Cinisuddi Fresh Cini News 

ನಟನೆಗೆ ಸವಾಲೊಡ್ಡುವ ಪಾತ್ರಗಳಲ್ಲಿ ನಟಿಸುವಾಸೆ : ದಿವ್ಯಾ ಆಚಾರ್

ನಾಗರಾಜ್ ಎಂಜಿ ಗೌಡ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಡಿಸೆಂಬರ್ 24. ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಯುವ ಕಲಾವಿದೆ ದಿವ್ಯಾಆಚಾರ್ ತಾನು ಕನ್ನಡ ಚಿತ್ರರಂಗದಲ್ಲಿ ಒಬ್ಬ ಪ್ರತಿಭವಂತ ಕಲಾವಿದೆಯಾಗಿ ಗುರ್ತಿಸಿಕೊಳ್ಳಬೇಕು ಎಂಬ ಆಶಯ ಹೊಂದಿದ್ದಾರೆ.

ಬಾಲ್ಯದಿಂದಲೂ ನಟನೆಯ ಬಗ್ಗೆ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡು ಬಂದಿದ್ದ ದಿವ್ಯಾ ಆಚಾರ್ ತನ್ನ ಶಾಲಾ, ಕಾಲೇಜು ದಿನಗಳಲ್ಲೇ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಏಕಪಾತ್ರಾಭಿನಯದ ಜೊತೆಗೆ ಕೆಲವು ಸ್ಕಿಟ್‍ಗಳಲ್ಲಿ ನಟಿಸಿದ್ದಾರಲ್ಲದೆ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರವನ್ನೂ ಸಹ ನಿರ್ವಹಿಸಿದ್ದಾರೆ.

ಅದಾದ ನಂತರ ಮೊದಲಬಾರಿಗೆ ಬಂಗಾರಪುರ ಎನ್ನುವ ಚಲನಚಿತ್ರದಲ್ಲಿ ಬಣ್ಣ ಹಚ್ಚಿದ್ದರು, ಆದರೆ ಅದೇಕೋ ಆ ಚಿತ್ರ ನಿರ್ಮಾಣ ಹಂತದಲ್ಲೇ ಹಲವಾರು ಸಮಸ್ಯೆಗಳ ಕಾರಣದಿಂದ ಸ್ಥಗಿತಗೊಂಡಿತು. ಆ ನಂತರ ದಿವ್ಯಾ ಅವರ ಪ್ರತಿಭೆಯನ್ನು ಒರೆಗೆ ಹಚ್ಚುವಂಥ ಸಾಕಷ್ಟು ಆಫರ್‍ಗಳು ತಮಿಳು, ತೆಲುಗು ಚಿತ್ರರಂಗದಿಂದ ಬಂದರೂ ಸಹ, ತಾನು ಕನ್ನಡ ಚಿತ್ರದಿಂದಲೇ ಬೆಳಕಿಗೆ ಬರಬೇಕೆಂಬ ಉದ್ದೇಶದಿಂದ ಬಂದಂಥ ಅವಕಾಶಗಳನ್ನೆಲ್ಲ ತಿರಸ್ಕರಿಸಿದ್ದಾರೆ.

ಆನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಎಂಟ್ರಿಕೊಟ್ಟು ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಾಡೆಲಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಹೆಸರು. ಕೀರ್ತಿ ಎರಡನ್ನೂ ದಿವ್ಯಾ ಗಳಿಸಿಕೊಂಡರು, ಎನ್ಮೋರಾ ಮಾಡೆಲ್ ಸ್ಪರ್ಧೆಯಲ್ಲಿ ರನ್ನರ್‍ಅಪ್ ಮತ್ತು ಕರ್ನಾಟಕದಲ್ಲೇ ಆಯೋಜಿಸಿದ್ದ ಸಾಂಪ್ರದಾಯಿಕ ಕಿಂಗ್ ಅಂಡ್ ಕ್ವೀನ್ ಸ್ಪರ್ಧೆಯಲ್ಲಿ ಸೆಮಿಫೈನಲ್ ಹಂತಕ್ಕೂ ಎಂಟ್ರಿಯಾಗಿದ್ದರು.

