Cinisuddi Fresh Cini News 

“ಕೃಷ್ಣ ಟಾಕೀಸ್”ನಲ್ಲಿ ಅಜಯ್ ರಾವ್ ಜರ್ನಲಿಸ್ಟ್

ಕೃಷ್ಣ ಟಾಕೀಸ್…ಸಿನಿಮಾ ಹೆಸರು ಈಗಾಗಲೇ ಎಲ್ಲರ ನೆನಪಲ್ಲೂ ಅಚ್ಚೆಯಾಗಿದೆ. ಅಜಯ್ ರಾವ್ ಎಂಬ ಅದ್ಬುತ ನಟ ಕೃಷ್ಣ ಟಾಕೀಸ್ ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಇದೇ ತಿಂಗಳ 16 ರಂದು ಥಿಯೇಟರ್ ಗಳಲ್ಲಿ ಕೃಷ್ಣ ಟಾಕೀಸ್ ಕಥೆ ಹೇಳೋದಕ್ಕೆ ತಂಡ ರೆಡಿಯಾಗಿದೆ.

ಈ ಸಿನಿಮಾ ಶುರು ಆದಾಗಿನಿಂದ ಕೆಲವೊಂದು ಸ್ಪೆಷಲ್ ವಿಚಾರಗಳಿಗೆ ಆಗಾಗ ಸೌಂಡ್ ಮಾಡ್ತಾನೆ ಇರುತ್ತೆ. ರಿಲೀಸ್ ವಿಚಾರಕ್ಕೆ ಸೌಂಡ್ ಮಾಡ್ತಿರೋದು ಸ್ವಲ್ಪವಾದ್ರೆ ಐಪಿಎಲ್ ವಿಚಾರಕ್ಕೆ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಆರ್ಸಿಬಿ ಫ್ಯಾನ್ಸ್ ಎಲ್ಲಾ ಕಪ್ ನಮ್ದೆ ಕಪ್ ನಮ್ದೆ ಅನ್ನೋದರ ಜೊತೆಗೆ ಕೃಷ್ಣ ಟಾಕೀಸ್ ಕೃಷ್ಣ ಟಾಕೀಸ್ ಅನ್ನೋ ಸೌಂಡ್ ಕೂಡ ಜೋರಾಗಿದೆ.

ಸಿನಿಮಾ ಸಸ್ಪೆನ್ಸ್, ಥ್ರಿಲ್ಲರ್ ಹಾರಾರ್ ಕಥಾಹಂದರವನ್ನ ಹೊಂದಿದೆ. ಅಜಯ್ ರಾವ್ ಜೊತೆ ಚಿಕ್ಕಣ್ಣ ಕೂಡ ನಟಿಸಿದ್ದಾರೆ. ಹೊರಗಡೆಯೂ ಸದ್ಯ ಐಪಿಎಲ್ ಫೀವರ್ ಜೋರಾಗಿದೆ. ಅದಕ್ಕೆ ತಕ್ಕ ಹಾಗೇ ಸಿನಿಮಾದಲ್ಲೂ ಐಪಿಎಲ್ ದೇ ಹವಾ. ಚಿಕ್ಕಣ್ಣ ಹೊಡೆಯೋ ಡೈಲಾಗ್ ಆರ್ಸಿಬಿ ಫ್ಯಾನ್ಸ್ ಫುಲ್ ಫಿದಾ ಆಗೋಗವ್ರೆ. ಪೂರ್ತಿ ಡೈಲಾಗ್ ನ ಕೇಳೆ ಬೇಕು ಅನ್ನೋ ಹಂಬಲ ಆರ್ಸಿಬಿ ಫ್ಯಾನ್ಸ್ ನಲ್ಲಿ ಹೆಚ್ಚಾಗಿದೆ.

ಕೃಷ್ಣ ಟಾಕೀಸ್ ಒಂದು ಸಿನಿಮಾ ಹಾಲ್ ಮೇಲೆ ಎಣೆಯಲಾಗಿರುವ ಕಥೆಯಾಗಿದೆ. ನಿರ್ದೇಶಕ ವಿಜಯಾನಂದ್ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಜಯ್ ರಾವ್ ಕೃಷ್ಣ ಟಾಕೀಸ್ ನಲ್ಲಿ ಪತ್ರಕರ್ತನಾಗಿ ಎಂಟ್ರಿ ಪಡೆದಿದ್ದಾರೆ. ಕೊರೊನಾ ಕರಿಛಾಯೆ ಕೃಷ್ಣ ಟಾಕೀಸ್ ನನ್ನು ಆವರಿಸಿತ್ತು. ಈಗಾಗಲೇ ರಿಲೀಸ್ ಆಗಬೇಕಿದ್ದ ಸಿನಿಮಾ ಕೃಷ್ಣ ಟಾಕೀಸ್. ಕೊರೊನಾದಿಂದ ಪೋಸ್ಟ್ ಪೋನ್ ಆಗಿತ್ತು. ಇದೀಗ ಎಲ್ಲವೂ ಸರಿಯಾಗಿದ್ದು ಏಪ್ರಿಲ್ 16ರಂದು ಭರ್ಜರಿ ಓಪೆನಿಂಗ್ ಪಡೆಯಲಿದೆ.

ಗೋಕುಲ್ ಎಂಟರ್‌ಟೈನರ್ ಬ್ಯಾನರ್​ನಡಿ ಗೋವಿಂದರಾಜು ಎ.ಎಚ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಸಾರಥ್ಯದಲ್ಲಿ ಹಾಡುಗಳು ಮೂಡಿಬಂದಿವೆ. ಛಾಯಾಗ್ರಾಹಣ ಅಭಿಷೇಕ್ ಜಿ ಕಾಸರಗೋಡು, ಶ್ರೀಕಾಂತ್ ಸಂಕಲನ, ವಿಕ್ರಂ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳು ಮೂಡಿ ಬಂದಿವೆ. ಸಿಂಧೂ ಲೋಕನಾಥ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಶೋಭರಾಜ್, ಮಂಡ್ಯ ರಮೇಶ್, ನಿರಂತ್, ಯಶ್ ಶೆಟ್ಟಿ, ಉಮೇಶ್, ಶ್ರೀನಿವಾಸ ಪ್ರಭು, ಶಾಂಭವಿ, ಲಕ್ಷ್ಮಿಗೌಡ, ಯಮುನಾ, ಧರ್ಮೇಂದ್ರ ಅರಸ್ ಚಿತ್ರದ ತಾರಾಗಣದಲ್ಲಿದ್ದಾರೆ.

Related posts