Cinisuddi Fresh Cini News Kollywood 

ತಮಿಳು ನಟ ಶಾಮ್ ಅರೆಸ್ಟ್

ದಕ್ಷಿಣ ಭಾರತದ ನಟ ಶಾಮ್ ಪೊಲೀಸರ ಅತಿಥಿಯಾಗಿದ್ದಾರೆ. ಕನ್ನಡದ ಕ್ರೇಜಿ ಕ್ವೀನ್ ರಕ್ಷಿತಾ ಹಾಗೂ ರಮ್ಯ ಅಭಿನಯದ “ತನನಂ ತನನಂ” ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದ ಅಲ್ಲದೆ ತೆಲುಗಿನ ಕಿಕ್, ರೇಸುಗುರ್ರಂ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಶಾಮ್ ಅಲಿಯಾಸ್ ಶಂಶುದ್ದೀನ್ ಇಬ್ರಾಹಿಂ ಅವರನ್ನು ಚೆನ್ನೈನ ಅಪಾರ್ಟ್‍ಮೆಂಟ್‍ನಲ್ಲಿ ಪೋಲೀಸರು ಬಂಧಿಸಿದ್ದಾರೆ.

ಶಾಮ್ ಅವರ ಜೊತೆಗೆ ಇನ್ನೂ 11 ಜನರನ್ನು ಚೆನ್ನೈ ಪೋಲೀಸರು ಬಂಧಿಸಿದ್ದು , ಇವರುಗಳ ಮೇಲೆ ಲಾಕ್‍ಡೌನ್ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಜೂಜಾಟ ನಡೆಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಲಾಕ್‍ಡೌನ್ ಸಮಯದಲ್ಲಿ ಅಕ್ರಮವಾಗಿ ಶಾಮ್ ತಮ್ಮ ನಿವಾಸದಲ್ಲಿಯೇ ಜೂಜಾಟದ ಅಡ್ಡೆ ನಡೆಸುತ್ತಿದ್ದಲ್ಲದೆ ಹಲವು ಸ್ಯಾಂಡಲ್‍ವುಡ್ ಕಲಾವಿದರೂ ಇಲ್ಲಿ ಪಾಲ್ಗೊಂಡ್ದಿರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಚೆನ್ನೈ ಪೋಲೀಸರು ಶಾಮ್ ಅವರ ಮನೆಯ ಮೇಲೆ ದಾಳಿ ನಡೆಸಿ ಶಾಮ್ ಸೇರಿದಂತೆ ಇತರರನ್ನು ಬಂಧಿಸಿದ್ದಾರೆ.

ಶಾಮ್ ಫೋಕರ್ ಎಂಬ ಕ್ಲಬ್ ಸ್ಥಾಪಿಸಿ ಅದರ ಮೂಲಕ ಜೂಜು ಅಡ್ಡೆ ನಡೆಸುತ್ತಿದ್ದು , ಅಲ್ಲಿಗೆ ಹಲವರನ್ನು ಕರೆಸಿಕೊಂಡು ಜೂಜಾಟ ನಡೆಸುತ್ತಿದ್ದರಂತೆ. ಅಲ್ಲಿ ಜೂಜಾಟ ಮಾತ್ರವಲ್ಲದೆ ಇನ್ನೂ ಕೆಲವು ಕಾನೂನುಬಾಹಿರ ಚಟುವಟಿಕೆಗಳನ್ನು ಈ ಕ್ಲಬ್ ಸದಸ್ಯರು ನಡೆಸಿರಬಹುದು ಎಂಬ ಅನುಮಾನವನ್ನು ಪೋಲೀಸರು ವ್ಯಕ್ತಪಡಿಸಿದ್ದಾರೆ.

ವಾಹನ, ಅಪಾರ ಪ್ರಮಾಣದ ಹಣ, ಮೊಬೈಲ್ ಜೊತೆಗೆ ಜೂಜು ಆಡಲು ವಿತರಿಸಿದ್ದ ಟೋಕನ್‍ಗಳನ್ನು ಸಹ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕನ್ನಡದಲ್ಲಿ ತನನಂ ತನನಂ, ಗೇಮ್ ಮತ್ತು ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾದಲ್ಲಿ ಸಹ ಶಾಮ್ ನಟಿಸಿದ್ದಾರೆ. ಪ್ರಸ್ತುತ ವರ ಅಭಿನಯದ ಇನ್ನೊಂದು ಚಿತ್ರ ಚಿತ್ರೀಕರಣದ ಹಂತದಲ್ಲಿದೆ.

ತಮಿಳುನಾಡಿನಲ್ಲಿ ಕೊರೋನಾ ವೈರಸ್ ಲಾಕ್ಡೌನ್ ಹೇರಿದ ಬಳಿಕ ಕೆಲಸವಿಲ್ಲದೆ ಸಾಕಷ್ಟು ಯುವಕರು ಜೂಜಾಟದ ಮೊರೆ ಹೋಗಿದ್ದರು. ಹಾಗಾಗಿಯೇ ತಮಿಳುನಾಡಿನಲ್ಲಿ ಜೂಜಾಟದ ಅಡ್ಡೆಗಳ ಮೇಲೆ ಪೋಲೀಸರು ನಿರಂತರ ದಾಳಿ ನಡೆಸುತ್ತಿದ್ದು, ಆ ಸಮಯದಲ್ಲಿ ಶಾಮ್ ಕೂಡ ತಗಲಾಕಿಕೊಂಡಿದ್ದಾರೆ. ಮುಂದೆ ಈ ಪ್ರಕರಣದಲ್ಲಿ ಯಾವೆಲ್ಲಾ ತಿರುವು ಪಡೆದುಕೊಳುತ್ತೆದೆ ಎಂಬುದನ್ನು ಕಾದು ನೋಡಬೇಕಾಗಿದೆ.

Share This With Your Friends

Related posts