆ ನಡೆದ ನೈಜ ಘಟನಾವಳಿಗಳು ಈ ಚಿತ್ರದ ಮೂಲ ಕಥಾವಸ್ತು. ಈ ಸಿನಿಮಾವನ್ನು 15 ವರ್ಷಗಳ ಹಿಂದೆಯೇ ಕರಣ್ ಅವರ ತಂದೆ ಯಶ್ ನಿರ್ಮಿಸುವ ಉದ್ದೇಶ ಹೊಂದಿದ್ದರು. ಆದರೆ ಕಾರಣಾಂತರಗಳಿಂದ ಇದು ಸಾಕಾರಗೊಳ್ಳಲಿಲ್ಲ.
ಬಾಲಿವುಡ್ ಹೆವಿವೇಟ್ಗಳೇ ಈ ಚಿತ್ರದಲ್ಲಿದ್ದಾರೆ. ಸಂಜಯ್ ದತ್, ವರುಣ್ ಧವನ್, ಅಲಿಯಾ ಭಟ್, ಮಾಧುರಿ ದೀಕ್ಷಿತ್, ಅಧಿತ್ಯ ರಾಯ್ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ಅಭಿನೇತ್ರಿ ಶ್ರೀದೇವಿ ನಟಿಸಬೇಕಿತ್ತು. ಆದರೆ ಅಕಾಲಿಕ ನಿಧನದಿಂದಾಗಿ ಆ ಸ್ಥಾನಕ್ಕೆ ಮಾಧುರಿ ಬಂದಿದ್ದಾರೆ. ಅಭಿಷೇಕ್ ವರ್ಮ ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ಶೂಟಿಂಗ್ ಆರಂಭವಾಗಿದ್ದು, ಸೋನಾಕ್ಷಿ ದೃಶ್ಯದ ಭಾಗಗಳ ಚಿತ್ರೀಕರಣ ನಡೆಯುತ್ತಿದ್ದ. ಸಿನಿಮಾ ಸ್ಕ್ರಿಪ್ಟ್ನನ್ನು ಬಹುವಾಗಿ ಇಷ್ಟಪಟ್ಟಿರುವ ಸೋನ ಆತ್ಯಾಸಕ್ತಿಯಿಂದ ತನ್ನ ಪಾಲಿನ ಸಿಕ್ವೇನ್ಸ್ಗಳಲ್ಲಿ ಪಾಲ್ಗೊಂಡಿದ್ದಾಳೆ.
ಈ ಹಿಂದೆ ನಟಿಸಿದ್ದ ಪಾತ್ರಗಳಿಗಿಂತ ಬಾಲಿವುಡ್ ಮುದ್ದಿನ ಅರಗಿಣಿಗೆ ಇದು ತುಂಬಾ ಭಿನ್ನ-ವಿಭಿನ್ನ ರೋಲ್. ಮುಂಬೈ ಮತ್ತಿತರ ಕಡೆ ಶೂಟಿಂಗ್ ನಡೆದಿದೆ. ಮುಂದಿನ ವರ್ಷ ಏಪ್ರಿಲ್ 19ರಂದು ಕಳಂಕ್ ತೆರೆಕಾಣಲಿದೆ. ಈಗಷ್ಟೇ ಹ್ಯಾಪಿ ಫಿರ್ ಭಾಗ್ ಜಾಯೇಗಿ ಸಿನಿಮಾದ ಶೂಟಿಂಗ್ ಮುಗಿಸಿರುವ ಸೋನ ಈಗ ದಬ್ಬಾಂಗ್ ಅಂತಾರಾಷ್ಟ್ರೀಯ ನೃತ್ಯ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾಳೆ.