Cinisuddi Fresh Cini News 

ಸಿನಿಮಾದಲ್ಲಿ ‘ಆ ಒಂದು ನೋಟು’

ನೋಟು ಅಮಾನ್ಯೀಕರಣ ಮಾಡಿದ ನಂತರ ಜನರು ಹೇಗೆಲ್ಲಾ ಕಷ್ಟಪಟ್ಟರು ಎಂಬ ಎಳೆಯನ್ನು ಇಟ್ಟುಕೊಂಡು ಹಲವು ಚಿತ್ರಗಳು ಬಂದಿವೆ, ಅದಕ್ಕೆ ಸ್ಯಾಂಡಲ್‍ವುಡ್ ಕೂಡ ಹೊರತಲ್ಲ, ಈಗ ಆ ವೇಳೆ ಚಾಲ್ತಿಗೆ ಬಂದ ಪಿಂಕ್ ಬಣ್ಣದ 2000 ರೂ. ನೋಟನ್ನು ಇಟ್ಟುಕೊಂಡು ರತ್ನತನಯ ಅವರು ಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

ಆ ಒಂದು ನೋಟು ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ರತ್ನತನಯವರೇ ಒದಗಿಸಿದ್ದು, ಎಂ.ಕೆ.ಜಗದೀಶ್ ಹಾಗೂ ಜಿ.ಪ್ರೇಮನಾಥ್ ಅವರು ಫ್ರೆಂಡ್ಸ್ ಫಿಲಂ ಫ್ಯಾಕ್ಟರಿ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಈ ಚಿತ್ರದಲ್ಲಿ 2 ಸಾವಿರ ನೋಟೇ ಪ್ರಧಾನವಾಗಿದ್ದು, ಆ ನೋಟು ಮನುಷ್ಯನನ್ನು ಹೇಗೆಲ್ಲಾ ಕುಣಿಸುತ್ತದೆ, ಆ ನೋಟಿನಿಂದ ಮನುಷ್ಯ ಒಳ್ಳೆಯವನಾಗುತ್ತಾನೋ, ಕೆಟ್ಟವನಾಗುತ್ತಾನೋ ಎಂಬುದನ್ನು ಈ ಚಿತ್ರದಲ್ಲಿ ರತ್ನತನಯ ಹೇಳಲು ಹೊರಟಿದ್ದಾರೆ. ಮೊನ್ನೆ ಆ ಒಂದು ನೋಟು ಚಿತ್ರತಂಡವು ಸುದ್ದಿಗೋಷ್ಠಿಯನ್ನು ಹಮ್ಮಿಕೊಂಡಿತ್ತು.

ನಟ ಗೋಪಾಲಕೃಷ್ಣ ಮಾತನಾಡಿ, ಜೀವನದಲ್ಲಿ ಒಂದು ನಿರ್ದಿಷ್ಟ ಗುರಿಯನ್ನು ಹೊಂದಿರದ ಬೇಜವಾಬ್ದಾರಿಯಿಂದ ಕೂಡ ಪಾತ್ರ ನಿರ್ವಹಿಸುತ್ತಿದ್ದು, ನನ್ನ ಜೀವನದಲ್ಲಿ ಹುಡುಗಿಯೊಬ್ಬಳ ಪ್ರವೇಶವಾದಾಗ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ನಿರ್ದೇಶಕ ರತ್ನತನಯ ಅವರು ನನ್ನ ಪಾತ್ರದ ಮೂಲಕ ಹೇಳಲು ಹೊರಟಿದ್ದಾರೆ ಎಂದರು.

ನಿರ್ದೇಶಕ ರತ್ನತನಯ ಮಾತನಾಡಿ, ಒಂದು ನೋಟು ಒಬ್ಬರ ಕೈಯಿಂದ ಇನ್ನೊಬ್ಬರ, ಮತ್ತೊಬ್ಬರ ಕೈಗಳನ್ನು ಬದಲಾಯಿಸಿಕೊಂಡು ಮತ್ತೆ ಮಾಲೀಕನ ಕೈಗೆ ಬಂದು ಸೇರುತ್ತದೆ, ಈ ನಡುವೆ ಆ ನೋಟಿನಿಂದ ಏನೆಲ್ಲಾ ಅವಂತಾರಗಳಾಗುತ್ತವೆ ಎಂಬುದನ್ನು ಈ ಸಿನಿಮಾದಲ್ಲಿ ಹೇಳಿz್ದÉೀವೆ, ಇಲ್ಲಿ ನಾಯಕನಿಗಿಂತ ನೋಟೇ ಪ್ರಮುಖ ಪಾತ್ರ ವಹಿಸಿದೆ, ಅದರ ಸುತ್ತಲೇ ಪಾತ್ರಗಳು ಗಿರಿಕಿ ಹಾಕುತ್ತವೆ ಎಂದರು.

ನಟ ಗೌತಮ್‍ಕುಮಾರ್ ಬಾರ್ ಓನರ ಆಗಿಯೂ ಸಿಲ್ಲಿ ಲಲ್ಲಿ ಆನಂದ ಕಳ್ಳನಾಗಿಯೂ, ಉಷಾ ರವಿಶಂಕರ್ ಕಳ್ಳನ ಹೆಂಡತಿಯಾಗಿಯೂ ಕಾಣಿಸಿಕೊಂಡಿದ್ದಾರೆ. ಕೌಶಿಕ್ ಅವರ ಸಂಗೀತ ವೀರಸಮರ್ಥ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ.

ಚಿಕ್ಕಮಗಳೂರು, ಕೆಮ್ಮಣ್ಣುಗುಂಡಿ, ಮುಳ್ಳಯ್ಯನಗಿರಿ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.ಪಿಂಕ್ ನೋಟಿನ ಹಿಂದೆ ಹೊರಡುವವರು ಏನೆಲ್ಲಾ ಫಜೀತಿಗೆ ಸಿಕ್ಕಿ ಹಾಕುತ್ತಾರೆ ಎಂದು ಹೇಳಲು ಹೊರಟಿರುವ ನಿರ್ದೇಶಕ ರತ್ನತನಯರಿಗೆ ಈ ಚಿತ್ರವು ಹೆಸರು ತಂದುಕೊಡಲಿ.

Share This With Your Friends

Related posts