ಆದರೆ ತಾನು ಚಿತ್ರದಲ್ಲಿ ನಟಿಸಿ ಉತ್ತಮ ಕಲಾವಿದೆಯಾಗಿ ಗುರ್ತಿಸಿಕೊಳ್ಳಬೇಕೆಂಬ ಆಸೆಯಿಂದ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ದಿವ್ಯಾ ಆಚಾರ್‍ಗೆ ಕೊನೆಗೂ ನಾಗರಾಜ್ ನಿರ್ದೇಶನದ ಡಿಸೆಂಬರ್ 24 ಚಿತ್ರದ ನಿರ್ದೇಶಕರಿಂದ ಕರೆ ಬಂದಿದೆ.

ಡಿಸೆಂಬರ್ 24 ಚಿತ್ರದಲ್ಲಿ ನನಗೆ ಉತ್ತಮವಾದ ಹಾಗೂ ಪ್ರಮುಖವಾದ ಪಾತ್ರವಿದೆ. ನಿರ್ದೇಶಕ ಎಂಜಿ ನಾಗರಾಜ್ ಗೌಡ ಹಾಗೂ ನಿರ್ಮಾಪಕರಾದ ದೇವು ಹಾಸನ್ ಅವರು ನನಗೆ ಹಲವಾರು ದೊಡ್ಡ ದೊಡ್ಡ ಕಲಾವಿದರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶವನ್ನು ಚಿತ್ರದಲ್ಲಿ ನೀಡಿದ್ದರು.

ಈ ಚಿತ್ರದ ನಂತರ ನನಗೆ ಇನ್ನೂ 2-3 ಕನ್ನಡ ಚಿತ್ರಗಳಿಂದ ಅಫರ್ ಬಂದಿದೆ, ಕಥೆಯ ಬಗ್ಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಅವುಗಳನ್ನು ಅಂತಿಮಗೊಳಿಸಬೇಕಿದೆ, ನಾನು ಭವಿಷ್ಯದಲ್ಲಿ ನಟನೆಗೆ ಸವಾಲೊಡ್ಡುವಂಥ ಛಾಲೆಂಜಿಂಗ್ ಪಾತ್ರಗಳಲ್ಲೇ ಕಾಣಿಸಿಕೊಳ್ಳಬೇಕೆಂಬ ಆಸೆ ಇಟ್ಟುಕೊಂಡಿದ್ದೇನೆ.

ಕನ್ನಡ ಜನತೆ ನನ್ನ ಪ್ರತಿಭೆಯನ್ನು ಗುರ್ತಿಸಿ ಚಿತ್ರರಂಗದಲ್ಲಿ ಬೆಳೆಸುವರೆಂಬ ನಂಬಿಕೆಯಿದೆ ಎಂದು ದಿವ್ಯಾ ಆಚಾರ್ ಖುಷಿಯಿಂದಲೇ ಹೇಳಿಕೊಳ್ಳುತಾರೆ, ಡಿಸೆಂಬರ್ 24 ಎನ್ನವ ಟೈಟಲ್ಲೇ ಹೇಳುವ ಹಾಗೆ ಸಸ್ಪೆನ್ಸ್, ಥ್ರಿಲ್ಲರ್, ಹಾರರ್, ಲವ್, ಸೆಂಟಿಮೆಂಟ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳನ್ನು ಒಳಗೊಂಡಿರುವ ಚಿತ್ರ.

ಎ.ದೇವುಹಾಸನ್, ವಿ.ಬೆಟ್ಟೇಗೌಡ ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗರಾಜ್ ಎಂ.ಜಿ.ಗೌಡ ಮೊದಲಬಾರಿಗೆ ಆ್ಯಕ್ಷನ್‍ಕಟ್ ಹೇಳಿದ್ದಾರೆ. ವೈದ್ಯಕೀಯ ಸಂಶೋಧನೆಯ ಸುತ್ತ ಹೆಣೆಯಲಾಗಿರುವ ಈ ಚಿತ್ರದ ಕಥೆಗೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗ ಎಂಬಲ್ಲಿ ನಡೆದಂಥ ನೈಜ ಘಟನೆಯೇ ಪ್ರೇರಣೆಯಾಗಿದೆ.

Related posts