Cinisuddi Fresh Cini News 

“ಅಬ್ಬರ” ದ ಭಟ್ಟರ ಎಣ್ಣೆ ಹಾಡಿಗೆ ಪ್ರಜ್ಜು ಕುಣಿತ

ನೂರಾರು ಚಿತ್ರಗಳಿಗೆ ಸಾಹಿತ್ಯ ಬರೆದು ಗುರ್ತಿಸಿಕೊಂಡಿರುವ ರಾಮ್‌ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ಅಬ್ಬರ” ಚಿತ್ರದ ಅಬ್ಬರ ಜೋರಾಗಿದೆ. ಪ್ರಿನ್ಸ್ ಪ್ರಜ್ವಲ್ ದೇವರಾಜ್ ಜೊತೆ ಮೂವರು ನಾಯಕಿಯರು ಡ್ಯುಯೆಟ್ ಹಾಡಿರುವ ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯ ಗೊಂಡಿತ್ತು. ಇದೀಗ ಚಿತ್ರತಂಡ ಯೋಗರಾಜ್ ಭಟ್ಟರ ರಚನೆಯ ಎಣ್ಣೆ ನಶೆಯ ಹಾಡನ್ನು ಬಿಡುಗಡೆಗೊಳಿಸಿದೆ. ಭಟ್ಟರ ಬರವಣಿಗೆಯಲ್ಲಿ ಏನೋ ಒಂದು ವಿಶೇಷತೆಯಿರುತ್ತದೆ. ಅದು ಈ ಹಾಡಲ್ಲೂ ಕ್ಯಾರಿಯಾಗಿದ್ದು, ವಿಜಯ್‌ಪ್ರಕಾಶ್ ಇದಕ್ಕೆ ದನಿಯಾಗಿದ್ದಾರೆ.

ಸಿ. ಅಂಡ್ ಎಂ. ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರ ನಿರ್ಮಾಣದ ಅಬ್ಬರ ಚಿತ್ರಕ್ಕೆ ಕೆ.ರಾಮನಾರಾಯಣ್ ಕತೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶಿಸುತ್ತಿದ್ದಾರೆ. ಆಕ್ಷನ್, ಫ್ಯಾಮಿಲಿ ಎಂಟರ್‌ಟೈನರ್ ಕಥಾಹಂದರ ಹೊಂದಿರೋ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೋಡಿಯಾಗಿ ರಾಶಿ ಪೊನ್ನಪ್ಪ, ನಿಮಿಕಾ ರತ್ನಾಕರ್, ಲೇಖಾ ಚಂದ್ರ ಅಭಿನಯಿಸಿದ್ದಾರೆ. ಪ್ರಜ್ವಲ್ ಮೊದಲಬಾರಿಗೆ ಮೂರು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡಿದ್ದು, ಖಳನಾಯಕ ರವಿಶಂಕರ್ ಅವರಿಗೂ ೨ ಶೇಡ್ ಇರುವುದು ವಿಶೇಷ. ಚಿತ್ರದ ಹಾಡುಗಳಿಗೆ ರವಿ ಬಸ್ರೂರು ಅದ್ಭುತವಾಗಿ ಮ್ಯೂಸಿಕ್ ಮಾಡಿದ್ದಾರೆ, ನಾನು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿ ರುತ್ತೇವೆ. ಆದರೆ ಹೋಗ್ತಾ ಹೋಗ್ತಾ ಅದು ಕರೆದುಕೊಂಡು ಹೋಗುತ್ತದೆ. ಮನುಷ್ಯ ಸದಾ ಜಾಗೃತನಾಗಿರಬೇಕು ಎಂದು ಈ ಚಿತ್ರ ಹೇಳುತ್ತದೆ. ಪೋಷಕ ಪಾತ್ರಗಳಲ್ಲಿ ಶೋಭರಾಜ್, ಕೋಟೆ ಪ್ರಬಾಕರ್, ಶಂಕರ್ ಅಶ್ವಥ್, ವಿಕ್ಟರಿವಾಸು, ಪ್ರಶಾಂತ್ ನಟನ, ಅರಸು ಮಹಾರಾಜ್, ಮೋಹನ್ ಜುನೇಜ, ಉಮೇಶ್, ಗೋವಿಂದೇಗೌಡ, ವಿಜಯ್ ಚೆಂಡೂರ್, ಮೂಗು ಸುರೇಶ್, ಸಲ್ಮಾನ್, ಮಮತಾ ರಾಹುತ್, ಖುಷಿ ಮುಂತಾದವರು ನಟಿಸಿದ್ದಾರೆ. ಜೆ.ಕೆ.ಗಣೇಶ್ ಅವರ ಛಾಯಾಗ್ರಹಣ, ವೆಂಕಟೇಶ್ ಯುಡಿವಿ ಅವರ ಸಂಕಲನ, ವಿನೋದ್, ಪಳನಿರಾಜ್,ಮಾಸ್‌ ಮಾದ ಅವರ ಸಾಹಸ, ರಾಮು, ಮೋಹನ್, ಕಲೈ, ಭೂಷಣ್ ಅವರ ನೃತ್ಯನಿರ್ದೇಶನ ಈ ಚಿತ್ರಕ್ಕಿದೆ.

Related posts