Cinisuddi Fresh Cini News 

ಕ್ರಿಸ್ಟಲ್ ಪಾರ್ಕ್ ಬ್ಯಾನರ್‌ನ ಹೊಸ ಚಿತ್ರದಲ್ಲಿ ಅಜಯ್ ರಾವ್

ಸ್ಯಾಂಡಲ್ ವುಡ್ ನ ಲಕ್ಕಿ ನಿರ್ಮಾಪಕರಂದೇ ಗುರುತಿಸಿಕೊಂಡಿರುವ ಮೈಸೂರಿನ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನ ಮಾಲಿಕರಾದ ಟಿ. ಆರ್. ಚಂದ್ರಶೇಖರ್ ನಿರ್ಮಾಣದಲ್ಲಿ ಮತ್ತೊಂದು ಚಿತ್ರ ಆರಂಭಗೊಳ್ಳುತ್ತಿದೆ.

ಚಮಕ್ , ಅಯೋಗ್ಯ ಹಾಗೂ ಬೀರ್ ಬಲ್ ನಂತಹ ವಿಭಿನ್ನ ಬಗೆಯ ಚಿತ್ರಗಳನ್ನು ನೀಡಿ ಗಮನ ಸೆಳೆದಂತಹ ಈ ಸಂಸ್ಥೆಯಲ್ಲಿ ಎಕ್ಸ್ ಕ್ಯೂಸ್ ಮಿ… , ಕೃಷ್ಣನ್ ಲವ್ ಸ್ಟೋರಿ , ಕೃಷ್ಣ ಲೀಲಾ ಚಿತ್ರ ಖ್ಯಾತಿಯ ನಟ ಕೃಷ್ಣ ಅಜಯ್ ರಾವ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಸುಮಾರು 10 ವರ್ಷಗಳಿಂದ ಚಿತ್ರಂಗದಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿದಂತಹ ತಿಮ್ಮೇಗೌಡ (ಜಾಕಿ) ಈಗ ಸ್ವತಂತ್ರ ನಿರ್ದೇಶಕರಾಗಿ ಅಡಿಯಿಟ್ಟಿದ್ದಾರೆ. ಭಾಗ್ಯದ ಬಳೆಗಾರ, ದೇವರು ಕೊಟ್ಟ ತಂಗಿ, ತಮಸ್ಸು, ಲಕ್ಕಿ, ವಿಕ್ಟರಿ, ಅಧ್ಯಕ್ಷ, ರನ್ನ, ಹಾಗೂ ಕೆ.ಜಿ.ಎಫ್ ಚಿತ್ರಗಳಿಗೆ ಕೆಲಸ ಮಾಡಿದ ಲಕ್ಕಿ ಈಗ ಒಂದು ನವಿರಾದ ಹಳ್ಳಿ ಸೊಗಡಿನ ಕಥೆಯೊಂದಿಗೆ ಭದ್ರ ನೆಲೆ ಕಾಣಲು ಮುಂದಾಗಿದ್ದಾರೆ.

ಇನ್ನು ಈ ಚಿತ್ರದ ಉಳಿದ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಚಿತ್ರದ ಕುರಿತು ಮಾಹಿತಿಯನ್ನು ನಿರ್ದೇಶಕ ಜಾಕಿ ನೀಡಲಿದ್ದಾರಂತೆ. ಮುಂದಿನ ತಿಂಗಳು ಶೂಟಿಂಗ್ ಆರಂಭ ಗೊಳಿಸಲು ಸಕಲ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಳ್ಳುತ್ತಿದೆ.

Share This With Your Friends

Related posts