Cinisuddi Fresh Cini News 

ಅದಿತಿ ಪ್ರಭುದೇವ ಈಗ ‘ಪರ್ಫೆಕ್ಟ್ ಗರ್ಲ್’

ನಟಿ ಅದಿತಿ ಪ್ರಭುದೇವ ಅವರು ಕಿರುತೆರೆಯ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. ಇದೀಗ ಅವರ ಅಭಿನಯದ ಮೊದಲ ಮ್ಯೂಸಿಕ್ ಆಲ್ಬಂ ಕೂಡ ಬಿಡುಗಡೆಯಾಗುತ್ತಿದೆ.

ಪರ್ಫೆಕ್ಟ್ ಗರ್ಲ್ ಅನ್ನೋ ಹೆಸರಿನ ಈ ಮ್ಯೂಸಿಕ್ ಆಲ್ಬಂ ಇದೇ ಅಕ್ಟೋಬರ್ ಒಂದರಂದು ಆನಂದ್ ಆಡಿಯೊ ಯೂ ಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಯಾಗಲಿದೆ. ನಾಗಕನ್ನಿಕೆ ಎಂಬ ಧಾರವಾಹಿಯ ನಂತರ ಬೆಳ್ಳಿತೆರೆಗೆ ಬಂದ ಅದಿತಿ ಪ್ರಭುದೇವ ಅವರ ಮೊದಲ ಮ್ಯೂಸಿಕ್ ವಿಡಿಯೊವಿದು.

ಈ ಮ್ಯೂಸಿಕ್ ಆಲ್ಬಂಗೆ ಹೊಸಪ್ರತಿಭೆ ಅಭಿ ಮುಲ್ತಿ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರೇ ಹಾಡಿನ ಸಾಹಿತ್ಯ ಬರೆದು ನಿರ್ಮಾಣ ಕೂಡ ಮಾಡಿದ್ದಾರೆ. ಈ ಆಲ್ಬಂ ವಿಡಿಯೊದಲ್ಲಿ ಅವರೂ ಸಹ ನಾಯಕಿ ಅದಿತಿ ಅವರ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ಬೆಂಗಳೂರು ಹೊರವಲಯದಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ಈ ಹಾಡಿನ ಕೊರಿಯೊಗ್ರಫಿ ಅಭಿಷೇಕ್ ಮಲ್ನಾಡ್ ಅವರದ್ದು. ಶಿವಸೇನಾ ಅವರ ಕ್ಯಾಮರಾ ವರ್ಕ, ಹಿನ್ನೆಲೆ ಸಂಗೀತ ಬಸ್ಸಿಕ್ಸ್ ಮಾಡಿದ್ದಾರೆ. ಚಂದನ್‍ಗೌಡ ಅದಿತಿಯವರ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಮಹೇಶ್ ಎಸ್. ಸಂಕಲನ ಮಾಡಿದ್ದಾರೆ.

ಅದಿತಿ ಪ್ರಭುದೇವ ಅವರು ಇತ್ತೀಚೆಗೆ ನಟಿಸಿದ್ದ ಚಿತ್ರ ಬ್ರಹ್ಮಚಾರಿ. ಇದೀಗ ಅವರ ಬಳಿ ವಿಜಯ್ ಪ್ರಸಾದ್ ಅವರನಿರ್ದೇಶನದ ತೋತಾಪುರಿ, ಎಂ. ಜಿ. ಶ್ರೀನಿವಾಸ್ ಅವರ ನಿರ್ದೇಶನದ ಓಲ್ಡï ಮಾಂಕ್, ಅಭಿಷೇಕ್ ಶೆಟ್ಟಿ ನಿರ್ದೇಶನದ ಗಜಾನನ ಮತ್ತು ಗ್ಯಾಂಗ್ ಚಿತ್ರಗಳಿವೆ.

Related posts