Cinisuddi Fresh Cini News 

ಚಿತ್ರೀಕರಣ ಮುಗಿಸಿದ “9 ದಿನಗಳು” ಚಿತ್ರತಂಡ

ಎಂ.ವಿ.ಫಿಲಂಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಡಾ||ಎಂ.ವೆಂಕಟಸ್ವಾಮಿ, ಹರ್ಷವರುಣ್ ಪೈ, ಸಿ.ಎಂ. ಮುರುಗ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ “9 ದಿನಗಳು” ಚಿತ್ರದ ಚಿತ್ರೀಕರಣವು ಇತ್ತೀಚೆಗೆ ನಗರದಲ್ಲಿ ಸಂಪೂರ್ಣಗೊಂಡಿತು.

ಚಿತ್ರಕ್ಕೆ ಕಾರ್ತಿಕ್ ಜೆ. ಕಿರಣ್ ಛಾಯಾಗ್ರಹಣ, ಎಂ. ಸಂಜೀವ್ ರಾವ್ ಸಂಗೀತ, ಅಲ್ಟಿಮೇಟ್ ಶಿವು ಸಾಹಸ, ಹರಿಕೃಷ್ಣ ನೃತ್ಯ, ನಾಗರಾಜ್ ಕಲೆ, ದಾಡಿ ರಮೇಶ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಸ್.ಎಸ್. ವಿಧಾ.

ತಾರಾಗಣದಲ್ಲಿ ದೈವಿಕ್, ಮಾನಸ, ಅರ್ಜುನ್ ವೀರ್, ಎಂ. ವೆಂಕಟಸ್ವಾಮಿ, ಅರ್ಚನಾ, ಕಬಾಡ ಸಂತೋಷ್, ಗಿರೀಶ್, ಸಂದೀಪ್, ಸಂಜು, ಮೋಹನ್ ಮುಂತಾದವರಿದ್ದಾರೆ.

Share This With Your Friends

Related posts