Cinisuddi Fresh Cini News 

ನಿರ್ಮಾಪಕಿಯಾದ ನಟಿ ಅಶ್ವಿನಿ ಗೌಡ

ವಾರಸ್ದಾರ ಚಿತ್ರದ ಮೂಲಕ ಬಣ್ಣದ ಬದುಕಿಗೆ ಪಾರ್ದಾಪಣೆ ಮಾಡಿದ ನಟಿ ಅಶ್ವಿನಿಗೌಡ ಅವರು ಈಗ ನಿರ್ಮಾಪಕಿಯಾಗುವ ಮೂಲಕ ಯುವ ಕಲಾವಿದರಿಗೆ ದಾರಿದೀಪವಾಗಲು ಹೊರಟಿದ್ದಾರೆ.

15 ವರ್ಷಗಳಿಂದ ಬಣ್ಣದ ಲೋಕದಲ್ಲಿರುವ ಅಶ್ವಿನಿಗೌಡ ಅವರು, ಸಿನಿಮಾವಲ್ಲದೆ ಸೀರಿಯಲ್‍ಗಳಲ್ಲೂ ತಮ್ಮ ನಟನೆಯ ರಂಗನ್ನು ಮೂಡಿಸಿದ್ದು, ಈಗ ಬಲು ಬೇಡಿಕೆಯ ಪೋಷಕ ನಟಿಯಾಗಿದ್ದಾರೆ. ಬಣ್ಣದ ಲೋಕದ ನಡುವೆಯು ತಮ್ಮ ಸಂಸಾರವನ್ನು ನಿಭಾಯಿಸಿಕೊಂಡು ಹೊರಟಿರುವ ಅಶ್ವಿನಿಗೌಡ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗುವ ಮೂಲಕ ಕನ್ನಡ ಏಳಿಗೆಗೆ ಶ್ರಮಿಸಿದ್ದಾರೆ.

ಅಶ್ವಿನಿಗೌಡ ಅವರು ಈಗಾಗಲೇ 40 ಸಿನಿಮಾಗಳು, 15 ಸೀರಿಯಲ್‍ಗಳಲ್ಲಿ ನಟಿಸಿದ್ದು ಈಗ ಎಎಂಜಿ ಸಂಸ್ಥೆಯನ್ನು ಸ್ಥಾಪಿಸಿದ್ದು ಅದರ ಮೂಲಕ ಸಿನಿಮಾ ಹಾಗೂ ಟೀವಿ ಸೀರಿಯಲ್‍ಗಳನ್ನು ನಿರ್ಮಿಸಲು ಹೊರಟಿದ್ದಾರೆ. ಈ ಪ್ರೊಡಕ್ಷನ್‍ನಲ್ಲಿ ತಯಾರಾಗುವ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಿದ್ದು, ಹಿರಿಯರನ್ನು ಮರೆಯಲ್ಲವಂತೆ.

ವರ್ಷದ ಕೊನೆಯಲ್ಲಿ ಮೊದಲ ಚಿತ್ರದ ಚಿತ್ರೀಕರಣವನ್ನು ಆರಂಭಿಸುತ್ತಾರಂತೆ. ಈಗಾಗಲೇ ಹಲವು ನಿರ್ದೇಶಕರಿಂದ ಅಶ್ವಿನಿಯು ಕಥೆಯನ್ನು ಕೇಳುತ್ತಿದ್ದಾರಂತೆ.

ಅಶ್ವಿನಿಗೌಡ ಅವರ ಈ ಹೊಸ ಯೋಜನೆಗೆ ಅವರ ಸಂಬಂಧಿ ಬಾಸ್ ಅಸೋಸಿಯೇಟ್ಸ್‍ನ ಮನುಗೌಡ ಅವರು ಕೈಜೋಡಿಸಿದ್ದಾರೆ.
ವರನಟ ಡಾ.ರಾಜ್‍ಕುಮಾರ್ ಅವರ ಪುಣ್ಯತಿಥಿಯಾದ ಏಪ್ರಿಲ್ 12 ರಂದು ಅಶ್ವಿನಿಯವರ ಎರಡು ಕಚೇರಿಗಳನ್ನು ಕೂಡಲಸಂಗಮ ಪಂಚಮಸಾಲಿ ಮಠದ ಶ್ರೀ ಜಯಮೃತ್ಯುಂಜಯಸ್ವಾಮಿಯವರು ಉದ್ಘಾಟಿಸಿದರು.

ನಟ ರಾಘವೇಂದ್ರರಾಜ್‍ಕುಮಾರ್, ರಕ್ಷಣಾ ವೇದಿಕೆಯ ರಾಜ್ಯಧ್ಯಕ್ಷ ಟಿ.ಎ.ನಾರಾಯಣಗೌಡ, ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಬಾ.ಮ.ಹರೀಶ್, ನಟ ಗುರುದತ್, ಗಣೇಶ್‍ರಾವ್ ಮುಂತಾದವರು ಆಗಮಿಸಿ ಶುಭ ಹಾರೈಸಿದರು.

ನಟಿಯಾಗಿ, ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಅಧ್ಯಕ್ಷರಾಗಿ ಹೆಸರು ಮಾಡಿರುವ ಅಶ್ವಿನಿ ಅವರು ಈಗ ನಿರ್ಮಾಪಕಿಯಾಗಲು ಹೊರಟಿದ್ದು ಅವರ ನಿರ್ಮಾಣ ಸಂಸ್ಥೆಯಿಂದ ಉತ್ತಮ ಚಿತ್ರಗಳು ಹೊಮ್ಮಿಬರುವಂತಾಗಲಿ.

Share This With Your Friends

Related posts