Bollywood Cinisuddi Fresh Cini News 

ಮುದ್ದಿನ ಪತಿರಾಯ ನಿಕ್ ನನ್ನ ಹಾಡಿ ಹೊಗಳಿದ ಪಿಗ್ಗಿ

ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಮತ್ತು ಅಮೆರಿಕನ್ ಪಾಪ್ ಸಿಂಗರ್ ನಿಕ್ ಜೋನ್ಸ್ ವಿವಾಹ ಮುರಿದು ಬೀಳಲಿದೆ ಎಂಬ ಸುದ್ದಿಗಳ ಮಧ್ಯೆ ಪಿಗ್ಗಿ ತನ್ನ ಮುದ್ದಿನ ಪತಿರಾಯ ನಿಕ್‍ನನ್ನು ಮತ್ತೆ ಹಾಡಿ ಹೊಗಳಿದ್ದಾಳೆ.

ನ್ಯೂಯಾರ್ಕ್‍ನಲ್ಲಿ ನಡೆದ ವಿಶ್ವ ಶೃಂಗಸಭೆ ಯಲ್ಲಿ 10ನೇ ವಾರ್ಷಿಕ ಮಹಿಳಾ ಸಮಾರಂಭದಲ್ಲಿ ಪೀಸೀ, ನಿಕ್‍ನ ಉತ್ತಮ ಗುಣಗಳನ್ನು ವಿವರಿಸಿದ್ದಾಳೆ. ಇದಕ್ಕೆ ಕೆಲವು ಉದಾಹರಣಗಳನ್ನೂ ನೀಡಿದ್ದಾಳೆ.

ನನ್ನ ಮತ್ತು ನಿಕ್ ನಡುವೆ ಆಗಷ್ಟೇ ಪ್ರೇಮಾಂಕುರವಾಗಿತ್ತು. ಗೆಳೆಯ-ಗೆಳತಿಯ ರೊಂದಿಗೆ ನಾವು ಸಂತಸದಿಂದ ಸುತ್ತಾಡಿ ಭರ್ಜರಿ ಔತಣ ಸೇವಿಸುವ ಕಾರ್ಯಕ್ರಮ ನಿಗದಿಯಾಗಿತ್ತು.

ಇದೇ ಸಂದರ್ಭದಲ್ಲಿ ನಿರ್ಮಾಪಕರೊಬ್ಬ ರೊಂದಿಗೆ ಸಿನಿಮಾ ಪ್ರಾಜೆಕ್ಟ್‍ಗೆ ಸಂಬಂಧಪಟ್ಟ ಸಭೆಗೂ ನಾನು ಕಮಿಟ್ ಆಗಿದ್ದೆ. ನಿಕ್ ಮತ್ತು ಗೆಳೆಯರಿದ್ದ ಸಭೆಗೆ ಆದ್ಯತೆ ನೀಡಿ ನಿರ್ಮಾಪಕರ ಸಭೆಗೆ ಗೈರು ಆಗಲು ನಿರ್ಧರಿಸಿ ಅದಕ್ಕಾಗಿ ಸೂಕ್ತ ಕಾರಣ ಹುಡುಕುತ್ತಿದ್ದೆ.

ಆದರೆ ನನ್ನ ಡೋಲಾಯಮಾನ ಪರಿಸ್ಥಿತಿ ಗಮನಿಸಿದ ನಿಕ್, ಮುಖ್ಯ ವಿಷಯಕ್ಕೆ ಅದ್ಯತೆ ನೀಡಿ ನಿರ್ಮಾಪಕರ ಸಭೆಗೆ ತಪ್ಪದೇ ಹಾಜರಾಗುವಂತೆ ಸಲಹೆ ನೀಡಿದರು.ನಿನ್ನ ಬದ್ಧತೆಯಿಂದಲೇ ನೀನು ಈ ಮಟ್ಟಕ್ಕೆ ಬೆಳೆಯಲು ಕಾರಣ.

ನಿನ್ನ ವೃತ್ತಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡಿಕೊಳ್ಳಬೇಡ. ಮೊದಲು ವೃತ್ತಿ-ಕರ್ತವ್ಯಕ್ಕೆ ಆದ್ಯತೆ ನೀಡು.ಮೇಲೆ ಉಳಿದ ವಿಷಯ ಎಂದು ನನಗೆ ನಿಕ್ ಸಲಹೆ ಮಾಡಿದರು. ನಿಕ್ ಹೇಳುತ್ತಿರುವುದು ಸರಿ ಎನಿಸಿ ನಾನು ನಿರ್ಮಾಪಕರ ಸಭೆಗೆ ಹಾಜರಾದೆ.

ಪ್ರಾಜೆಕ್ಟ್ ಕೂಡ ಓಕೆ ಆಯಿತು. ಇದಕ್ಕೆ ನಿಕ್ ಕಾರಣ. ಅವರ ಸ್ಥಾನದಲ್ಲಿ ಬೇರೆಯವರು ಇದ್ದಿದ್ದರೆ ನಾನು ತುಂಬಾ ಮುಖ್ಯ ಸಭೆಗೆ ಹೋಗಲು ಆಗುತ್ತಿರಲಿಲ್ಲ ಎಂದು ಪಿಗ್ಗಿ ವಿವರಿಸಿದ್ದಾಳೆ.ಇಂದು ಒಂದು ಉದಾಹರಣೆಯಷ್ಟೇ.

ಎಷ್ಟೋ ಸಂದರ್ಭಗಳಲ್ಲಿ ನಿಕ್ ನನಗೆ ಮತ್ತು ನನ್ನ ಸಿನಿಮಾ ವೃತ್ತಿಗೆ ತುಂಬಾ ಬೆಂಬಲ ನೀಡಿದ್ಧಾರೆ. ಅವರ ಸಹಕಾರ ಮತ್ತು ಸಪೋರ್ಟ್‍ನನ್ನು ನಾನು ಮರೆಯಲಾರೆ ಎಂದು ದೇಸಿಗರ್ಲ್ ಹೇಳಿದ್ದಾಳೆ.

Share This With Your Friends

Related posts