Cinisuddi Fresh Cini News 

ತಂತ್ರ, ಯಕ್ಷ ಹಾಗೂ ಚೇಷ್ಟೆಗಳ ಕಥೆಯ ‘5 ಅಡಿ, 7 ಅಂಗುಲ’

ಒಬ್ಬ ಮನುಷ್ಯನ ಎತ್ತರವನ್ನು ಸೂಚಿಸುವಂತಿರುವ 5 ಅಡಿ 7 ಅಂಗುಲ ಎಂಬ ಹಾರರ್ ಮಿಸ್ಟ್ರಿ ಚಿತ್ರದ ಧ್ವನಿಸುರುಳಿ ಬಿಡುಗಡೆಯನ್ನು ಮೊನ್ನೆ ಮಾಡಲಾಯಿತು.ರಾಸಿಕ್‍ಕುಮಾರ್ ಹಾಗೂ ಅದಿತಿ ಪ್ರಮುಖ ಪತ್ರಗಳಲ್ಲಿರುವ ಈ ಚಿತ್ರಕ್ಕೆ ನಂದಳಿಕೆ ನಿತ್ಯಾನಂದ ಪ್ರಭು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಹೊಣೆಯ ಜೊತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿದ್ದಾರೆ.

ಧ್ವನಿಸುರುಳಿ ಬಿಡುಗಡೆ ಸಮಾರಂಭದ ನಂತರ ಮಾತನಾಡಿದ ನಿರ್ದೇಶಕ ನಿತ್ಯಾನಂದ ಪ್ರಭು, ತಂತ್ರ, ಯಕ್ಷ ಹಾಗೂ ಚೇಷ್ಟೆಗಳನ್ನು ಮುಖ್ಯವಾಗಿಟ್ಟುಕೊಂಡು ಈ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ 5 ಅಡಿ 7 ಅಂಗುಲ ಎಂಬ ಹೆಸರನ್ನೇಕೆ ಇಟ್ಟಿದ್ದೇವೆ ಎಂಬುದು ಚಿತ್ರವನ್ನು ನೋಡಿದಾಗ ತಿಳಿಯುತ್ತದೆ.

ಈ ಚಿತ್ರ ನನ್ನ ಕನಸಿನ ಕೂಸಾಗಿರುವುದರಿಂದ ಚಿತ್ರದ ಕಲಾವಿದರನ್ನು ಆಡಿಷನ್ ಮೂಲಕವೇ ಆಯ್ಕೆ ಮಾಡಿಕೊಂಡಿದ್ದೇನೆ. ನಾಯಕ,ನಾಯಕಿಯಾಗಿ ಭುವನ್ ನಾರಾಯಣ ಹಾಗೂ ಅದಿತಿಯವರು ಆಯ್ಕೆಯಾಗಿದ್ದರೆ, ರಾಸಿಕ್‍ಕುಮಾರ್‍ಗೂ ಉತ್ತಮ ಪಾತ್ರವಿದೆ. ಈ ಚಿತ್ರದಲ್ಲಿ ಕಾಗೆಗೂ ಒಂದು ಪಾತ್ರವಿದೆ. ನಾನು ಕೂಡ ಒಂದು ಕ್ಯಾಮಿಯೋ ಪಾತ್ರ ನಿರ್ವಹಿಸಿದ್ದೇನೆ, ನನ್ನ ತಂದೆಯವರ ಪ್ರೊತ್ಸಾಹದಿಂದ ಇಂಥದೊಂದು ಸುಂದರ ಚಿತ್ರ ಮೂಡಿಬಂದಿದೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ರಘು ಥಾಣೆ ಮಾತನಾಡಿ, ಈ ಹಿಂದೆ ನನು ಶ್ರೀನಿವಾಸಕಲ್ಯಾಣ ಚಿತ್ರಕ್ಕೆ ನೀಡಿದ ಸಂಗೀತ ನನಗೆ ಹೆಸರು ತಂದುಕೊಡಿತ್ತು ಈ ಚಿತ್ರದಲ್ಲೂ ಅಷ್ಟೇ ಸುಂದರವಾದ ಗೀತೆಗಳಿದ್ದು ಕೇಳುಗರ ಮನ ಸೆಳೆಯುತ್ತದೆ ಎಂದು ಹೇಳಿದರು.

ನಾಯಕ ಭುವನ ಮಾತನಾಡಿ, ಹುಡುಗಾಟದ ಹುಡುಗ ಹಾಗೂ ಬ್ಯುಸಿನೆಸ್ ಮನ್ ಪಾತ್ರಗಳಲ್ಲಿ ಕಾಣಸಿಕೊಂಡಿರುವ ನನ್ನ ತಾಯಿಯ ಪಾತ್ರದಲ್ಲಿ ವೀಣಾ ಸುಂದರ್ ನಟಿಸಿದ್ದಾರೆ ಎಂದು ಹೇಳಿದರು.ನಾಯಕಿ ಅದಿತಿ ಮಂಗಳೂರಿನ ಪ್ರತಿಭೆ. ಒಂದು ತಮಿಳು ಚಿತ್ರದಲ್ಲಿ ನಟಿಸಿರುವ ಈಕೆಗಿದು ಮೊದಲ ಕನ್ನಡ ಚಿತ್ರವಾಗಿದೆ.

ಈ ಚಿತ್ರಕ್ಕೆ ಬೆಂಗಳೂರು, ನೆಲಮಂಗಲ, ಸುಂಠಿಕೊಪ್ಪ, ಮಡಿಕೇರಿ ಸುತತಿಮುತತಿ ಚಿತ್ರೀಕರಣ ನಡೆಸಲಾಗಿದೆ. ನಂದಳಿಕೆ ಚಂದ್ರಶೇಖರ ಪ್ರಭು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Share This With Your Friends

Related posts