Cinisuddi Fresh Cini News 

‘ಜೈ ಕೇಸರೀನಂದನ’ ಚಿತ್ರ ಈ ವಾರ ತೆರೆಗೆ

ಥಿಂಕ್ ಪಾಸಿಟೀವ್ ಸ್ಟುಡಿಯೋ ಲಾಂಛನದಲ್ಲಿ ಶಶಿದಾನಿ, ಪ್ರವೀಣ್ ಪತ್ರಿ, ನಾರಾಯಣ ಸಾ ಆರ್. ಪವಾರ್, ಲಕ್ಷ್ಮಣ್ ಸಿಂಗ್ರಿ ನಿರ್ಮಿಸಿರುವ ಜೈ ಕೇಸರೀ ನಂದನ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ದೇವರು ಹಾಗೂ ಮನುಷ್ಯನ ಮಧ್ಯೆ ಜನಜಾಗೃತಿ ಮೂಡಿಸುವ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಶ್ರೀಧರ್ ಜಾವೂರ್ ಚಿತ್ರಕತೆ ಸಂಭಾಷಣೆ ಬರೆದು ನಿರ್ದೇಶನ ಮಡಿದ್ದಾರೆ. ಚಿತ್ರಕ್ಕೆ ನಾಗೇಶ್ ವಿ. ಆಚಾರ್ ಛಾಯಾಗ್ರಹಣ, ರಾಜ್ ಕಿಶೋರ್ ರಾವ್ ಸಂಗೀತ, ಹನುಮಂತ ಹಾಲಿಗೇರಿ ಕಥೆ, ಥ್ರಿಲ್ಲರ್ ಮಂಜು ಸಾಹಸ, ಈಶ್ವರ್ ಸಂಕಲನ, ಸಂಜೀವ್ ಮಲಾಜುರೆ ಸಾಹಿತ್ಯ, ವಿ. ನಾಗೇಶ್ ನೃತ್ಯ ನಿರ್ದೇಶನವಿದೆ.

ರಾಜು ತಾಳಿಕೋಟೆ, ಗುರುರಾಜ್ ಹೊಸಕೋಟೆ, ಅಮೃತಾ, ಓ.ಎಸ್. ಬಿರಾದಾರ್, ಇಳಕಲ್ ಪವಾರ್, ಚಂದ್ರಶೇಖರ ಶಾಸ್ತ್ರಿ, ಕಲ್ಲೇಶ್ ವರ್ಧನ, ಪ್ರವೀಣ್ ಪತ್ರಿ, ಅಶ್ವಿನಿ, ಅಮೃತ್ ಕಾಳೆ ಇನ್ನು ಮುಂತಾದವರ ತಾರಾಬಳಗವಿದೆ.

Share This With Your Friends

Related posts