Cinisuddi Fresh Cini News 

ಇದೆ 26 ರಂದು ತೆರೆಗೆ ಬರುತ್ತಿದೆ ಗೋಲ್ಡನ್ ಸ್ಟಾರ್ ಅಭಿನಯದ `99` ಚಿತ್ರ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ರಾಮು ಫಿಲಂಸ್ ಲಾಂಛನದಲ್ಲಿ ರಾಮು ಅವರು ನಿರ್ಮಿಸಿರುವ 99 ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಜೊತೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವೂ ಹೊರಬಂದಿದ್ದು ಇದೆ ತಿಂಗಳ 26 ರಂದು 99 ಚಿತ್ರ ತೆರೆಗೆ ಬರುತ್ತಿದೆ.
ಚಿತ್ರ ವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ.

ಗೋಲ್ದನ್ ಸ್ಟಾರ್ ಗಣೇಶ್ ನಾಯಕರಾಗಿ ಅಭಿನಯಿಸಿರುವ ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ. ಜಾಕಿ ಭಾವನ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಹೇಮಂತ್, ಸಮೀಕ್ಷ ಮುಂತಾದವರು ಅಭಿನಯಿಸಿದ್ದಾರೆ.

ಅರ್ಜುನ್ ಜನ್ಯ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದು ಅವರ ಸಂಗೀತ ನಿರ್ದೇಶನದ 100ನೇ ಚಿತ್ರ. ಉಳಿದಂತೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

Share This With Your Friends

Related posts