Cinisuddi Fresh Cini News 

ಸ್ಯಾಂಡಲ್ವುಡ್ ನಲ್ಲೊಂದು ‘ಆಸಿಂಕೋಜಿಲ್ಲ’ ಎಂಬ ವಿಚಿತ್ರ ಟೈಟಲ್‌ನ ಸಿನಿಮಾ

ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳು ನಡೆಯುತ್ತಿದೆ, ಕ್ಲೈಮ್ಯಾಕ್ಸ್ ಅನ್ನು ಮೊದಲೇ ತೋರಿಸಿ ನಂತರ ಚಿತ್ರವನ್ನು ಕೆಲವು ನಿರ್ದೇಶಕರು ಆರಂಭಿಸಿದರೆ, ಇನ್ನು ಕೆಲವರು ತಮ್ಮ ಚಿತ್ರಗಳಿಗೆ ವಿಶಿಷ್ಟ ಟೈಟಲ್‍ಗಳನ್ನು ಇಡುವ ಮೂಲಕ ಗಮನ ಸೆಳೆಯುತ್ತಾರೆ, ಆದರೆ ನಿರ್ದೇಶಕ ಶಮನ್ ಅವರು ಟೈಟಲ್ ಇಲ್ಲದೇ ಇಡೀ ಚಿತ್ರೀಕರಣವನ್ನು ಮುಗಿಸಿ ಈಗ ಶೀರ್ಷಿಕೆಯನ್ನು ಲಾಂಚ್ ಮಾಡಿದ್ದಾರೆ.

ಚಲನಚಿತ್ರ ಕಲಾವಿದರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಚಿತ್ರಕ್ಕೆ ಆಸಿಂಕೋಜಿಲ್ಲ ಎಂಬ ವಿಚಿತ್ರ ಟೈಟಲ್ ಇಡಲು ಒಂದು ಕಾರ್ಯಕ್ರಮವಾದರೆ, ಧ್ವನಸುರುಳಿ ಬಿಡುಗಡೆ ಹಾಗೂ ಟ್ರೈಲರ್ ಅನಾವರಣಗೊಳಿಸಲು ಪ್ರತ್ಯೇಕ ಸಮಾರಂಭವನ್ನು ಹಮ್ಮಿಕೊಂಡಿದ್ದು ಕೂಡ ವಿಚಿತ್ರವೆನಿಸಿತು.

ಅಂದು ನಡೆದ 3 ಕಾರ್ಯಕ್ರಮಗಳಲ್ಲೂ ಚಿತ್ರದ ಎಲ್ಲಾ ಕಲಾವಿದರು ಹಾಜರಿದ್ದರು. ನಿರ್ಮಾಪಕ ಬಾ.ಮ.ಹರೀಶ್ ಆಗಮಿಸಿ ಟೈಟಲ್ ಲಾಂಚ್ ಮಾಡಿದರೆ, ನಟ ಸುಮಂತ್ ಶೈಲೇಂದ್ರ ಟ್ರೈಲರ್ ಅನ್ನು ಅನಾವರಣಗೊಳಿಸಿದರು. ಕೆ.ಸಿ.ಮಂಜುನಾಥ್ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆಯುವುದರೊಂದಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ.

ನಿರ್ದೇಶಕ ಶಮನ್ ಮಾತನಾಡಿ, ಈ ಚಿತ್ರದ ಸಬ್ಜೆಕ್ಟ್ ಡಿಫರೆಂಟ್ ಆಗಿದೆ. ವಿಜ್ಞಾನಿಯಬ್ಬ ಸಮಾಜದಲ್ಲಿ ಬದಲಾವಣೆ ತರಬೇಕೆಂದು ಕಾಡಿಗೆ ಹೋಗಿ ಅಲ್ಲಿ ಹೊಸ ಹಬೊಸ ಸಾಹಸವನ್ನು ಮಾಡುತ್ತಾನೆ, ಆ ಸಾಹಸಕ್ಕೆ ಅವನು ಇಡುವ ಹೆಸರೇ ಆಸಿಂಕೋಜಿಲ್ಲ. ವಿಜ್ಞಾನಿಯೊಂದಿಗೆ ನಾಲ್ವರು ವ್ಯಕ್ತಿಗಳು ಜೊತೆಯಾಗುತ್ತಾರೆ, ಕಾಡಿನಲ್ಲಿ ಅವರು ಏನೇನು ಸಮಸ್ಯೆ ಎದುರಿಸುತ್ತಾರೆ, ಅದರಿಂದ ಹೇಗೆ ಹೊರಬರುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದು, ಚಿತ್ರದಲ್ಲಿರುವ 2 ಹಾಡುಗಳಿಗೆ ಅಮೋಘರ್ಷ ಸಂಗೀತ ನೀಡಿದ್ದರೆ, ಸೋಮಶೇಖರ್ ಶೆಟ್ಟಿ ನಿರ್ಮಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಮೈಸೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು.


