Bollywood Cinisuddi Fresh Cini News 

ರಿಯಾಲಿಟಿ ಶೋಗೆ ಜಡ್ಜ್ ಆಗಿ ಕಿರುತೆರೆಗೂ ಕಾಲಿಟ್ಟ ಕರೀನಾ

ಡ್ಯಾನ್ಸ್ ರಿಯಾಲಿಟಿ ಶೋಗೆ ಕರೀನಾ ಜಡ್ಜ್ಬಾಲಿವುಡ್ ಬ್ಯೂಟಿ-ತುಂಟಿ-ಆಂಟಿ ಕರೀನಾ ಕಪೂರ್ ಖಾನ್ ಟೆಲಿವಿಷನ್ ಕ್ಷೇತ್ರಕ್ಕೂ ಜಿಗಿಯಲು ಸಜ್ಜಾಗಿದ್ದಾಳೆ. ಝೀ ಟಿವಿಯ ಜನಪ್ರಿಯ ನೃತ್ಯ ರಿಯಾಲಿಟಿ ಶೋ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಗೆ ತೀರ್ಪುಗಾರಳಾಗುವ ಮೂಲಕ ಕಿರುತೆರೆಗೂ ಪಾದಾರ್ಪಣೆ ಮಾಡಲಿದ್ದಾಳೆ.

ಇದೇ ಪ್ರಥಮ ಬಾರಿಗೆ ಟಿವಿ ರಿಯಾಲಿಟಿ ಶೋನಲ್ಲಿ ಆಕೆಯನ್ನು ನೋಡಲು ಪುಟ್ಟತೆರೆ ಅಭಿಮಾನಿಗಳೂ ಕಾತುರರಾಗಿದ್ದಾರೆ. ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ನಿರ್ಮಾಪಕರು ಈಗಾಗಲೇ ಬಾಲಿವುಡ್ ಬೇಬ್‍ನನ್ನು ಭೇಟಿ ಮಾಡಿ ತೀರ್ಪುಗಾತಿಯಾಗಬೇಕೆಂದು ಮನವಿ ಮಾಡಿದ್ಧಾರೆ.

ಕರೀನಾ ಇದಕ್ಕೆ ಓಕೆ ಎಂದಿದ್ದಾಳಂತೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಘೋಷಣೆಯಾಗಲಿದೆ.ಖ್ಯಾತ ನೃತ್ಯ ನಿರ್ದೇಶಕ ಬಾಸ್ಕೋ ಮಾರ್ಟಿಸ್ ತೀರ್ಪುಗಾರರಲ್ಲಿ ಒಬ್ಬರಾಗಿದ್ದಾರೆ.

ಜಡ್ಜ್ ಆಗಿ ಕರೀನಾ, ಡಿಐಡಿ ಶೋಗೆ ತಾರಾ ಮೆರುಗು ನೀಡಲಿದ್ದಾಳೆ. ಡ್ಯಾನ್ಸ್ ಬಗ್ಗೆಯೂ ಈಕೆಗೆ ಸಾಕಷ್ಟು ಜ್ಞಾನವಿದೆ. ಬಳುಕುವ ಬಳ್ಳಿಯಂಥ ಮೈಮಾಟದೊಂದಿಗೆ ಸೂಪರ್‍ಹಿಟ್ ಸಿನಿಮಾಗಳಲ್ಲಿ ಬಾಲಿವುಡ್ ಬೇಬ್ ಮಾದಕವಾಗಿ ನರ್ತಿಸಿ ಪಡ್ಡೆ ಹೈಕಳ ಮನಗೆದ್ದಿದ್ದಳು.

ಸೂಪರ್‍ಹಿಟ್ ವೀರೆ ಡಿ ವೆಡ್ಡಿಂಗ್ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಕರೀನಾ ಬಾಲಿವುಡ್‍ಗೆ ಕೆಲಕಾಲ ಬ್ರೇಕ್ ನೀಡಿದ್ದಳು.ರ್ಯಾಂಪ್ ಶೋ, ಫೋಟೋ ಶೂಟ್, ಬ್ರಾಂಡ್ ಆಂಬಾಸಿಡರ್ ಕಾರ್ಯಗಳಲ್ಲಿ ಬ್ಯೂಸಿಯಾಗಿರುವ ಕೆಕೆಕೆ ಮುಂದಿನ ಪ್ರಾಜೆಕ್ಟ್ ಗುಡ್ ನ್ಯೂಸ್.

ಈ ಚಿತ್ರದಲ್ಲಿ ಕರೀನಾ ಗರ್ಭಿಣಿ ಪಾತ್ರ ನಿರ್ವಹಿಸುತ್ತಿದ್ದಾಳೆ. ನಟ ಸೈಫ್ ಅಲಿ ಖಾನ್ ಜೊತೆ ಮದುವೆಯಾಗಿ ತೈಮೂರ್ ಎಂಬ ಮುದ್ದಾದ ಬೇಬಿಗೆ ಜನ್ಮ ನೀಡಿರುವ ಕರೀನಾ ಬೇಗಂ ಬಾಲಿವುಡ್ ಮಂದಿಗೆ ಈಗಲೂ ಬೇಬ್.

ಗುಡ್ ನ್ಯೂಸ್‍ನಲ್ಲಿ ಅಕ್ಷಯ್ ಕುಮಾರ್, ಕಿಯಾರಾ ಅಡ್ವಾಣಿ, ಮತ್ತು ದಿಲ್‍ಜಿತ್ ದೋಸಾಂಜ್ ಪ್ರಮುಖ ಪಾತ್ರದಲ್ಲಿದ್ದಾರೆ. ಓಂಬತ್ತು ವರ್ಷಗಳ ನಂತರ ಅಕ್ಷಯ್ ಮತ್ತು ಕರೀನಾ ಗುಡ್ ನ್ಯೂಸ್ ಮೂಲಕ ಮತ್ತೆ ಒಗ್ಗೂಡಿರುವುದು ಅಭಿಮಾನಿಗಳಿಗೆ ಸಿಹಿಸುದ್ದಿಯಾಗಿದೆ. ಕಂಬಖ್ತ್ ಇಷ್ಖ್‍ನಲ್ಲಿ ಅಕ್ಕಿ-ಕೆಕೆ ಒಟ್ಟಿಗೆ ನಟಿಸಿದ್ದರು.

Share This With Your Friends

Related posts