Cinisuddi Fresh Cini News 

“4 n 6” ಚಿತ್ರದ ಟೈಟಲ್ ಲಾಂಚ್ ಮಾಡಿದ ನಟ ಶ್ರೀಮುರುಳಿ

ನಾಯಕಿ ಪ್ರಧಾನ ಸಸ್ಪೆನ್ಸ್ , ಥ್ರಿಲ್ಲರ್ ಕಥಾಹಂದರ ಹೊಂದಿರುವ “4 n 6″ ಚಿತ್ರದ ಮುಹೂರ್ತ ಸಮಾರಂಭ ಜೆ.ಪಿ. ನಗರದ ಓಂಶಕ್ತಿ ದೇವಸ್ಥಾನದಲ್ಲಿ ನೆರವೇರಿತು. ಸರಳವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದ ಪ್ರಥಮ‌ ದೃಶ್ಯಕ್ಕೆ ಉದ್ಯಮಿ ಅಜಯ್ ಅವರು ಕ್ಲಾಪ್ ಮಾಡಿದರು. ಫೋರ್ ಎನ್ ಸಿಕ್ಸ್” ಚಿತ್ರದ ಶೀರ್ಷಿಕೆಯನ್ನು ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ನಟ ನಿರ್ಮಾಪಕ Md.ಅಫ್ಜಲ್, ಶರತ್ ಹಾಗೂ ಇತರೆ ಗಣ್ಯರು ಆಗಮಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.

ಲವ್ ಮಾಕ್ಟೇಲ್ ಹಾಗೂ ಲವ್ 360 ಚಿತ್ರಗಳ ಖ್ಯಾತಿಯ ರಚನಾ ಇಂದರ್ ಒಬ್ಬ ಡಿಟೆಕ್ಟಿವ್ ಆಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ “4 n 6” ಚಿತ್ರಕ್ಕೆ ದರ್ಶನ್ ಶ್ರೀನಿವಾಸ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಂದು ಮರ್ಡರ್ ಮಿಸ್ಟರಿ ಸುತ್ತ ನಡೆಯುವ ಇನ್ ವೆಸ್ಟಿಗೇಶನ್ ಪ್ರೊಸೆಸ್ ಈ ಚಿತ್ರದ ಕಥಾವಸ್ತು.

ಪರ್ಪಲ್ ಪ್ಯಾಚ್ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಿರ್ಮಾಪಕರು ಕರಣ್. ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಸಿನಿಮಾದ ಚಿತ್ರೀಕರಣವನ್ನು ಜೂನ್ ಮೊದಲವಾರ ಆರಂಭಿಸಿ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ನಡೆಸುವ ಯೋಜನೆ ನಿರ್ಮಾಪಕರದ್ದು.

ಚಿತ್ರಕ್ಕೆ ಚರಣ್ ತೇಜ್ ಅವರ ಛಾಯಾಗ್ರಹಣ ಸತ್ಯಕಹಿ ಅವರ ಸಂಭಾಷಣೆ ಹಾಗೂ ಸಾಯಿ ಸೋಮೇಶ್ ಅವರ ಸಂಗೀತ ನಿರ್ದೇಶನವಿದೆ. ಹೊಸ ಪ್ರತಿಭೆಗಳಾದ ನವೀನ್, ಮೇಘನಾ, ಸಂಜಯ್ ನಾಯಕ್, ಸೌರವ್, ಸತ್ಯ ಹಾಗೂ ರೇಣುಕಾ ಹಾಗೂ ಇತರರು ಈ ಚಿತ್ರದಲ್ಲಿ‌ ಅಭಿನಯಿಸುತ್ತಿದ್ದಾರೆ.

Related posts