Cinisuddi Fresh Cini News 

ನಟ ಶರಣ್ ಆಸ್ಪತ್ರೆಗೆ ದಾಖಲು..!

ಇತ್ತೀಚೆಗಷ್ಟೇ ಚಲನಚಿತ್ರ ಚಟುವಟಿಕೆಗಳು ಆರಂಭಗೊಂಡಿದೆ. ನಟ ಶರಣ್ ಕೂಡ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಅವತಾರಪುರುಷ ಚಿತ್ರೀಕರಣದ ವೇಳೆ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದಾ ಲವಲವಿಕೆಯಿಂದ ಇರುತ್ತಿದ್ದ , ಶರಣ್ ಇಂದು ಮುಂಜಾನೆ ಚಿತ್ರೀಕರಣದ ವೇಳೆ ಅನಾರೋಗ್ಯ ಕೊಂಡಿದ್ದು ಇಡೀ ಚಿತ್ರತಂಡಕ್ಕೆ ಗಾಬರಿಯಾಗಿದೆ.

ಅವತಾರ ಪುರುಷ ಸಿನಿಮಾದ ನಿರ್ದೇಶಕ ಸಿಂಪಲ್ ಸುನಿ ಹಾಗೂ ನಿರ್ಮಾಪಕರು ಆ ಕೂಡಲೇ ನಟ ಶರಣ್ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಅಂತ ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಬೆಂಗಳೂರಿನಲ್ಲಿರುವ ಹೆಚ್. ಎಂ.ಟಿ. ಗ್ರೌಂಡ್ ನಲ್ಲಿ ಅವತಾರ ಪುರುಷ ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ನಟ ಶರಣ್ ರನ್ನ ಆಸ್ಪತ್ರೆಗೆ ದಾಖಲಾಗಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು , ಇನ್ನು ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬರಬೇಕಿದೆ.

Related posts