ನಿರ್ಮಾಪಕ ಸೋಮಶೇಖರಶೆಟ್ಟಿ ಮಾತನಾಡಿ ನಮ್ಮ ಆಸಿಂಕೋಜಿಲ್ಲದಲ್ಲಿ ಹಲವಾರು ವಿಶೇಷತೆಗಳಿದ್ದು, ಇದರಲ್ಲಿ ಕೆಲಸ ಮಾಡಿರುವವರೆಲ್ಲ ಹೊಸಬರೇ ಆದರೂ ಅವರ ಪ್ರಯತ್ನವನ್ನು ಮೆಚ್ಚಲೇಬೇಕು. ಮುಂದಿನ ತಿಂಗಳು ಈ ಚಿತ್ರವನ್ನು ಬಿಡುಗಡೆ ಮಾಡಲು ಚಿಂತಿಸಿದ್ದೇವೆ ಎಂದು ಹೇಳಿದರು.


ನಾಯಕ ನಟ ವಿಷ್ಣು ತೇಜ ಮಾತನಾಡಿ ಈ ಹಿಂದೆ ತೆಲುಗು ಚಿತ್ರವೊಂದರಲ್ಲಿ ನಟಿಸಿದ್ದೆ ಇದು ನನ್ನ 2ನೇ ಚಿತ್ರ ಎಂದರೆ ಮತ್ತೊಬ್ಬ ನಟ ಪ್ರಶಾಂತ್ ಮಾತನಾಡಿ ಮುಂಗೋಪಿ ಯುವಕನ ಪಾತ್ರ ಸಿಸ್ಟಂನಲ್ಲಿ ಬದಲಾವಣೆ ತರಲು ಹೋಗಿ ಏನೇನೆಲ್ಲಾ ಮಾಡುತ್ತಾನೆ ಅನ್ನೋದೆ ನನ್ನ ಪಾತ್ರ ಎಂದು ಹೇಳಿಕೊಂಡರು. ನಂತರ ನಟಿಯರಾದ ರಕ್ಷಿಕ, ಭಾನುಪ್ರಿಯ ಶೆಟ್ಟಿ ಹಾಗೂ ಸೋನಮ್ ರಾಯ್ ಕೂಡ ತಮ್ಮ ತಮ್ಮ ಪಾತ್ರಗಳ ಬಗ್ಗೆ ಚುಟುಕಾಗಿ ಹೇಳಿಕೊಂಡರು.


ಹಿರಿಯ ನಟ ಹೊನ್ನಾವಳ್ಳಿ ಕೃಷ್ಣ , ವಿಷ್ಣು ತೇಜ, ಪ್ರಶಾಂತ್, ತಾರಕ್ ಸೋನಮ್ ರಾಯ್, ಭಾನು ಪ್ರಿಯ ಶೆಟ್ಟಿ, ಮೇಘಶ್ರೀ ಹಾಗೂ ರಕ್ಷಿಕ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಮನ್ ನಿರ್ದೇಶಿಸಿರುವ ಆಸಿಂಕೋಜಿಲ್ಲದಲ್ಲಿ ಏನೇನು ರಹಸ್ಯಗಳು ಅಡಗಿವೆಯೋ ಎಂಬುದನ್ನು ನೋಡುವ ಕುತೂಹಲ ಮೂಡಿಸಿದ್ದು ಅದನ್ನು ತಿಳಿಯಲು ಮುಂದಿನ ತಿಂಗಳವರೆಗೂ ಕಾಯಲೇಬೇಕು.

Share This With Your Friends

Related posts