Cinisuddi Fresh Cini News 

‘ಜಿಗರಿ ದೋಸ್ತ್’ಗಳು

ಜೀವನದಲ್ಲಿ ಗೆಳೆತನ ಬಹಳ ಮುಖ್ಯ, ಗೆಳೆತನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ನಿರ್ದೇಶಕ ಎಸ್.ಮೋಹನ್ ಅವರು ಜಿಗರಿದೋಸ್ತ್ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ.

ಚಿಕ್ಕಂದಿನಿಂದಲೂ ಒಬ್ಬ ಸ್ನೇಹಿತನಿಗೆ ಲಾಯರ್ ಆಗಬೇಕು, ಇನ್ನೊಬ್ಬನಿಗೆ ಪೊಲೀಸ್ ಅಧಿಕಾರಿ ಆಗಬೇಕೆಂಬ ಕನಸನ್ನು ಹೊತ್ತಿರುತ್ತಾರೆ, ಅದನ್ನು ನನಸು ಮಾಡಿಕೊಳ್ಳುತ್ತಾರೆ, ಇವರಿಬ್ಬರೂ ಕೊನೆಯವರೆಗೂ ಜಿಗರಿ ದೋಸ್ತ್ ಗಳಾಗಿಯೇ ಇರುತ್ತಾರೋ ಅಥವಾ ದೂರವಾಗುತ್ತಾರೋ ಎಂಬುದನ್ನು ಜಿಗರ್ ದೋಸ್ತ್ ಮೂಲಕ ಹೇಳಲು ಹೊರಟಿದ್ದಾರೆ ಮೋಹನ್.

ಸ್ಕಂದಾ ಅಶೋಕ್ ಹಾಗೂ ಚೇತನ್ ಸೂರ್ಯ ಇವರು ಲಾಯರ್ ಹಾಗೂ ಪೆÇಲೀಸ್ ಅಧಿಕಾರಿ ಪಾತ್ರದಲ್ಲಿದ್ದರೆ, ಅಕ್ಷತ ಮತ್ತು ಸುಷ್ಮಾ ನಾಯಕಿಯರಾಗಿ ನಟಿಸಿದ್ದಾರೆ. ಜಿಗರಿ ದೋಸ್ತ್ ನ ಡಾನ್ ಪಾತ್ರದಲ್ಲಿ ವಿನೋದ್ ಆಳ್ವ ಅಭಿನಯಿಸಿದ್ದಾರೆ, ಇವರ ಸೋದರನ ಪಾತ್ರದಲ್ಲಿ ರ್ಇನ್ ನಟಿಸಿದ್ದಾರೆ, ದಿನೇಶ್ ಅವರ ಸಂಗೀತವಿರುವ ಈ ಚಿತ್ರದಲ್ಲಿ ಪ್ರೀತಿಗಿಂತ ಗೆಳೆತನ ಮುಖ್ಯ ಎಂದು ಹೇಳಲು ಹೊರಟಿದೆ ಚಿತ್ರತಂಡ.

ಚಿತ್ರಕ್ಕಾಗಿ 32 ದಿನಗಳ ಶೂಟಿಂಗ್ ಮಾಡಿದ್ದುಘಿ, ಎರಡು ಹಾಡು ಹಾಗು ಒಂದು ಸಾಹಸ ದೃಶ್ಯ ಬಾಕಿ ಉಳಿದಿದೆ. ಇನ್ನು ಈ ಸಿನಿಮಾ ನಿರ್ಮಾಪಕ ಬಿ.ಎಲ್.ಗಂಗಾಧರ್ ಅವರ ನಿರ್ಮಾಣದಲಿ ಮೂಡಿಬರುತ್ತಿರುವ 27ನೇ ಸಿನಿಮಾವಾಗಿದೆ.

ದಿನೇಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ ಹಾಗೂ ಪ್ರತಾಪ್ ಬಾಬು ಅವರ ಕ್ಯಾಮರ ಕೈಚಳಕವಿದೆ. ಸಿನಿಮಾ ಮೇ ತಿಂಗಳಿನಲ್ಲಿ ಬಿಡುಗಡೆಯಗುವ ಸಾಧ್ಯತೆ ಇದೆ.
ಜಿಗರಿದೋಸ್ತ್‍ಗಳು ಯಾವ ರೀತಿ ಪ್ರೇಕ್ಷಕರನ್ನು ಮೋಡಿ ಮಾಡಲಿದ್ದಾರೆ ಎಂದು ನೋಡಲು ಸಿನಿಮಾ ಬೆಳ್ಳಿಪರದೆಗೆ ಬರುವವರೆಗೂ ಕಾಯಲೇಬೇಕಷ್ಟೆ.

Share This With Your Friends

Related posts