Bollywood Cinisuddi Fresh Cini News 

ಟೀಕೆಗಳಿಗೆ ಕ್ಯೂಟ್ ಉತ್ತರ ನೀಡಿದ ಅಲಿಯಾ ಭಟ್

ಬಾಲಿವುಡ್ ಕ್ಯೂಟ್ ಕ್ಯೂಟ್ಗರ್ಲ್ ಅಲಿಯಾ ಭಟ್ ಸೌಮ್ಯ ಸ್ವಭಾವದ ನಟಿ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವವಳಲ್ಲ. ಅಂಧ ಸಂದರ್ಭಗಳು ಎದುರಾದರೂ ಜಾಣ್ಮೆಯಿಂದ ಜಾರಿಕೊಳ್ಳುತ್ತಾಳೆ.

ಈಕೆಯ ಪ್ರತಿಭೆ ಮತ್ತು ರೂಪದ ಬಗ್ಗೆ ಎರಡು ಮಾತುಗಳಿಲ್ಲ. ಬಾಲಿವುಡ್‍ನ ಬಹು ಬೇಡಿಕೆ ತಾರೆಯಲ್ಲಿ ಎಬಿ ಕೂಡ ಒಬ್ಬಳು.ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹೊಸ ಪ್ರಾಜೆಕ್ಟ್ ಇನ್‍ಶಾಅಲ್ಲಾ ಚಿತ್ರದಲ್ಲಿ ಸೂಪರ್‍ಸ್ಟಾರ್ ಸಲ್ಮಾನ್‍ಖಾನ್‍ಗೆ ಜೋಡಿಯಾಗಲಿದ್ದಾಳೆ.

ಎರಡು ದಶಕದ ಬಳಿಕ ಬನ್ಸಾಲಿ ಮತ್ತು ಸಲ್ಲು ಈ ಚಿತ್ರದ ಮೂಲಕ ಒಗ್ಗೂಡಿದ್ದಾರೆ. ಇದೇ ವೇಳೆ ಸಿನಿಮಾದ ಪಾತ್ರ ವರ್ಗದ ಬಗ್ಗೆ ಕೆಲವು ಟೀಕೆ-ಟಿಪ್ಪಣಿಗಳೂ ವ್ಯಕ್ತವಾಗಿವೆ.ಸಲ್ಲು 53 ವರ್ಷದ ನಟ.

ಆತನಿಗೆ ಜೋಡಿಯಾಗುವುದು ಸರಿ ಕಾಣುತ್ತಿಲ್ಲ. ಇವರಿಬ್ಬರ ವಯಸ್ಸಿನ ನಡುವೆ ತುಂಬಾ ಅಂತರವಿದೆ ಎಂದು ಅಭಿಮಾನಿ ಗಳು ಟೀಕಿಸಿದ್ದಾರೆ. ಬನ್ಸಾಲಿ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳ ಬಗ್ಗೆಯೂ ಚಕಾರ ವ್ಯಕ್ತವಾಗಿದೆ.

ಇದಕ್ಕೆ ಬುದ್ದಿವಂತೆ ಅಲಿಯಾ ಸಾಫ್ಟ್ ರಿಯಾಕ್ಷನ್ ನೀಡಿದ್ದಾಳೆ. ಪ್ರತಿಯೊಂದು ಸಿನಿಮಾಗೂ ಟೀಕೆ-ಟಿಪ್ಪಣಿ ಸಾಮಾನ್ಯ. ನನಗೆ ವೈಯಕ್ತಿಕವಾಗಿ ಇಂಥ ಯಾವುದೇ ಟೀಕೆಗಳು ಬಂದಿಲ್ಲ.

ಬದಲಿಗೆ ಇಂಥ ದೊಡ್ಡ ಪ್ರಾಜೆಕ್ಟ್‍ನಲ್ಲಿ ನಾನು ನಟಿಸುತ್ತಿರುವುದಕ್ಕೆ ಅನೇಕರು ಖುಷಿಯಾಗಿದ್ದಾರೆ.ನಾನು ಕೂಡ ಚಿತ್ರದ ಬಗ್ಗೆ ಬಾವುಕಳಾಗಿದ್ದೇನೆ. ಟೀಕೆಗಳು ಮತ್ತು ಊಹೆಗಳೂ ಕೂಡ ಒಂದು ರೀತಿ ಭಾವನಾತ್ಮಕವಾದುದು ಎಂಬುದು ನನ್ನ ಅಭಿಪ್ರಾಯ. ಟೀಕೆಗಳು ಸಾಮಾನ್ಯ.

ಇವುಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಬನ್ಸಾಲಿ ಮತ್ತು ಸಲ್ಲು ಅವರೂ ಕೂಡ ಈ ಬಗ್ಗೆ ಚಿಂತಿಸಿಲ್ಲ. ಬನ್ಸಾಲಿ ಅತ್ಯುತ್ತಮ ನಿರ್ದೇಶಕರು. ಉತ್ತಮ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ಧಾರೆ.

ಅವರ ಆಯ್ಕೆ ಸರಿಯಾಗಿಯೇ ಇದೆ. ಅವರ ದೃಷ್ಟಿ ಕೋನದಲ್ಲಿ ನಮಗೆಲ್ಲಾ ವಿಶ್ವಾಸವಿದೆ ಎಂದು ಅಲಿಯಾ ಹೇಳಿದ್ದಾರೆ.ರಾಝಿ ಚಿತ್ರದ ಮನೋಜ್ಞ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿರುವ ಈ ತಾರೆ ಮೋಹಕ ನಟ ರಣಬೀರ್ ಕಪೂರ್ ಜೊತೆ ಸಪ್ತ ಪದಿ ತುಳಿಯವುದು ಬಹುತೇಕ ನಿಶ್ಚಿತ.

Share This With Your Friends

Related posts