Bollywood Cinisuddi Fresh Cini News 

ದೇಶಭಕ್ತಿ ಗೀತೆಗೆ ಧ್ವನಿಗೂಡಿಸಿದ ಪರಿಣೀತಿ

ಸೂಪರ್ ಸ್ಮೆ ಲಿಂಗ್ ಬ್ಯೂಟಿ ಪರಿಣೀತಿ ಚೋಪ್ರಾ ದೇಶಭಕ್ತಿ ಗೀತೆಗೆ ಧ್ವನಿಯಾಗಿ ಸುದ್ದಿ ಮಾಡಿದ್ದಾಳೆ. ಅಕ್ಷಯ್ ಕುಮಾರ್ ಮತ್ತು ಪರಿಣೀತಿ ನಟಿಸಿರುವ ಐತಿಹಾಸಿಕ ಮಹತ್ವದ ಕೇಸರಿ ಸಿನಿಮಾ ಈಗಾಗಲೇ ಬಿಡುಗಡೆಯಾಗಿ ಭರ್ಜರಿ ಹಿಟ್ ಆಗಿದೆ.

ಈ ಚಿತ್ರದ ಮತ್ತೊಂದು ಹೈಲೆಟ್ “ತೇರಿ ಮಿಟ್ಟಿ” ಎಂಬ ದೇಶಭಕ್ತಿ ಗೀತೆ. ತಾಯ್ನಾಡಿಗಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮರ ಗುಣಗಾನ ಮಾಡುವ ಭಾವನಾತ್ಮಕ ಗೀತೆ ಇದು. ಗಾಯಕ ಬಿ. ಪ್ರಾಖ್ ಹಾಡಿರುವ ಪುರುಷ ಧ್ವನಿಯ ಗೀತೆಯೂ ಈಗಾಗಲೇ ಜನಪ್ರಿಯವಾಗಿದೆ.

ಆಫ್ಘಾನಿಸ್ತಾನದ 10,000 ದಾಳಿಕೋರರು ಮತ್ತು 24 ಸಿಖ್ ವೀರಾಗ್ರಣಿಗಳ ನಡುವೆ ನಡೆದ ಸಾರಾಗರಿ ಸಮರ ಘಟನೆ ಆಧಾರಿತ ಚಿತ್ರ ದೇಶ-ವಿದೇಶ ಗಳಲ್ಲೂ ಸುದ್ದಿ ಮಾಡುತ್ತಿದೆ. ಈ ಹಾಡಿಗೆ ಫೀಮೇಲ್ ವಾಯ್ಸ್ ನೀಡಬೇಕೆಂಬ ಆಲೋಚನೆ ಬರುತ್ತಿದ್ದಂತೆ ನಿರ್ದೇಶಕ ಅನುರಾಗ್ ಸಿಂಗ್ ಮತ್ತು ನಿರ್ಮಾಪಕ ಕರಣ್ ಜೋಹರ್ ತಡಮಾಡದೇ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಕಳೆದ ವಾರ ಮುಂಬೈ ಸ್ಟುಡಿಯೋದಲ್ಲಿ ಈ ಹಾಡಿಗೆ ಪರಿಣೀತಿ ಕಂಠದಾನ ಮಾಡಿದಳು. ಹೆಣ್ಣು ಧ್ವನಿಗೆ ಅನುಗುಣವಾಗಿ ಈ ಹಾಡಿನ ಗೀತರಚನೆಯ ಲಿರಿಕ್‍ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಪಿ.ವಿ. ಮುಖರ್ಜಿ ತೇರಿ ಮಿಟ್ಟಿ ದೇಶಭಕ್ತಿ ಗೀತೆಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಮನೋಜ್ ಮುಂಟಾಶಿರ್ ದೇಶಾಭಿಮಾನಕ್ಕೆ ಸ್ಫೂರ್ತಿ ನೀಡುವಂತೆ ಈ ಹಾಡಿಗೆ ಗೀತ ರಚಿಸಿದ್ದಾರೆ. ಈ ಹಾಡನ್ನು ಪರಿ ಅತ್ಯಂತ ಭಾವೋದ್ವೇಗದಿಂದ ಹಾಡಿ ಸಂಗೀತ ನಿರ್ದೇಶಕರು ಮತ್ತು ಗೀತರಚನೆಕಾರರ ಮನಗೆದ್ದಿದ್ದಾಳೆ.ಈ ಹಾಡಿನ ವಿಡಿಯೋ ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದೆ.

ಪರಿಣೀತಿ ಹಾಡಿರುವ ಗೀತೆಯನ್ನು ಚಿತ್ರದಲ್ಲಿ ಸೇರಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.ಪರಿಣೀತಿ ನಟನೆಯಲ್ಲಿ ಅಷ್ಟೇ ಅಲ್ಲದೇ ಗಾಯನದಲ್ಲೂ ಗಮನ ಸೆಳೆದಿದ್ದಾಳೆ. ಇದು ಪರಿ ಹಾಡಿರುವ ಎರಡನೇ ಗೀತೆ. ಮೇರಿ ಪ್ಯಾರಿ ಬಿಂದು ಸಿನಿಮಾದಲ್ಲಿ ಮಾನಾ ಕಿ ಹಮ್ ಯಾರ್ ನಹಿ ಹಾಡನ್ನು ಅತ್ಯಂತ ಮಾಧುರ್ಯವಾಗಿ ಹಾಡಿ ಗಮನ ಸೆಳೆದಿದ್ದಳು.

Share This With Your Friends

Related posts