Cinisuddi Fresh Cini News 

ಲೂಸ್ ಮಾದ ಯೋಗಿ ಬರ್ತ್ಡೇಗೆ “ಅಕಟಕಟ” ಫಸ್ಟ್ ಲುಕ್ ರಿಲೀಸ್

ಚಂದನವನದ ಡ್ಯಾನ್ಸಿಂಗ್ ಸ್ಟಾರ್ ಲೂಸ್ ಮಾದ ಯೋಗಿ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 31 ನೇ ವಸಂತಕ್ಕೆ ಕಾಲಿಡುತ್ತಿರೋ ಈ ಸಂದರ್ಭದಲ್ಲಿ ಒಂದು ಪ್ರತಿಭಾನ್ವಿತ ತಂಡ ವಿಶೇಷ ಟೈಟಲ್ ನೊಂದಿಗೆ, ಲೂಸ್ ಮಾದ ನಾಯಕ ನಟನಾಗಿ ಅಭಿನಯಿಸುತ್ತಿರೋ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿದ್ದು, ಹೊಸತನದ ಸಿನಿಮಾ ಕೊಡಲು ಸಿದ್ಧವಾಗಿದೆ.

ಹೌದು, ನಾಗರಾಜ್ ಸೋಮಯಾಜಿ ಆಕ್ಷನ್ ಕಟ್ ಹೇಳುತ್ತಿರೋ ಅಕಟಕಟ ಎಂಬ ವಿಶೇಷ ಟೈಟಲ್ ನ ಸಿನಿಮಾಕ್ಕೆ ಯೋಗಿ ನಾಯಕನಾಗಿ ಅಭಿನಯಿಸುತ್ತಿದ್ದು, ಜನ್ಮದಿನದಕ್ಕೆ ಫಸ್ಟ್ ಲುಕ್ ಪೋಸ್ಟರನ್ನು ವಿಶೇಷ ಉಡುಗೊರೆಯಾಗಿ ನೀಡಿದೆ ಚಿತ್ರತಂಡ.

“ದಿ ಬೆಸ್ಟ್ ಆಕ್ಟರ್” ಎಂಬ ಟೆಲಿ ಸಿನಿಮಾದ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಸೌಂಡ್ ಮಾಡಿ, ತಮ್ಮ ಕೆಲಸದ ಗುಣಮಟ್ಟವನ್ನು ಚಂದನವನದಲ್ಲಿ ತೋರಿಸಿರೋ ತಂಡ ಈ ಅಕಟಕಟ ಸಿನಿಮಾ ಮಾಡಲು ರೆಡಿಯಾಗಿ ಬಂದಿದೆ.

ಈಗಾಗಲೇ ಸಂಚಾರಿ ವಿಜಯ್, ಅಚ್ಯುತ್ ಕುಮಾರ್ ಮತ್ತೆ ರಂಗಾಯಣ ರಘು ನಟನೆಯ ಪುಕ್ಸಟ್ಟೆ ಲೈಫು ಸಿನಿಮಾ ನಿರ್ಮಾಣ ಮಾಡಿರೋ ನಾಗರಾಜ್ ಸೋಮಯಾಜಿ, ಸದ್ಯಕ್ಕೆ ಯೋಗಿಗೆ ಆಕ್ಷನ್ ಕಟ್ ಹೇಳಲು ಎಲ್ಲಾ ತರಹದ ಸಿದ್ಧತೆ ಮಾಡಿಕೊಂಡಿದ್ದು, ಇವರ ಜೊತೆಯಲ್ಲಿ ಬರವಣಿಗೆಯಲ್ಲಿ ಬಾಸ್ಕರ್ ಬಂಗೇರಾ ಮತ್ತು ಹರೀಶ್ ನಿನಾಸಂ ಸಾಥ್ ಕೊಡಲಿದ್ದಾರೆ.

ಎಸ್ ಕೆ ರಾವ್ ಛಾಯಾಗ್ರಾಹಕರಾಗಿ ಕೈಚಳಕ ತೋರಿಸಲು ಸನ್ನದ್ಧರಾಗಿದ್ದು, ಮ್ಯಾಥ್ಯೂಸ್ ಮನು ಸಂಗೀತ ನೀಡುತಿದ್ದಾರೆ. ಸ್ವತಃ ಲೂಸ್ ಮಾದ ಅವರೇ ತುಂಬಾನೇ ಇಷ್ಟಪಟ್ಟು ಮಾಡುತ್ತಿರೋ ಅಪರೂಪದ ಕಥೆ ಇದಾಗಿದ್ದು, ಒಂದೊಳ್ಳೆ ಸಿನಿಮವಾಗುತ್ತೆ ಅನ್ನೋ ಪ್ರಬಲ ನಂಬಿಕೆ ಚಿತ್ರತಂಡದ್ದು.

ಚಿತ್ರತಂಡ ಸದ್ಯ ಬೇರೆ ಯಾವುದೇ ವಿವರ ಬಿಟ್ಟುಕೊಡದೇ, ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ಮಗ್ನರಾಗಿದ್ದು, ಹೊಸತನದ ಸಿನಿಮಾ ಕೊಡುವಲ್ಲಿ ಶ್ರಮವಹಿಸುತ್ತಿದೆ.

Share This With Your Friends

Related posts