Cinisuddi Fresh Cini News 

ಮುಂದೊಂದು ದಿನ ‘ರಾಜಕೀಯ’ ಮಾಡ್ತಾಳಂತೆ ಸಾರಾ..!

ಬಣ್ಣದ ಲೋಕಕ್ಕೂ ರಾಜಕೀಯ ರಂಗಕ್ಕೂ ಸಂಬಂಧವಿದೆ. ಜನಪ್ರಿಯ ನಟ-ನಟಿಯರು ರಾಜಕೀಯಕ್ಕೆ ಜಿಗಿದೂ ಅಲ್ಲೂ ಮೋಡಿ ಮಾಡಿದ ಸಾಕಷ್ಟು ಉದಾಹರಣೆಗಳಿವೆ.

ಹೊಸ ತಲೆಮಾರಿನ ಕೆಲವು ತಾರೆಯರಿಗೆ ರಾಜಕೀಯ ಅಲರ್ಜಿಯಾದರೆ ಇನ್ನು ಕೆಲವರಿಗೆ ಅದು ಎನರ್ಜಿ.ಬಾಲಿವುಡ್‍ನ ಲಕ್ಕಿ ಗರ್ಲ್‍ಗಳಲ್ಲಿ ಒಬ್ಬಳಾದ ಸಾರಾ ಅಲಿ ಖಾನ್ ರಾಜಕೀಯ ರಂಗದ ಬಗ್ಗೆ ಆಸಕ್ತಿ ಹೊಂದಿದ್ದಾಳೆ. ಮುಂದೊಂದು ದಿನ ರಾಜಕೀಯ ಸೇರುವ ಅಪೇಕ್ಷೆಯನ್ನೂ ವ್ಯಕ್ತಪಡಿಸಿದ್ದಾಳೆ. ಸಂದರ್ಶನವೊಂದರಲ್ಲಿ ತನ್ನ ಮನದಾಳದ ಬಯಕೆಯನ್ನು ಹೊರ ಹಾಕಿರುವ ಸಾರಾ, ಸಿನಿಮಾ ಮತ್ತು ನಟನೆ ನಮ್ಮ ಮೊದಲ ಆದ್ಯತೆಯಾದರೂ, ಭವಿಷ್ಯದಲ್ಲಿ ರಾಜಕಾರಣಕ್ಕೆ ಸೇರಲು ಇಚ್ಛಿಸಿದ್ದೇನೆ ಎಂದಿದ್ದಾಳೆ.

ಆದರೆ ಯಾವಾಗ ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ.ಈಕೆ ಚೆನ್ನಾಗಿ ಓದಿ ಬೇರೆ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂಬುದು ನಟಿ ಅಮೃತಾ ಸಿಂಗ್ ಮತ್ತು ನಟ ಸೈಫ್ ಅಲಿ ಖಾನ್ ಬಯಕೆಯಾಗಿತ್ತು.ತಂದೆಯ ವಿರೋಧದ ನಡುವೆಯೂ ಸಿನಿಮಾಲೋಕಕ್ಕೆ ಎಂಟ್ರಿಯಾದಳು.

ಸಾರಾ ಅಲಿ ಖಾನ್ ಈಗ ಬಾಲಿವುಡ್‍ನ ಬೇಡಿಕೆಯ ನವತಾರೆ. ಮೊದಲ ಎರಡು ಸಿನಿಮಾಗಳು (ಕೇದಾರ್‍ನಾಥ್ ಮತ್ತು ಸಿಂಬಾ) ಸೂಪರ್‍ಹಿಟ್ ಆಗುತ್ತಿದ್ದಂತೆ ಅವಕಾಶಗಳನ್ನು ಈಕೆಯನ್ನು ಹುಡುಕಿಕೊಂಡು ಬರುತ್ತಿವೆ.ಇಮ್ತಿಯಾಜ್ ಅಲಿ ನಿರ್ದೇಶನದ ಹೊಸ ಚಿತ್ರದಲ್ಲಿ ಸಾರಾ, ಕಾರ್ತಿಕ್ ಆರ್ಯನ್‍ಗೆ ಜೋಡಿಯಾಗಿದ್ದಾಳೆ.

ಇದು ಸಾರಾ ತಂದೆ ಸೈಫ್ ಅಭಿನಯಿಸಿದ್ದ ಲವ್ ಆಜ್ ಕಲ್ ಚಿತ್ರದ ಮುಂದಿನ ಭಾಗ. ವರಣ್ ಧವನ್ ಅಭಿನಯದ ಕೂಲಿ ನಂ.1 ರಿಮೇಕ್‍ನಲ್ಲೂ ಅವಕಾಶ ಗಿಟ್ಟಿಸಿದ್ದಾಳೆ.

Share This With Your Friends

Related posts