Cinisuddi Fresh Cini News Kollywood 

ತಮಿಳಿನ ಖ್ಯಾತ ಹಾಸ್ಯನಟ ವಡಿವೇಲು ಬಾಲಾಜಿ ನಿಧನ

ಖ್ಯಾತ ತಮಿಳು ಹಾಸ್ಯನಟ ವಡಿವೇಲು ಬಾಲಾಜಿ (45) ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನರಾಗಿದ್ದಾರೆ.   ವಡಿವೇಲು ಅವರಿಗೆ 14 ದಿನಗಳ ಹಿಂದೆ ಪಾಶ್ರ್ವವಾಯು ಮತ್ತು ಹೃದಯಾಘಾತವಾಗಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ ರಾತ್ರಿ ಅವರಿಗೆ ಮತ್ತೊಮ್ಮೆ ಹೃದಯಾಘಾತವಾಗಿ ಕೊನೆಯುಸಿರೆಳೆದರು.

ಚೆನೈನ ಮದುರೈನಲ್ಲಿ 17ನೇ ಫೆಬ್ರವರಿ 1976ರಲ್ಲಿ ಜನಿಸಿದ ಅವರು ಪ್ರಸಿದ್ಧ ಮಿಮಿಕ್ರಿ ಕಲಾವಿದರಾಗಿದ್ದರು. ತಮಿಳು ಚಿತ್ರರಂಗ ಹೆಸರಾಂತ ಹಾಸ್ಯ ಕಲಾವಿದ ವಡಿವೇಲು ಅವರ ಹಾವಭಾವವನ್ನು ಅನುಕರಿಸುತ್ತಿದ್ದ ಕಾರಣ ಇವರಿಗೆ ವಡಿವೇಲು ಬಾಲಾಜಿ ಎಂಬ ಹೆಸರು ಬಂದಿತ್ತು.

1991ರಿಂದ ಕಾಲಿವುಡ್‍ನಲ್ಲಿ ಸಕ್ರಿಯರಾಗಿದ್ದ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ಧಾರೆ. ಅಲ್ಲ ಟಿವಿ ವಾಹಿನಿಗಳಲ್ಲಿ ಜನಪ್ರಿಯ ಕಾಮಿಡಿ ಶೋಗಳಲ್ಲೂ ಪ್ರಸಿದ್ಧರಾಗಿದ್ದರು.

ವಡಿವೇಲು ಬಾಲಾಜಿ ನಿಧನಕ್ಕೆ ಕಾಲಿವುಡ್ ಖ್ಯಾತ ಹಾಸ್ಯನಟ ವಿವೇಕ್, ತಾರೆಯರಾದ ಐಶ್ವರ್ಯ ರಾಜೇಶ್, ಶಂತನು, ಬಾಲ ಸರವಣನ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ಧಾರೆ.

Share This With Your Friends

Related posts