Bollywood Cinisuddi Fresh Cini News 

‘ಅಪ್ಪನ ಪರ ಚುನಾವಣಾ ಪ್ರಚಾರ ಮಾಡಲಾರೆ’ ಎಂದ ಸೋನಾಕ್ಷಿ

ಬಾಲಿವುಡ್ ದಂತದಗೊಂಬೆ ಸೋನಾಕ್ಷಿ ಸಿನ್ಹಾ ತನ್ನ ತಂದೆ ಶತ್ರುಘ್ನ ಸಿನ್ಹಾ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಒಳ್ಳೆಯದೇ ಆಯಿತು ಎಂದು ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾಳೆ. ತನ್ನ ಮುದ್ದಿನ ಅಪ್ಪನಿಗಾಗಿ ಈಕೆ ಸ್ಟಾರ್ ಕಾಂಪೈನರ್ ಆಗಲಿದ್ದಾಳೆ ಎಂಬ ಸುದ್ದಿಗಳೂ ಇದ್ದವು. ಆದರೆ ಇದನ್ನು ತಳ್ಳಿ ಹಾಕಿರುವ ಸೋನಾ ನನ್ನ ತಂದೆ ಪರ ನಾನು ಚುಣಾವಣಾ ಪ್ರಚಾರ ಮಾಡುವುದಿಲ್ಲ.ಅದಕ್ಕೆ ನನ್ನ ಬಳಿ ಸಮಯವೂ ಇಲ್ಲ.

ಮೇಲಾಗಿ ನಾನು ಪೂರ್ಣಗೊಳಿಸಬೇಕಿರುವ ಕಮಿಟ್‍ಮೆಂಟ್‍ಗಳು ಸಾಕಷ್ಟಿದೆ. ಮಿಗಿಲಾಗಿ ರಾಜಕೀಯಕ್ಕೂ ನನಗೂ ತುಂಬಾ ದೂರ ಎಂದು ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾಳೆ.ನನ್ನ ಅಪ್ಪ ಬಹು ಹಿಂದೆಯೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಬೇಕಿತ್ತು.

ಅವರು ತಡವಾಗಿಯಾದರೂ ಈ ನಿರ್ಧಾರ ತೆಗೆದುಕೊಂಡಿದ್ದು ಒಳ್ಳೆಯದೇ ಆಯಿತು. ನೀವೇನೇ ಹೇಳಿ ನಮಗೆ ಗೌರವ, ಬೆಲೆ ಇಲ್ಲದ ಕಡೆ ನಾವು ಇರಬಾರದು. ನಮಗೆ ಯಾವುದೇ ಸ್ಥಳ ಖುಷಿಯಾಗದಿದ್ದರೆ. ಅಲ್ಲಿಂದ ಜಗ ಖಾಲಿ ಮಾಡುವುದು ಸೂಕ್ತ ಎಂದು ಬಿ-ಟೌನ್ ಮುದ್ದಿನ ಅರಗಿಣಿ ಪುನರುಚ್ಚರಿಸಿದಳು.

ಕಳಂಕ್ ಸಿನಿಮಾದಲ್ಲಿ ಅದ್ಧೂರಿ ಬಹು ತಾರಾಗಣದ ಸಿನಿಮಾದಲ್ಲಿ ನೀವೂ ಒಬ್ಬರಾಗಿದ್ದೀರಿ. ನಿಮಗೆ ಅಭದ್ರತೆ ಎನಿಸುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ದಬ್ಬಾಂಗ್ ನಟಿ, ಓಷಿಯನ್ ಇಲೆವೆನ್, ದಿ ಎ-ಟೀಮ್, ಎಕ್ಸ್‍ಪ್ಯಾಂಡಬಲ್‍ನಂಥ ಬಾಲಿವುಡ್ ಸಿನಿಮಾಗಳನ್ನು ಉದಾಹರಿಸಿದಳು.

ಎಲ್ಲರೂ ಅಭದ್ರತೆ ಕಾರಣ ನೀಡಿದರೆ ಬಹುತಾರಾಗಣದ ಇಂಥ ಸಿನಿಮಾಗಳೂ ನಿರ್ಮಾಣವಾಗುತ್ತಲೇ ಇರಲಿಲ್ಲ. ಕೆಲವು ಸಂದರ್ಭಗಳಲ್ಲಿ ಬಹು ತಾರಾಗಣಕ್ಕಿಂತ ದೊಡ್ಡ ಬ್ಯಾನರ್ ಮತ್ತು ಕಥೆ ಮುಖ್ಯವಾಗುತ್ತದೆ ಎಂದು ಬುದ್ದಿವಂತಿಕೆಯ ಉತ್ತರ ನೀಡಿದಳು.

ತನಗೆ ಬಾಲಿವುಡ್‍ನಲ್ಲಿ ಸುಭದ್ರ ಸ್ಥಾನ ನೀಡಿರುವ ದಬ್ಬಾಂಗ್ ಸಿನಿಮಾದ ಮೂರನೇ ಭಾಗದ ಶೂಟಿಂಗ್ ಆರಂಭವಾಗಿರುವುದಕ್ಕೆ ಖುಷಿಯಾಗಿದೆ. ತವರು ಮನೆಗೆ ಬಂದಷ್ಟೇ ಸಂತಸವಾಗಿದೆ ಎಂದು ಮೋಹಕ ಕಿರುನಗೆ ಬೀರಿದಳು.

Share This With Your Friends

Related posts