Uncategorized 

ಇಂದು ವರನಟ ಡಾ.ರಾಜ್ ಕುಮಾರ್ ಅವರ 13ನೇ ಪುಣ್ಯ ತಿಥಿ

ನಮ್ಮ ಕನ್ನಡ ಚಿತ್ರರಂಗದ ಹೆಮ್ಮೆಯ ವರನಟ, ಪದ್ಮಭೂಷಣ, ರಸಿಕರ ರಾಜ ಡಾ. ರಾಜಕುಮಾರ್ ರವರ 13 ನೇ ಪುಣ್ಯ ಸ್ಮರಣೆಯನ್ನು ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಗೌರವಿಸಲಾಯಿತು.ಡಾ. ರಾಜಕುಮಾರ್ ಅವರ ಸುಪುತ್ರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಸೇರಿದಂತೆ ಅಣ್ಣಾವ್ರ ತಂಗಿ ನಾಗಮ್ಮ , ಹೆಣ್ಣು ಮಕ್ಕಳು ಹಾಗೂ ಸೊಸೆಯಂದಿರು ಮತ್ತು ಕುಟುಂಬ ವರ್ಗದವರು, ಚಿತ್ರಂಗದ ಕೆಲವು ಗಣ್ಯರು ಕೂಡ ಹಾಜರಿದ್ದು ರಾಜಕುಮಾರ್ ಹಾಗೂ ಪಾರ್ವತಮ್ಮ ರಾಜಕುಮಾರ್ ಅವರ ಸಮಾಧಿಗೆ ಪೂಜೆಯನ್ನು ಮಾಡುವ ಮೂಲಕ ನಮನವನ್ನು ಸಲ್ಲಿಸಿದ್ದರು.

ಹಾಗೆ ಸಾವಿರಾರು ಅಭಿಮಾನಿಗಳು ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ವಿಶೇಷವೆಂದರೆ ಈ ಬಾರಿ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮನವರ ಅವರ ಸಮಾಧಿಯನ್ನು ಹೂವಿನ ಅಲಂಕಾರದಿಂದ ತುಂಬಿ ತುಳುಕುತ್ತಿತ್ತು. ಈ ಬಾರಿ ಅಣ್ಣಾವ್ರ ಹಾಗೂ ಪಾರ್ವತಮ್ಮ ಪುಣ್ಯ ತಿಥಿ ಒಟ್ಟಿಗೆ ಆಚರಣೆ ಮಾಡಿದ್ದು ವಿಶೇಷವಾಗಿತ್ತು.

Share This With Your Friends

Related posts