Cinisuddi Fresh Cini News 

ಸ್ಯಾಂಡಲ್ವುಡ್ ನಲ್ಲಿ 10 ವರ್ಷದ ಏಳುಬೀಳಿನ ಅನುಭವ ಬಿಚ್ಚಿಟ್ಟ ತುಪ್ಪದ ಹುಡುಗಿ ರಾಗಿಣಿ

ತಾವು ಚಿತ್ರರಂಗದಲ್ಲಿ ಒಂದನೇ ಮೆಟ್ಟಿಲಿನಿಂದ ಶಿಖರಕ್ಕೇರುವವರೆಗೆ ಬೆನ್ನೆಲುಬಾಗಿ ನಿಂತು ತಮ್ಮ ಏಳಿಗೆಗೆ ಶ್ರಮಿಸಿದವರನ್ನು ಮರೆಯುವವರೇ ಹೆಚ್ಚು. ಆದರೆ ತುಪ್ಪದ ಹುಡುಗಿ ರಾಗಿಣಿ ಡಿಫರೆಂಟ್ ಸಾಲಿನಲ್ಲಿ ನಿಲ್ಲುತ್ತಾರೆ.

ಚಿತ್ರರಂಗದಲ್ಲಿ ತನ್ನ ತಪ್ಪುಗಳನ್ನು ತಿದ್ದುತ್ತಾ ಇಂದು ಒಬ್ಬ ಪ್ರಬುದ್ಧ ನಟಿಯಾಗಿ ರೂಪುಗೊಳ್ಳಲು ಸಹಕಾರಿಯಾದ ಮಾಧ್ಯಮದವರಿಗೆ ಸಂತೋಷ ಕೂಟವನ್ನು ಹಂಚಿಕೊಂಡಿದ್ದರು. ತುಪ್ಪದ ಹುಡುಗಿ ರಾಗಿಣಿ ಚಿತ್ರರಂಗಕ್ಕೆ ಬಂದಿದ್ದು 10 ವರ್ಷಗಳು ತುಂಬಿದ್ದೆ ಕಾರಣ.

ಹೋಳಿ ಚಿತ್ರದ ಮೂಲಕ ಸ್ಯಾಂಡಲ್ನಲ್ಲಿ ಬಣ್ಣದ ಓಕುಳಿ ಆಡಲು ಹೊರಟ ರಾಗಿಣಿಯ ಚಿತ್ರ ಜೀವನದಲ್ಲಿ ಆರಂಭದಲ್ಲೇ ವಿಘ್ನವಾದರೂ ಕೂಡ ಅದೃಷ್ಟ ಆಕೆಯೊಂದಿಗಿತ್ತು.

ಕಿಚ್ಚ ಸುದೀಪ್ ಜೊತೆಗೆ ವೀರಮದಕರಿ ಚಿತ್ರದಲ್ಲಿ ನಟಿಸುವ ಮೂಲಕ ನಾಯಕಿಯಾಗಿ ಗುರುತಿಸಿಕೊಂಡ ರಾಗಿಣಿ, ನಂತರ ಸ್ಯಾಂಡಲ್ವುಡ್ನ ವಿವಿಧ ಸ್ಟಾರ್ಗಳ ಜೊತೆಗೆ ನಟಿಸಿದ್ದೆ ಅಲ್ಲದೆ, ರಾಗಿಣಿ ಐಪಿಎಸ್ನಲ್ಲಿ ನಟಿಸುವ ಮೂಲಕ ಮಹಿಳಾ ಚಿತ್ರಗಳು ಸೈ ಎಂದೆನಿಸಿಕೊಂಡ ಅವರು ಮೂರು ಮಲಯಾಳಂ, ಎರಡು ತಮಿಳು ಸಿನಿಮಾಗಳಲ್ಲೂ ತಮ್ಮ ಅಭಿನಯ ರಂಗನ್ನು ಹರಿಸಿದ್ದಾರೆ.

ಕಳ್ಳ ಮಳ್ಳ ಸುಳ್ಳ ಚಿತ್ರದಲ್ಲಿ ತುಪ್ಪಾ ಬೇಕಾ ತುಪ್ಪಾ ಎಂಬ ಗೀತೆಗೆ ಬೊಂಬಾಟ್ ಸ್ಟೆಪ್ಸ್ ಹಾಕುವ ಮೂಲಕ ತುಪ್ಪದ ಬೆಡಗಿ ಆಗಿ ಗುರುತಿಸಿಕೊಂಡಿದ್ದ ರಾಗಿಣಿ ಬೆಲ್ಲದ ಸಿಹಿಗಿಂತ (ಗೆಲುವು) ಬೇವಿನ ಕಹಿ(ಸೋಲು) ಉಂಡದ್ದೇ ಹೆಚ್ಚು.

