Cinisuddi Fresh Cini News 

ಯೋಗಿ ಬರ್ತ್ಡೇಗೆ “ಒಂಬತ್ತನೇ ದಿಕ್ಕು” ಸ್ಪೆಷಲ್ ಟೀಸರ್ ಲಾಂಚ್

ದುನಿಯಾ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದಂತ ಲೂಸ್ ಮಾದ ಯೋಗಿ ಜಿಂಕೆ ಮರೀನಾ…. ಎನ್ನುತ್ತಾ ವಿಭಿನ್ನ ಚಿತ್ರಗಳಲ್ಲಿ ಗಮನ ಸೆಳೆಯುತ್ತಿರುವ ಯೋಗಿ ನನ್ನ 31 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿರ್ದೇಶಕ ದಯಾಳ್ ಪದ್ಮನಾಭನ್ ಇವರ ಹುಟ್ಟುಹಬ್ಬಕ್ಕಾಗಿ “ಒಂಬತ್ತನೇ ದಿಕ್ಕು” ಚಿತ್ರ ವಿಶೇಷ ಟೀಸರ್ ಅನ್ನು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಿದೆ.

ಈಗಾಗಲೇ ಸೆನ್ಸಾರ್ ಮಂಡಳಿಯಿಂದ ಯು/ಎ ಅರ್ಹತಾ ಪತ್ರವನ್ನು ಕೂಡ ಪಡೆದುಕೊಂಡಿದೆ. ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ ನಾಯಕ, ನಾಯಕಿಯರಾಗಿರವ ಈ ಚಿತ್ರವನ್ನು ಡಿ ಪಿಕ್ಚರ್ಸ್‍ ನ ದಯಾಳ್ ಪದ್ಮನಾಭನ್, ಜಿ. ಸಿನಿಮಾಸ್‍ನ ಗುರು ದೇಶಪಾಂಡೆ ಮತ್ತು ಚೆನ್ನೈ ಮೂಲದ ಕೆ9 ಸ್ಟುಡಿಯೋ ಸೇರಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಅವಿನಾಶ್ ಶೆಟ್ಟಿ ಹಾಗೂ ವೆಂಕಟ್‍ದೇವ್ ಕಾರ್ಯಕಾರಿ ನಿರ್ಮಾಪಕರಾಗಿದ್ದು ಮಣಿಕಾಂತ್ ಕದ್ರಿ ಸಂಗೀತ, ಪ್ರೀತಿ ಮೋಹನ್ ಸಂಕಲನ, ವಿಕ್ರಂ ಮೋರ್ ಸಾಹಸ ಚಿತ್ರಕ್ಕಿದೆ.

ಬಿಡುಗಡೆಯಾದ ಈ ವಿಶೇಷ ಟೀಸರ್ ಈಗ ಭಾರಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಲೂಸ್ ಮಾದ ಯೋಗಿ ಹುಟ್ಟು ಹಬ್ಬಕ್ಕೆ ಈ ಟೀಸರ್ ಸ್ಪೆಷಲ್ ಗಿಫ್ಟ್ ಆಗಿದೆ.

Share This With Your Friends

Related posts