Cini Reviews Cinisuddi Fresh Cini News 

ಏಟಿಗೆ ಎದುರೇಟು “ಅಬ್ಬರ” (ಚಿತ್ರವಿಮರ್ಶೆ -ರೇಟಿಂಗ್ :3.5/5)

ರೇಟಿಂಗ್ :3.5/5
ಚಿತ್ರ: ಅಬ್ಬರ
ನಿರ್ದೇಶಕ : ಕೆ. ರಾಮನಾರಾಯಣ್ ನಿರ್ಮಾಪಕ : ಬಸವರಾಜ್ ಮಂಚಯ್ಯ
ಸಂಗೀತ : ರವಿ ಬಸ್ರೂರು
ಛಾಯಾಗ್ರಹಕ : ಜೆ.ಕೆ.ಗಣೇಶ್
ತಾರಾಗಣ: ಪ್ರಜ್ವಲ್‌ ದೇವರಾಜ್‌, ರಾಜಶ್ರೀ ಪೊನ್ನಪ್ಪ, ಲೇಖಾಚಂದ್ರ, ನಿಮಿಕಾ ರತ್ನಕರ್‌, ರವಿಶಂಕರ್‌, ಶೋಭರಾಜ್‌, ವಿಕ್ಟರಿ ವಾಸು, ಶಂಕರ್‌ ಅಶ್ವತ್ಥ್ , ಕೋಟೆ ಪ್ರಭಾಕರ್‌, ಅರಸು ಹಾಗೂ ಮುಂತಾದವರು…

ಯಾವುದೇ ವಿಚಾರವಾದರೂ ಸೇರಿ ಮಾತನಾಡುವಾಗ ಕೆಲವೊಮ್ಮೆ ಒಳ್ಳೆಯವರಿಗೆ ಒಳ್ಳೆಯದಾಗಬೇಕು… ಕೆಟ್ಟವರಿಗೆ ಕೆಟ್ಟದಾಗ್ಬೇಕು… ಅನ್ನೋ ಮಾತು ಕೇಳಿರುತ್ತೀವಿ. ಇಂಥದ್ದೇ ಒಂದು ಎಳೆಯೊಂದಿಗೆ ಸುಮಾರು 25 ವರ್ಷಗಳ ನಂತರದ ಸೇಡಿನ ಕಥೆಯನ್ನ ಬೆಸೆದುಕೊಂಡು ಸ್ನೇಹ , ಪ್ರೀತಿ, ಹೊಡೆದಾಟ ಹೀಗೆ ಮನೋರಂಜನೆಯ ಮಹಾಪೂರವನ್ನು ಹೊತ್ತುಕೊಂಡು ಬಂದಂತಹ ಚಿತ್ರ “ಅಬ್ಬರ”.

ಚಿತ್ರದ ಕಥಾನಾಯಕ ಶಿವ (ಪ್ರಜ್ವಲ್ ದೇವರಾಜ್) ಕಷ್ಟದಲ್ಲಿದ್ದವರಿಗೆ ಉಪಕಾರ ಮಾಡುವ ನಾಯಕ ಕೆಟ್ಟವರನ್ನು ಸದೆಬಡಿಯಲು ಅಬ್ಬರಿಸುತ್ತಿರುತ್ತಾನೆ. ಇವನ ತಂದೆಯನ್ನ ಕೊಂದ ಆರಡಿ ವೈರಮುಡಿ (ರವಿಶಂಕರ್)ನನ್ನ ಅವನ ಮಗಳಿಂದಲೇ ಕೊಲ್ಲಿಸಲು ಮುಂದಾಗುತ್ತಾನೆ. ಈ ಸೀಡಿನ ಪಯಣದಲ್ಲಿ ಮೂವರು ನಾಯಕಿಯರ ಆಗಮನ ಒಬ್ಬಳು ಪೊಲೀಸ್‌ ಮಗಳು (ನಿಮಿಕಾ ರತ್ನಾಕರ್), ಮತ್ತೊಬ್ಬಳು ಲಾಯರ್‌ ಮಗಳು( ರಾಜಶ್ರೀ ಪೊನ್ನಪ್ಪ), ಇನ್ನೊಬ್ಬಳು ಡಾಕ್ಟರ್‌ ಮಗಳು( ಲೇಖ ಚಂದ್ರ).

ಈ ಮೂವರ ಜತೆಗೂ ಹೀರೋ ಪ್ರೇಮದಾಟ ಆಡುತ್ತಾನೆ. ಒಂದಕ್ಕೊಂದು ಕುಂಡೆಯಂತೆ ಬೆಸೆದುಕೊಂಡು ಸಾಗುವ ಕಥೆಯಲ್ಲಿ ಹಲವು ಏರಿಳಿತಗಳು ಎದುರಾಗುತ್ತದೆ. ರೌಡಿ ವೈರ್ಮುಡಿ ರಾಜಕೀಯ ಪ್ರವೇಶಿಸಲು ಮುಂದಾಗುತ್ತಾನೆ, ಇದಕ್ಕೂ ತೊಂದರೆ ಕೊಡುವ ನಾಯಕನನ್ನ ಹಿಡಿಯಲು ತನ್ನ ಸಹಚರೊಂದಿಗೆ ಅರಸಹಾಸವನೇ ಪಡುತ್ತಾನೆ.

