ಅಭಿಷೇಕ್ ಅಂಬರೀಶ್ ಇಂದು ಅವಿವಾ ಬಿದ್ದಪ್ಪ ಜೊತೆ ನಿಶ್ಚಿತಾರ್ಥ.
ಚಿತ್ರರಂಗದಲ್ಲಿ ಮತ್ತೊಂದು ಭರ್ಜರಿ ಸುದ್ದಿ ಹೊರ ಬಂದಿದೆ. ಖ್ಯಾತ ನಟ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಂಸದೆ ಸುಮಲತಾ ರವರ ಸುಪುತ್ರ ಅಭಿಷೇಕ ಅಂಬರೀಶ್ ರವರ ಎಂಗೇಜ್ಮೆಂಟ್ ಕಾರ್ಯಕ್ರಮ ಬೆoಗಳೂರಿನ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ ನಡೆಯಿತು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಇಂದು ಎಂಗೇಜ್ ಆಗಿದ್ದಾರೆ. ಈ ಒಂದು ನಿಶ್ಚಿತಾರ್ಥ ಸಮಾರಂಭವು ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಮುಂದಿನ ವರ್ಷ ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಲಿಯಂತೆ.
ಅಭಿಷೇಕ್ ಹಾಗೂ ಅವಿವಾ ಅವರು ಬಹಳ ವರ್ಷಗಳಿಂದ ಸ್ನೇಹಿತರಾಗಿದ್ದು, ನಂತರ ಅದು ಪ್ರೇಮಕ್ಕೆ ತಿರುಗಿ ಈಗ ಎಂಗೇಜ್ಮೆಂಟ್ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಮುಂದಾಗುತ್ತಿದ್ದಾರೆ. ಎರಡು ಕುಟುಂಬದ ಒಪ್ಪಿಗೆ ಮೇರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರೋದ್ಯಮದ ತಾರೆಯರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್ ದಂಪತಿಗಳು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕ ಮಹೇಶ್ ಕುಮಾರ್, ಸೇರಿದಂತೆ ರಾಜಕೀಯದ ಕೆಲವು ಗಣ್ಯರು ಹಾಗೂ ಸಿನಿ ತಾರೆಯರು ಆಗಮಿಸಿ ಯುವ ಜೋಡಿಗಳಿಗೆ ಶುಭವನ್ನು ಹಾರೈಸಿದರು.