ಸೋಲು, ಗೆಲುವು ಕಂಡರೂ ಕೂಡ ಚಿತ್ರರಂಗದಲ್ಲಿ ಗೆಲ್ಲಲೇಬೇಕೆಂಬ ಛಲ ತೊಟ್ಟಿರುವ ರಾಗಿಣಿ ಆರಂಭದಲ್ಲಿ ಬಳ್ಳಿಯಂತೆ ಬಳಕುವ ನಟಿಯಾಗಿದ್ದರೆ, ಈಗ ದಪ್ಪ, ಸಪೂರಿಯಾಗಿ ಕಾಣಿಸಿಕೊಂಡಿದ್ದರಿಂದ ಈಗ ನಾಯಕಿ ಪ್ರಧಾನ ಚಿತ್ರಗಳಲ್ಲೇ ನಟಿಸುತ್ತಿದ್ದಾರೆ.

ರಾಗಿಣಿ ಐಪಿಎಸ್ ಚಿತ್ರವು ನಿರ್ಮಾಪಕರಿಗೆ ಬಂಡವಾಳ ಹಿಂದಿರುಗುವಂತೆ ಮಾಡಿದ ನಂತರ ಅವರು ವೀರರಣಚಂಡಿ ಮುಂತಾದ ಚಿತ್ರಗಳಲ್ಲಿ ಸಾಹಸಮಯ ದೃಶ್ಯಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ರಾಗಿಣಿ ಅಂದು ಮಾತನಾಡುವ ಮೂಡ್ನಲ್ಲಿದ್ದರು. ನಾನು ಲೆಕ್ಕಚಾರ ಹಾಕಿಕೊಂಡು ಚಿತ್ರರಂಗಕ್ಕೆ ಬಂದವಳಲ್ಲ, ನನಗೆ ಬಂದ ಆಫರ್ಗಳನ್ನೇಲ್ಲಾ ಒಪ್ಪಿಕೊಂಡಿದ್ದರೆ ಇಂದು ನಾನು ಬಲು ಬ್ಯೂಜಿ ನಟಿಯಾಗುತ್ತಿದ್ದೆ, ಒಳ್ಳೆ ಕತೆ, ನಿರ್ಮಾಣ, ನಿರ್ದೇಶಕರ ಚಿತ್ರಗಳಲ್ಲಿ ಮಾತ್ರ ನಟಿಸಲು ನಿರ್ಧರಿಸಿದ್ದೇನೆ.

ಈಗ ಪ್ರೇಮ ಅವರ ಗಾಂಧಿಗಿರಿ ಹಾಗೂ ಶರಣ್ ಅಭಿನಯದ ಅಧ್ಯಕ್ಷ ಇನ್ ಅಮೆರಿಕಾ ಚಿತ್ರದಲ್ಲಿ ನಟಿಸುತ್ತಿದ್ದು, ಇನ್ನೆರಡು ಚಿತ್ರಗಳ ಕಥೆಯನ್ನು ಕೇಳುತ್ತಿದ್ದೇನೆ. ಕೆಲವರಿಗೆ ಬೇಜಾರು ಮಾಡಬಾರದೆಂಬ ದೃಷ್ಟಿಯಿಂದ ಐಟಂ ಹಾಡಿಗೆ ಹೆಜ್ಜೆ ಹಾಕಿದೆ ಅಷ್ಟೇ ಎಂದರು.

ಇತ್ತೀಚೆಗೆ ರಾಗಿಣಿಗೆ ಒಂದು ವಿವಾದ ತಳಕು ಹಾಕಿಕೊಂಡಿತ್ತು ಇದಕ್ಕೆ ಉತ್ತರಿಸಿದ ಅವರು, ಚಿತ್ರರಂಗದಲ್ಲಿರುವ ಸೆಲಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ನನಗೂ ಆ ಅನುಭವ ಆಗಿದೆ. ಅನಗತ್ಯವಾಗಿ ನನ್ನ ಹೆಸರನ್ನು ಎಳೆಯಲಾಗಿದೆ. ಅದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳುವುದಿಲ್ಲ.

ನ್ಯಾಯಾಲಯವೇ ತೀರ್ಮಾನಿಸುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ರಾಗಿಣಿ ಮೂಲತ: ಕ್ರೀಡಾಪಟುವಾಗಿದ್ದರಿಂದ, ಕ್ರೀಡೆ ಕುರಿತ ಚಿತ್ರವೊಂದರಲ್ಲಿ ನಟಿಸಬೇಕೆಂಬ ಮನದಾಳದ ಆಸೆಯನ್ನು ಹೊರಗೆ ಹಾಕಿದ್ದು ಅದಷ್ಟು ಬೇಗ ಅವರು ಅಂತಹ ಚಿತ್ರದಲ್ಲಿ ನಟಿಸುವಂತಾಗಲಿ.

ಮಾರ್ಚ್ 20, 2009ರಲ್ಲಿ ವೀರಮದಕರಿ ಚಿತ್ರದ ಮೂಲಕ ನಾಯಕಿಯಾದ ರಾಗಿಣಿ ಈವರೆಗೂ 25ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರ ಚಿತ್ರ ಪಯಣ ಶರವೇಗದಲ್ಲಿ ಸಾಗುತ್ತಿರಲಿ ಎಂಬುದೇ ಸಿನಿಸುದ್ದಿಯ ಆಶಯ.

Share This With Your Friends

Related posts