ಇದೆಲ್ಲದಕ್ಕೂ 25 ವರ್ಷಗಳ ಹಿಂದೆ ನಡೆದ ಒಂದು ಫ್ಲಾಶ್ ಬ್ಯಾಕ್ ಕಾರಣವಾಗಿರುತ್ತದೆ. ಅದೇನು ಅಂತ ತಿಳಿಯಬೇಕಾದರೆ ನೀವೆಲ್ಲರೂ ಒಮ್ಮೆ ಈ ಅಬ್ಬದ ಚಿತ್ರವನ್ನು ನೋಡಲೇಬೇಕು.

ಇದೊಂದು ಸಂಪೂರ್ಣ ಕಮರ್ಷಿಯಲ್ ಮನೋಂಜನೇಯ ಚಿತ್ರವಾಗಿ ತೆರೆ ಮೇಲೆ ತರುವುದಕ್ಕೆ ನಿರ್ದೇಶಕ ರಾಮ್ ನಾರಾಯಣ ಶ್ರಮ ಪಟ್ಟಿದ್ದಾರೆ. ಕಥೆಯಲ್ಲಿ ಏನು ಹೊಸತನ ಅನಿಸದಿದ್ದರು, ಮಾಸ್ ಅಭಿಮಾನಿಗಳಿಗೆ ಇಷ್ಟವಾಗುವಂತಹ ಆಕ್ಷನ್, ಲವ್,ಡ್ಯಾನ್ಸ್ , ಕಾಮಿಡಿ ಹೀಗೆ ಚಿತ್ರಕ್ಕೆ ಏನೆಲ್ಲ ಬೇಕೋ ಅಷ್ಟನ್ನೂ ಪ್ಯಾಕ್‌ ಮಾಡಿ ತೆರೆ ಮೇಲೆ ತೆರೆದಿಟ್ಟಿದ್ದಾರೆ.

ಅದ್ದೂರಿಯಾಗಿ ಈ ಚಿತ್ರವನ್ನು ಬಸವರಾಜ್ ಮಂಚಯ್ಯ ನಿರ್ಮಿಸಿದ್ದಾರೆ. ಇನ್ನೂ ಚಿತ್ರಕ್ಕೆ ಸಂಗೀತ ನೀಡಿರುವ ರವಿ ಬಸ್ರೂರ್ ಕೆಲಸ ಗಮನಹವಾಗಿದ್ದು , ಛಾಯಾಗ್ರಹದ ಜೆ.ಕೆ. ಗಣೇಶ್ ಕ್ಯಾಮೆರಾ ಕೈಚಳಕ ಉತ್ತಮವಾಗಿ ಮೂಡಿ ಬಂದಿದೆ.

ನಟ ಪ್ರಜ್ವಲ್‌ ದೇವರಾಜ್‌ ಪರೆದ ಮೇಲೆ ಅಬ್ಬರಿಸಿದ್ದಾರೆ. ಏಕಕಾಲದಲ್ಲಿ ಮೂರು ರೀತಿಯ ಪಾತ್ರಗಳಲ್ಲಿ ನಟಿಸಿರುವುದು ವಿಶೇಷ. ಆಕ್ಷನ್, ಡಾನ್ಸ್, ರೋಮ್ಯಾನ್ಸ್ ಅನ್ನು ಬಹಳ ಲೀಲಾಜಾಲವಾಗಿ ನಿರ್ವಹಿಸಿ ಗಮನ ಸೆಳೆದಿದ್ದಾರೆ.

ಇನ್ನು ಮೂರು ನಾಯಕಿಯರು ಕೂಡ ಬಹಳ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದು, ವೈರಮುಡಿಯಾಗಿ ರವಿಶಂಕರ್ ಅದ್ಭುತವಾಗಿ ನಟಿಸಿದ್ದು, ಉಳಿದ ಪಾತ್ರಧಾರಿಯಾಗಿ ವಿಜಯ್ ಚಂಡೂರ್, ಕೋಟೆ ಪ್ರಭಾಕರ್‌, ಅರಸು ಮಹಾರಾಜ್ ಸೇರಿದಂತೆ ಎಲ್ಲಾ ಪಾತ್ರದಾರಿಗಳು ಜೀವ ತುಂಬಿ ನಟಿಸಿದ್ದಾರೆ. ಒಟ್ಟಾರೆ ಮನೋರಂಜನೇಯ ದೃಷ್ಟಿಯಿಂದ ಈ “ಅಬ್ಬರ” ಚಿತ್ರವನ್ನು ಎಲ್ಲರೂ ನೋಡಬಹುದು.

Related posts